ಬುದ್ಧನಾಗಲಾರೆ….
ನಾಗರಾಜ ಹರಪನಹಳ್ಳಿ
ಗಾಳಿಯ ಮುಗಿಲಲ್ಲಿ
ತೇಲಿದ ಮೋಡಗಳು
ಒಲವಿನ ಸರಿಗಮ ಹಾಡಿದವು
ದೂರದಲ್ಲಿದ್ದು ನೀನಾಡಿದ ಮಾತುಗಳು
ಮನದಲ್ಲಿ ಪ್ರೇಮ ಪಲ್ಲವಿಯಾದವು
ಸಿದ್ಧಾರ್ಥನಾಗಿಯೇ ಉಳಿಯುವೆ
ಬುದ್ಧನಾಗಲಾರೆ….
ನೀ ನಿದ್ರಿಸಿ ನನ್ನ ಕನಸು ಕಾಣುವಾಗ
ಕಾರಣ ಹೇಳದೇ ಹೋಗಲಾರೆ
ಮೋಕ್ಷದ ಬೆನ್ನು ಹತ್ತಲಾರೆ
ಬುದ್ಧನಾಗಲಾರೆ
ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!!
ಬಗೆಹರಿಯದ ಪ್ರಶ್ನೆಗಳಿಗೆ
ಉತ್ತರ ಹುಡುಕ ಹೊರಡುವುದೆಂದರೇನು?
ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ?
ಗರ್ಭದಲ್ಲಿ ಕೋಶ ಬೆಳೆದಂತೆ
ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ
ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ?
ಮೋಕ್ಷದ ಬೆನ್ನು ಹತ್ತಲಾರೆ
ಪ್ರೀತಿಯ ಹುಡುಕುತ್ತ…
*******
…..