ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಿವೇ ಅಷ್ಟಾಂಗ

Brown Religious God Statue in Tilt Shift Photography

ಶೃತಿ ಮೇಲುಸೀಮೆ

ಅಜ್ಞಾನದ ಅಂಧಕಾರದಲ್ಲೊಂದು
ಅರಿವಿನ ಅಂಕುರ
ಅಮ್ಮನ ಕನಸಿನಲ್ಲೇ
ಕರಿಯ ಹೂ ಮಾಲೆಯ ಪುರಸ್ಕಾರ

ಅಶಿತ ಮುನಿಯ ಕಂಬನಿಯ ಕುಂಚ
ಅಪ್ಪನ ಆಂತರಿಕ ತುಮುಲತೆಯ
ಶುದ್ಧ ವೈಶಾಖದ ಪೂರ್ಣಮಿಯಲಿ
ಅರಳಿದ ಅರಮನೆಯ ಕಮಲ

ಯಶೋಧರೆಯ ಮ್ಲಾಮತೆ
ರಾಹುಲನ ಪಿತ
ಚೆನ್ನನ ಮಾಲೀಕ
ಕಂಥಕನ ಕಾಂತಿಮತಿ ಈ ಸಿದ್ದಾರ್ಥ

ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು
ಸತ್ಯ ಅನ್ವೇಷಣೆಯ ಪರಿತ್ಯಾಗಿ
ಜ್ಞಾನಕ್ಕಾಗಿ ಪರಿತಪಿತ ವಿವೇಕಿ
ಜಗಕೆ ಶಾಂತಿ ಬೋಧಿಸಿದ ಯೋಗಿ

ಶುದ್ಧ ಚಾರಿತ್ರ್ಯದ ಮೂರ್ತಿ
ಮಂದಸ್ಮಿತದ ವದನದ ಕ್ರಾಂತಿ
ಧ್ಯಾನ, ಮೌನ, ಜೀವನ ಪ್ರೀತಿಯ ಪ್ರತೀಕ
ಅಷ್ಟಾಂಗ ಮಾರ್ಗದ ದರ್ಶಕ

ಮತ್ತೊಮ್ಮೆ ಕುದರೆಯೇರಿ
ಆಸೆ ,ಅಹಂಕಾರ ಮೀರಿ
ಹಿಂದಣ ಮುಂದಣ ಭಾವ ಸೀಳಿ
ಎಲ್ಲರ ಮನವ ಗೆಲ್ಲಲು
ನೀ ಬಾ ನಮ್ಮ ಬುದ್ಧ

*****

About The Author

Leave a Reply

You cannot copy content of this page

Scroll to Top