ಬುದ್ಧ ಪೂರ್ಣಿಮಾ ವಿಶೇಷ

ಆಸೆಯೇ ದು:ಖಕ್ಕೆ ಮೂಲ

Gautama Buddha

ಚಂದ್ರು ಪಿ.ಹಾಸನ

ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನ಻ಯೋಗಿಯ ಪ್ರಸಿದ್ಧ ತತ್ವ

ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ.

ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ  ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ತನ್ನಲ್ಲಿ ಅಡಗಿಸಿಕೊಂಡು, ಅಹಿಂಸೆಯ ಮಾರ್ಗ ಹಿಡಿದು,ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ, ಬೌದ್ಧ ಧರ್ಮದ ಸಂಸ್ಥಾಪಕ ಶ್ರೀ ಭಗವಾನ್ ಗೌತಮ ಬುದ್ಧರು.

 ಜನನ (ಕ್ರಿ ಪೂ ೫೫೭)

ಗೌತಮ ಬುದ್ಧರ ಹುಟ್ಟಿದ ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ ‘ಗೌತಮ’ನೆಂದು ಕರೆಯಲ್ಪಡುತ್ತಾರೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾರೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾರೆ. ಗೌತಮನಿಗೆ ‘ರಾಹುಲ’ ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ‘ದಿವ್ಯದರ್ಶನ’ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.

 ಸನ್ಯಾಸಿ ಜೀವನ ಮತ್ತು ಬೋಧನೆ

ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ನಾನೋದಯ ಪಡೆದುಕೊಂಡರು. ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು.

ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.)

ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.

 ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ.

ಅವುಗಳೆಂದರೆ: ೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿದೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದ ಗ್ರಂಥವಾಗಿದೆ. ೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. ೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶಾದೀಕರಿಸಿದ ಗ್ರಂಥವಾಗಿದೆ.

ಈಗೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೇ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾದ್ಯ. ಧರ್ಮವೆಂದರೆ  ಸತ್ಯದ ಬೆಳಕು ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು ಎಂದಿದ್ದಾರೆ.

ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಅದರೊಂದಿಗೆ  ಅಹಿಂಸಾ ಮಾರ್ಗ ಕರುಣೆ, ಅನುಕಂಪಗಳ ದಾರಿ ಹಿಡಿದು ಸಮಾಜ ಸುಧಾರಣೆಗಳನ್ನು ಮಾಡಿದ್ದರು. ಇಂತಹ ದಿವ್ಯ ಮಾರ್ಗ ದರ್ಶಕರು ಪ್ರತೀ ಸಹಸ್ರ ವರ್ಷಗಳಿಗೊಮ್ಮೆ ಉದಯವಾಗತಿದ್ದರೇ ಬಹುಶಃ ನೈತಿಕತೆ ಸಾತ್ವಿಕತೆ ಹೆಚ್ಚಿ ಅಪರಾಧ ಗಂಟು ಕಡಿತಗೊಳಿಸಬಹುದು.

*********

8 thoughts on “ಬುದ್ಧ ಪೂರ್ಣಿಮಾ ವಿಶೇಷ

  1. ಸಾಕಷ್ಟು ವಿಷಯಗಳನ್ನು ತಿಳಿಸಿದೀರ ಇಂತಹ ಉತ್ತಮ ಸಂದರ್ಭೋಚಿತ ಲೇಖನಗಳು ನಿಮ್ಮಿಂದ ಬರಲಿ ಶುಭಾಶಯಗಳು

  2. ಧನ್ಯವಾದಗಳು ಮೇಡಂ
    ತಮ್ಮ ಸಹಕಾರ ಹೀಗೆ ಇದ್ದರೆ ಖಂಡಿತ ಮುಂದುವರಿಸುತ್ತೇನೆ

  3. ತುಂಬಾನೆ ಮೌಲ್ಯಾಧಾರಿತ ವಿಷಯಗಳು ನಿಮ್ಮ ಬರಹಗಳಲ್ಲಿ ಮೂಡಿಬಂದಿದೆ. ಶುಭವಾಗಲಿ ಅಣ್ಣ…. ಅದ್ಭುತ ವಾಗಿದೆ. ಒಂದು ಅತ್ಯತ್ತಮವಾದ ಸಮಾಜದ ಸರ್ವರಿಗೂ ಅತ್ಯಮೂಲ್ಯ ವಿಷಯ ಇಲ್ಲಿ ತಿಳಿಸಿರುತ್ತೀರಿ. ಇನ್ನಷ್ಟು ಇಂತಹ ಮೌಲ್ಯಗಳು ಇಲ್ಲಿ ಮೂಡಿಬರಲಿ.

    ✍️ಸೂರಜ್ ಪೂಜಾರಿ ಮಾಳ
    ೯೯೦೨೦೨೮೭೧೯

Leave a Reply

Back To Top