Month: February 2020

ಕಾವ್ಯಯಾನ

ಇವನಾರವ ಇವನಾರವ ರಾಜು ದರಗಾದವರ ಅಂದು ಇವ ನಮ್ಮವ, ಇವ ನಮ್ಮವ ಅಂದವನು; ಇಂದು ಇವನಾರವ,ಇವನಾರವ ಎನ್ನುತಿರುವನಲ್ಲ….! ಅಂದೇ ಕೇಳಿದ್ದರೆ ? ನಮ್ಮ ಅಜ್ಜನೋ ಅವರ ಅಜ್ಜನೋ ಗುನುಗುತ್ತಿದ್ದ. ರಕ್ತ ಚೆಲ್ಲಿದ ಭೂಮಿ ಹೇಳುತ್ತಿತ್ತು. ಕೇಳುವುದಾದರೆ ಜಂಗು ಹಿಡಿದ ಬಂದೂಕು ಕೇಳು, ಎದೆ ಸೀಳಿ ಕುಡಿದ ರಕ್ತದಾವುದು…!? ಹರಿದು ಮೂಲೆ ಸೇರಿದ ಬೂಟನ್ನ ಕೇಳು ವದಿಕೆ ತಿಂದ ಕಾಯದಾವುದು..!? ಅವರಿವರೆನ್ನದೆ ಒಡಲಬಳ್ಳಿ ಹಬ್ಬಿದ ಮೂಲ ಸಿಗುವುದಾದರೂ ಯಾರಿಗೆ..? **************

ಕಾವ್ಯಯಾನ

ಬುದ್ಧನಾಗಲು ರೇಖಾ ವಿ.ಕಂಪ್ಲಿ ಬುದ್ಧನಾಗಲು ಬುದ್ಧನಾಗಲು ಬದ್ಧ ವೈರಾಗಿಯಾಬೇಕಿಲ್ಲ ಬದ್ಧ ವೈರಿಗಳನ್ನು ಕ್ಷಮಿಸಿದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಬೋಧಿ ವೃಕ್ಷದ ನೆರಳುಬೇಕಿಲ್ಲ ನಾನೆಂಬ ಅಂಧಕಾರದರಳು ತೆಗೆದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಶುದ್ಧ ವೈಶಾಖದಲ್ಲಿ ಹುಟ್ಟಬೇಕಿಲ್ಲ ಶುದ್ಧ ಪರಿಶುದ್ಧ ಮನಸ್ಸಿರಲು ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ರಾಜ್ಯ, ಸಂಸಾರ ಬಿಡಬೇಕಿಲ್ಲ ಸತ್ಸಂಗದ ವಿಚಾರಧಾರೆ ಸಾಕು ಬುದ್ಧನಾಗ ಬಹುದಲ್ಲವೇ? ****************

ಕಾವ್ಯಯಾನ

ಹೆದರುವುದಿಲ್ಲ! ವಿಜಯಶ್ರೀ ಹಾಲಾಡಿ ಹೆದರುವುದಿಲ್ಲ ನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜಲ್ ಸತ್ಯ ಎಂದಿನಂತೆ ಬೆತ್ತಲೆಯಾಗೇ ಇದೆ ಸುಳ್ಳು ವೇಷ ಕಳಚುವ ಕಾಲ ಬಂದಿದೆ ಸುಳ್ಳೀಗ ಸತ್ಯವಾಯಿತು ಎಂದರ್ಥವಲ್ಲ ಹುಸಿಯ ಅಸಲಿಯತ್ತು ಸಾಬೀತಾಗಿದೆ ಎಷ್ಟೊಂದು ಬಣ್ಣಬಣ್ಣದ ವೇಷಗಳು ಇಲ್ಲಿ ತೊಗಲುಗೊಂಬೆಗಳಿಗೆ ಜೀವ ಬಂದಂತಿದೆ ಹೊಸ್ತಿಲಲ್ಲಿ ಹುಲ್ಲು ತುಂಬಿದೆ ಎಂದರು ಅಣ್ಣ ಮಾಡುವುದೇನು ಕಣ್ಣಲ್ಲೂ ರಜ ತುಂಬಿದೆ ನೆರಳಿನೊಂದಿಗೆ ಎಷ್ಟೆಂದು ಗುದ್ದಾಟ ಗೆಳೆಯ ನಿಜದ ನೇರಕೆ ತೆರೆದು ಎದೆಯ ನಡೆಸಬೇಕಿದೆ ***********

ಕಾವ್ಯಯಾನ

ಮಾನವರು ಮಾಲತಿ ಹೆಗಡೆ ಮಾನವರು! ತಾಳು ಅರಳಿಸಿ ನಗಿಸುವೆ ನನ್ನೊಡಲ ಮಗುವೆ ಎನುವ ಗಿಡಗಳ ಸಂಭ್ರಮದರಿವೆಲ್ಲಿದೆ ಹೂವಾಡಗಿತ್ತಿಗೆ.. ನಾಳೆಗರಳುವ ಹೂವ ಇಂದೇ ಕೊಯ್ದ ಬಳ್ಳಿಯಲಿ ಕಟ್ಟಿ ಮಾಲೆ,ದಂಡೆಯನ್ನಾಗಿಸಿ ಬುಟ್ಟಿ ತುಂಬಿ ಬೆಳಂಬೆಳಿಗ್ಗೆ ಅದನು ನೆತ್ತಿಗೇರಿಸಿ ‘ಮೊಲ್ಲೆ ಮಲ್ಗಿ ಮಾಲೇರಿ’ ರಾಗವೆಳೆಯುತ್ತ ಊರೆಲ್ಲ ಸುತ್ತದಿದ್ದರೆ ಅವಳ ಮನೆಯೊಲೆ ಉರಿಯುವುದಿಲ್ಲ… ಕೆಚ್ಚಲು ತುಂಬಿದ ಹಾಲ ಕರುವಿಗುಣಿಸಬೇಕೆಂಬ ಹಸುವಿನ ಮಮತೆಯ ಹಂಬಲದರಿವೆಲ್ಲಿ ಗೋವಳನಿಗೆ ಹಿಡಿಹುಲ್ಲು ಕರುವಿಗಿತ್ತು ಹಸುವಿನ ಹಾಲನೆಲ್ಲ ಹಿಂಡಿ ಕ್ಯಾನು ತುಂಬಿ ‘ಹಾಲರೀ ಹಾಲ’ ಎನ್ನುತ್ತ ವರ್ತನೆ ಮನೆಗಳ ಪಾತ್ರೆಗಳಿಗೆ […]

ಕಾವ್ಯಯಾನ

ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಡಾ.ಗೋವಿಂದ ಹೆಗಡೆ ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ. ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ […]

ಕಾವ್ಯಯಾನ

ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********

ಕಾವ್ಯಯಾನ

ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, […]

ಪ್ರಸ್ತುತ

ನಿರುದ್ಯೋಗದ ವಿರುದ್ದ ಹೋರಾಟ ಗಣೇಶಭಟ್ ಶಿರಸಿ ನಿರುದ್ಯೋಗದ ವಿರುದ್ಧ ಹೋರಾಟ….. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ […]

Back To Top