ಕಾವ್ಯಯಾನ

ಇವನಾರವ ಇವನಾರವ

Image result for photos of abstract paintings

ರಾಜು ದರಗಾದವರ

ಅಂದು ಇವ ನಮ್ಮವ,
ಇವ ನಮ್ಮವ ಅಂದವನು;
ಇಂದು ಇವನಾರವ,ಇವನಾರವ
ಎನ್ನುತಿರುವನಲ್ಲ….!
ಅಂದೇ ಕೇಳಿದ್ದರೆ ?
ನಮ್ಮ ಅಜ್ಜನೋ ಅವರ ಅಜ್ಜನೋ
ಗುನುಗುತ್ತಿದ್ದ.
ರಕ್ತ ಚೆಲ್ಲಿದ ಭೂಮಿ
ಹೇಳುತ್ತಿತ್ತು.
ಕೇಳುವುದಾದರೆ
ಜಂಗು ಹಿಡಿದ ಬಂದೂಕು ಕೇಳು,
ಎದೆ ಸೀಳಿ ಕುಡಿದ ರಕ್ತದಾವುದು…!?
ಹರಿದು ಮೂಲೆ ಸೇರಿದ ಬೂಟನ್ನ ಕೇಳು
ವದಿಕೆ ತಿಂದ ಕಾಯದಾವುದು..!?
ಅವರಿವರೆನ್ನದೆ ಒಡಲಬಳ್ಳಿ
ಹಬ್ಬಿದ ಮೂಲ ಸಿಗುವುದಾದರೂ
ಯಾರಿಗೆ..?

**************

Leave a Reply

Back To Top