ಕಾವ್ಯಯಾನ

ಬಡವರ ಸ್ವಾತಂತ್ರ್ಯ

Image result for photos of poor

ರಾಜು ದರ್ಗಾದವರ

ಬಡವರ ಸ್ವಾತಂತ್ರ್ಯ

ಇನ್ನೆಷ್ಟು ಜೀವಬೇಕು ಕೇಳು
ಸ್ವಾತಂತ್ರ್ಯವೊಂದು ಸಿಗಲಿ,
ನಾಡಮಕ್ಕಳ ಬದುಕಿಗೆ;

ಬೀಸಿರಕ್ತ ನಿನ್ನ ಬೇಡಿಕೆಯಾದರೆ
ತಗೆದು ಬಿಡು ಖಡ್ಗವನ್ನು
ತುಂಡರಸಿ ಕೊಡುವೆ
ನಿನ್ನ ಪಾದಗಳಿಗೆ

ಸ್ವಾತಂತ್ರ್ಯ ಸಿಗದ ಬದುಕು
ಬೇಡವಾಗಿ ನರಕವೇ
ಕಂಣ್ತುಂಬಿ ಹರಿದಿದೆ;
ಬಡವನ ಮರಗು
ತರುವುದಲ್ಲ ಮೆರಗು
ಆಳಿದ್ದು ಸಾಕು,ಅರಸನಾಗಬೇಡ
ಬಡವರ ಬದುಕಾಗು..

**********

Leave a Reply

Back To Top