ಕಾವ್ಯಯಾನ

ಬುದ್ಧನಾಗಲು

Blue Buddha Ceramic Head Figurine

ರೇಖಾ ವಿ.ಕಂಪ್ಲಿ

ಬುದ್ಧನಾಗಲು

ಬುದ್ಧನಾಗಲು
ಬದ್ಧ ವೈರಾಗಿಯಾಬೇಕಿಲ್ಲ
ಬದ್ಧ ವೈರಿಗಳನ್ನು ಕ್ಷಮಿಸಿದರೆ
ಸಾಕು ಬುದ್ಧನಾಗ ಬಹುದಲ್ಲವೇ?

ಬುದ್ಧನಾಗಲು
ಬೋಧಿ ವೃಕ್ಷದ ನೆರಳುಬೇಕಿಲ್ಲ
ನಾನೆಂಬ ಅಂಧಕಾರದರಳು ತೆಗೆದರೆ
ಸಾಕು ಬುದ್ಧನಾಗ ಬಹುದಲ್ಲವೇ?

ಬುದ್ಧನಾಗಲು
ಶುದ್ಧ ವೈಶಾಖದಲ್ಲಿ ಹುಟ್ಟಬೇಕಿಲ್ಲ
ಶುದ್ಧ ಪರಿಶುದ್ಧ ಮನಸ್ಸಿರಲು
ಸಾಕು ಬುದ್ಧನಾಗ ಬಹುದಲ್ಲವೇ?

ಬುದ್ಧನಾಗಲು
ರಾಜ್ಯ, ಸಂಸಾರ ಬಿಡಬೇಕಿಲ್ಲ
ಸತ್ಸಂಗದ ವಿಚಾರಧಾರೆ
ಸಾಕು ಬುದ್ಧನಾಗ ಬಹುದಲ್ಲವೇ?

****************

2 thoughts on “ಕಾವ್ಯಯಾನ

Leave a Reply

Back To Top