Day: February 8, 2020

ನಾನು ಕಂಡ ಹಿರಿಯರು

ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. ಡಾ.ಗೋವಿಂದ ಹೆಗಡೆ ಇಂದು ಫೆಬ್ರವರಿ ೮, ಹಲವು ರೀತಿಗಳಲ್ಲಿ ಕನ್ನಡದ ತೇರನ್ನು ಕಟ್ಟಿದ ಪ್ರೊ ಎಸ್ ವಿ ಪರಮೇಶ್ವರ ಭಟ್ಟರ ಜನ್ಮದಿನ. ಆ ಪ್ರಯುಕ್ತ ಕನ್ನಡದ ಕಟ್ಟಾಳುವಿಗೆ ನಮನಗಳನ್ನು ಸಲ್ಲಿಸುತ್ತ ಅವರ ನೆನಪಿನ ಈ ಬರಹ. ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. (೧೯೧೪-೨೦೦೦) ೧೯೮೫-೮೯ರವರೆಗೆ , ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಗ ಅಲ್ಲಿನ ತಾತಯ್ಯನವರ ವಿದ್ಯಾರ್ಥಿನಿಲಯ ‘ಅನಾಥಾಲಯ’ದಲ್ಲಿ ವಾಸವಾಗಿದ್ದೆ. ಆರ್ಥಿಕವಾಗಿ […]

ಲಹರಿ

ಗುಬ್ಬಿಯ ಅಳಲು ತಾರಾ ಸತ್ಯನಾರಾಯಣ “ಗುಬ್ಬಿಯ ಅಳಲು”                ನನ್ನ ಸಂಸಾರದ ಹೊಟ್ಟೆ ತುಂಬಿಸಲು ನಾನು ದೂರ ಬಹುದೂರ ಬಂದರೂ ……ಎಲ್ಲಿಯೂ ನನಗೆ ಹಣ್ಣುಗಳಿರುವ ಮರಗಳೇ ಕಾಣುತ್ತಿಲ್ಲ.ಎಲ್ಲಿ ನೋಡಿದರೂ ಬರೀ ಕಟ್ಟಡ ಕೆಲವಂತೂ ಗಗನಚುಂಬಿ ಕಟ್ಟಡಗಳು ಕೆಳಗಡೆ ನೋಡಿದರೆ ಟಾರಿನ ರಸ್ತೆಗಳು ಹೋಗಲಿ ಮನೆಗಳಿರುವ ಕಡೆಯೇ ಹೋಗೋಣವೆಂದರೆ ಅಲ್ಲೂ ಕೂಡ ಮನೆಯ ಸುತ್ತ ಮುತ್ತ ಸಿಮೆಂಟಿನಿಂದ ಕೂಡಿದ ನೆಲ. ಮನೆಯ ಮುಂಭಾಗದಲ್ಲಿ ಮನೆಯ ಹಿಂಭಾಗದಲ್ಲಿ ಗಿಡಮರಗಳಿಲ್ಲ. ಎರಡು  ಮೂರು […]

ಕಾವ್ಯಯಾನ

ಏಕೆ ಕಾಡುವೆ ಶಾಂತಾ ಜೆ ಅಳದಂಗಡಿ ಏಕೆ ಕಾಡುವೆ ಮಾರುದ್ದ ಒಲವಿನೋಲೆ ಬರೆದು ಹೃದಯದೊಳಗೆ ನನ್ನ ಸೆಳೆದು ತಡವಿಲ್ಲದೆ ತಾಳಿಯ ಬಿಗಿದು ದೂರವಾದೆ ಬಾಳಿಗಂತ್ಯ ಬರೆದು ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು ಗಾಲಿಕಳಚಿದ ಗಾಡಿ ಈ ಬಾಳು ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ ಅಳಿಸಲಾಗದ ಪ್ರೇಮಬರಹ ಬರೆದು ಹೂ ದುಂಬಿಗಳ ಒಲವಿನಾಟದಿ ಕಾಣುವೆ ನನ್ನ ನಿನ್ನ ಅನುಬಂಧ ಏಕೆ ಸರಿದೆ ನೇಪಥ್ಯಕೆ ಅವಸರದೆ ಮನೋಮಂದಿರಕೆ ಒಡೆಯನಾಗಿದ್ದೆ ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ ಬಂದೇ ಬರುವೆ ಅತಿಶೀಘ್ರದಲ್ಲಿ ರಕ್ತಧಮನಿಗಳೆ ಬಿರಿವಂಥ […]

ಕಾವ್ಯಯಾನ

ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********

Back To Top