ಅವ್ಯಕ್ತಳ ಅಂಗಳದಿಂದ
ಅವ್ಯಕ್ತಳ ಅಂಗಳದಿಂದ ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ […]
ಕವಿತೆ ಕಾರ್ನರ್
ಮೂರ್ಖರು ಕು.ಸ.ಮಧುಸೂದನ ಮೂರ್ಖರುಕೋವಿಯಿಂದ ಕ್ರಾಂತಿ ಮಾಡುತ್ತೇವೆಂದು ಹೊರಟಮೂರ್ಖ ನಕ್ಸಲರು! ಧರ್ಮದಆಧಾರದ ಮೇಲೆದೇಶ ಕಟ್ಟುತ್ತೇವೆಂದು ಹೊರಟಮೂರ್ಖಮತಾಂಧರು! ಜಾತ್ಯಾತೀತಅಂತ ಹೇಳುತ್ತಾ ಜನಗಳ ಒಡೆಯುತ್ತಿರುವ ಹುಸಿಕ್ರಾಂತಿಕಾರಿಗಳು! ಇವರುಗಳ ನಡುವೆಇದ್ಯಾವ ಶಬ್ದಗಳನ್ನೂ ಕೇಳಿರದಬಡವರುತಣ್ಣಗೆಹೊಲಗದ್ದೆಗಳಲ್ಲಿಕಾರ್ಖಾನೆಗಳಲ್ಲಿಕೆಲಸ ಮಾಡುತ್ತಾದೇಶ ಕಟ್ಟುತ್ತಿದ್ದಾರೆ ಭಾಷಣಗಳ ಬೀಕರತೆಯಿಂದ ದೂರವುಳಿದು! *********
ಕಾವ್ಯಯಾನ
ಮಾಗಿಯ ಪದ್ಯ ಮಾಗಿಯ ಪದ್ಯ ಮಾಗಿಯ ಪದ್ಯ ಕೌದಿ ಕವುಚಿ ಕಂಬಳಿ ಹುಳುವಾದರೂ ಅಡಗಲೊಲ್ಲದ ಚಳಿ ಬೆಳಗಾಗ ಬರುವ ಚುರುಕು ಬಿಸಿಲಿನ ನೆನಪೇ ಬಿಸಿ ಹುಟ್ಟಿಸ ಬಲ್ಲದು ಒಳಗೆ ಉರಿ ಮುಖದ ಸೂರ್ಯ, ನಿನ್ನ ಆಗಮನ ಅದೆಷ್ಟು ಬೆಚ್ಚಗೆ , ಜಡ ಮಾಗಿಗೆ!!! *******************
ಕಾವ್ಯಯಾನ
ಸೋತ ಪ್ರೇಮಿ ಪ್ಯಾರಿಸುತ ಸೋತಪ್ರೇಮಿ ನಾನು ಸಹಿಸಲಾರದ ಸೋಲಿನೊಂದಿಗೆ ನಿಂತಿದ್ದೇನೆ. ನೀ ಬಿಟ್ಟು ಹೋದ ದಾರಿಯಲಿ ಒಬ್ಬಂಟಿಯಾಗಿ ಅಷ್ಟೇ…! ಇನ್ನೆಷ್ಟು ಬದುಕು ಉಳಿದಿದೆ ಕಾಲಮಾನ ದೂಡಲು…! ನಾವಿಬ್ಬರು ಕೂಡಿ ತೆಗಿಸಿದ ಫೋಟೋವನ್ನ ಕಟ್ಟಾಕಿಸಿ ಜೋಪಾನವಾಗಿ ಇಡಬಲ್ಲೆ…! ಆದರೆ ..? ನಿನ್ನ ಮೇಲಿರುವ ಪ್ರೀತಿ ಯಾವುದರಲ್ಲಿ ಇಡಲಿ…? ಇದ್ದೊಂದು ಹೃದಯ ಚುಚ್ಚಿ ನೀನೇ ಹಾಳು ಮಾಡಿದ್ದು ಆಗಿದೆ… ನಿನ್ನೆಲ್ಲ ಸೌಂದರ್ಯವನ್ನ ಕಣ್ಣಲ್ಲಿ ಜೋಪನವಾಗಿಸಿದ್ದೆ. ನೀ ಕೊಟ್ಟ ನೋವಿಗೆ ಕಣ್ಣೀರಾಗಿ ಹರಿದು ಹೋಗಿದೆ. ಹೇಳಿಹೋಗಬೇಕಿತ್ತು. ಇಲ್ಲವೇ …? ಮುನ್ಸೂಚನೆ ಕೊಟ್ಟಿದ್ದರೆ..? […]
ಸ್ವಾತ್ಮಗತ
ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಕೆ.ಶಿವು ಲಕ್ಕಣ್ಣವರ ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಹಾಗೂ ಅಪ್ಪನ ಕುರಿತ ಇವರ ಮಗಳು ಭಾರತಿ ಮೋಹನ ಕೋಟಿಯವರ ಆಲಾಪನೆಯೂ..!! ಕನ್ನಡದ ಪ್ರಸಿದ್ಧ ಗಜಲ್ ಕವಿ. ಇವರು ಕನ್ನಡದ ಹೆಸರಾಂತ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು. ಇವರು ೨೦೦೬ರಲ್ಲಿ ಬೀದರದಲ್ಲಿ ಜರುಗಿದ ೭೩ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. […]