Day: February 29, 2020

ಕಾವ್ಯಯಾನ

ದಂಗೆ. ಜ್ಯೋತಿ ಡಿ.ಬೊಮ್ಮಾ. ಶಾಂತಿದೂತ ಪಾರಿವಾಳವೇ ಇನಿತು ಹೇಳಿ ಬಾ ಅವರಿಗೆ ದ್ವೇಷ ತುಂಬಿದ ಎದೆಗೂಡೊಳಗೆ ಕೊಂಚ ಪ್ರೀತಿಯ ಸಿಂಚನ ಮೂಡಿಸಲು.. ಪ್ರೀತಿಯ ಮೇಘದೂತನೆ ಸ್ವಲ್ಪ ಅರುಹಿ ಬಿಡು ಅವರನ್ನು ಸೇಡಿನ ಜ್ವಾಲೆಯಿಂದ ಒಬ್ಬರನ್ನೊಬ್ಬರು ದಹಿಸಿಕೊಳ್ಳದಿರೆಂದು.. ಎಲ್ಲೆಡೆ ಸಮನಾಗಿ ಹಬ್ಬಿದ ಬೆಳದಿಂಗಳೆ ತಿಳಿಸಿ ಹೇಳು ಅವರಿಗೆ ಹಿಂದಿನಂತೆ ಮುಂದೆಯೂ ಇದು ರಾಮ ರಹೀಮರ ನಾಡೇ ಎಂದು.. ಎಲ್ಲರಿಗೂ ಬೆಳಕನ್ನು ಹಂಚುವ ಬಿಸಿಲೆ ಅರ್ಥ ಮಾಡಿಸು ಅವರಿಗೆ ಅಮಾಯಕರನ್ನೂ ಪ್ರಚೋದಿಸಿ ದಂಗೆ ಎಬ್ಬಿಸಿ ಶಾಂತಿ ಕದಡುವ ಆಗಂತುಕರಿದ್ದಾರೆಂದು.. ನಾಲ್ಕು […]

ಕಾವ್ಯಯಾನ

ಗಝಲ್ ಸುಜಾತಾ ರವೀಶ್ ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ  ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ  ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ?  ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ  ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ   ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ […]

ಕಾವ್ಯಯಾನ

ಸಲುಗೆ ಮೀರಿ ಬಂದಾಕಿ ರೇಖಾ ವಿ.ಕಂಪ್ಲಿ ಸಲುಗೆ ಮೀರಿ ಬಂದಾಕಿ ಮಲ್ಲಿಗೆ ಮುಡಿದು ನನ್ನ ಮೆಲ್ಲನೆ ತಬ್ಬವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ…….. ಮನಸ್ಸೆಂಬ ಗುಡಿಯಲಿ ನನ್ನ ಪೂಜಿಸಿವಾಕಿ ಹಗಲಿರುಳು ನೋಡದೆ ದುಡಿಯುವಾಕಿ ಜೀವದ ಹಾದಿಬೆಳ್ಚುಕ್ಕಿ ಮೂಡಿಸಿದಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ತನ್ನವರ ಮರೆತು ನನ್ನ ನಂಬಿದಾಕಿ ನನ್ನ ಹುಚ್ಚಿಹಾಂಗ ಪ್ರೀತಿಸುವಾಕಿ ಗುಡಿ ಗೋಪುರಗಳ ಸುತ್ತಿ ನನಗಾಗಿ ಪ್ರಾಥಿ೯ಸುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ಹಾಗಾಗ ಗುದ್ದಾಡಿ ನನ್ನ ಕ್ಷಮಿಸುವಾಕಿ ನನಗಿಂತ […]

ಪ್ರಸ್ತುತ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ಗಣೇಶಭಟ್,ಶಿರಸಿ ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪಡೆದ ದೊಡ್ಡ ಗೆಲುವು, ಆ ಪಕ್ಷದ ನೇತಾರ ಅರವಿಂದ ಕೇಜ್ರಿವಾಲಾರ ಅಭಿಮಾನಿಗಳ, ಅವರ ಕ್ರೇಝಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕೇಜ್ರಿವಾಲಾರವರೇ ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಭಾವನೆ ಇಂಥವರಲ್ಲಿ ಬಲಿಯುತ್ತಿದೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಿದ್ದು ದೊಡ್ಡ ಸಾಧನೆ ಎಂದೇ ಕೊಂಡಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಹಲವು ಕಾರಣಗಳನ್ನು ಮಾಧ್ಯಮ ತಜ್ಞರು ನೀಡಿದ್ದಾರೆ. […]

ಕಥಾಯಾನ

ಕನಸು ತಾರಾ ಸತ್ಯನಾರಾಯಣ್ ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ  ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ..‌‌‌‌‌..ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ […]

Back To Top