ಕಾವ್ಯಯಾನ
ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು […]
ಕಾವ್ಯಯಾನ
ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು […]
ಕವಿತೆ ಕಾರ್ನರ್
ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ ಕು.ಸ.ಮದುಸೂದನ ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ಬರೆಸಿಕೊಳ್ಳಲು ಕವಿತೆ ಒಪ್ಪದಿದ್ದಾಗ ಗದ್ಯದತ್ತ ಮುಖ ಮಾಡಲು ಮನಸು ಒಲ್ಲೆಂದಾಗಲೆಲ್ಲ ಅವನು ಮಾಡುತ್ತಿದ್ದುದು ಒಂದೇ ಕೆಲಸ ಅವಳಿಗೆ ಪ್ರೆಮಪತ್ರಗಳನ್ನು ಬರೆಯುತ್ತಿದ್ದು. ಅವನೇನು ಆ ಪತ್ರಗಳನ್ನು ಪ್ರಿಯೆ ಎಂದೊ ಇಲ್ಲಾ ಅವಳ ಹೆಸರಿನಿದಲೋ ಶುರು ಮಾಡುತ್ತಿರಲಿಲ್ಲ ಪ್ರತಿ ಪತ್ರವೂ ಹಿಂದಿನ ಪತ್ರದ ಮುಂದುವರಿಕೆಯಂತಿರುತ್ತಿತ್ತು ಅಲ್ಲಿಯೂ ಅವನೇನು ಅವಳನ್ನು ಚಿನ್ನ ರನ್ನ ಎಂದು ಮುದ್ದಿಸುತ್ತಿರಲಿಲ್ಲ. ಕಳೆದ ರಾತ್ರಿಯ ತನ್ನ ಒಂಟಿತನದ ಬಗ್ಗೆ, […]