Day: February 1, 2020

ಕಾವ್ಯಯಾನ

ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********

ಕಾವ್ಯಯಾನ

ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, […]

ಪ್ರಸ್ತುತ

ನಿರುದ್ಯೋಗದ ವಿರುದ್ದ ಹೋರಾಟ ಗಣೇಶಭಟ್ ಶಿರಸಿ ನಿರುದ್ಯೋಗದ ವಿರುದ್ಧ ಹೋರಾಟ….. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ […]

Back To Top