Day: February 23, 2020

ಕವಿತೆ ಕಾರ್ನರ್

ಬಾ ಮಗುವೆ ಬಾ! ಕು.ಸ.ಮಧುಸೂದನ ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರುಮತ್ತುನಾನೇನು? ಯಾವ ದಾರಿಯೂ ನನ್ನದಾಗಲಿಲ್ಲಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರುಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರುಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವುಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯಎಂದು […]

ಪ್ರಸ್ತುತ

ಶಿವ ಒಂದುವಿಶ್ಲೇಷಣೆ ಗಣೇಶ ಭಟ್ ಶಿರಸಿ ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ. ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ […]

ಕಾವ್ಯಯಾನ

ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ […]

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

Back To Top