ಕಾವ್ಯಯಾನ
ಬಾನಾಡಿಗಳೇ ಕೇಳಿ ಸಂಜಯ್ ಮಹಾಜನ ಬಾನಾಡಿಗಳೇ ಕೇಳಿ ಈ ವಿಶಾಲ ನೀಲಿ ಆಗಸ ನಿಮ್ಮದು ಈ ತಂಗಾಳಿಯ ಸ್ಪರ್ಶ ನಿಮ್ಮದು ಈ ಶಾಂತ ಸಮುದ್ರ ನಿಮ್ಮದು ಈ ಹಸಿರು ಹೊದಿಕೆ ನಿಮ್ಮದು ಈ ಹೂವ ಕಂಪು ನಿಮ್ಮದು ಈ ಹಣ್ಣ ಸಿಹಿ ನಿಮ್ಮದು ಈ ಸಿರಿಧಾನ್ಯ ನಿಮ್ಮದು ಈ ಪ್ರಕೃತಿಯ ಸರ್ವ ಸ್ವಭಗು ನಿಮ್ಮದು ಆದೆರೆ..? ಇದನ್ನೆಲ್ಲ ನಿಮ್ಮಿಂದ ಕಸಿದುಕೊಳ್ಳುವ ಸ್ವಾರ್ತ, ಕ್ರೋಧ, ಕಷ್ಠಾಗ್ನಿಯ ಮನಸ್ಸುಳ್ಳ ಮಾನವ ನಿನ್ನವನಲ್ಲಾ *********
ಕಾವ್ಯಯಾನ
ತೆನೆ ರಾಮಾಂಜಿನಯ್ಯ ವಿ. ತೆನೆ ಅಪ್ಪ ಸಣ್ಣರೈತ. ಗಿಳಿ,ಅಳಿಲು,ಕಾಗೆಗಳ ಹಾವಳಿ ಸದಾ ಇದ್ದೇ ಇರುತ್ತಿತ್ತು; ಇದ್ದ ಒಂದೂವರೆ ಎಕರೆಯಲ್ಲಿ ಬೆಳೆಯುತ್ತಿದ್ದ ಜೋಳಕ್ಕೆ! ‘ಬೇಳೆಕಾಳುಗಳ ರಾಣಿ’ ಇವಳು! ಉದ್ದ ಜಡೆಯ ನಾರಿ, ಹಾಲುಕ್ಕಿಸುವ ಶೋಡಷಿ, ‘ಟಸೆಲ್ ಕೂದಲುಳ್ಳ ಗಂಡು’ ಇವಳು! ಅರೆ, ಇವಳೇನು ಜೀನ್ಸ್ ಗಳ ವ್ಯತ್ಯಾಸದಂತ ಮಂಗಳಮುಖಿಯಲ್ಲ. ಗಿಳಿ ಪ್ರಿಯೆ! ನಮ್ಮೂರಿನ ಮಲ್ಲಮ್ಮಾ, ಮುನೆಮ್ಮಾ ಹುಲ್ಲಿಗಂತ ಬಂದು ತೆನೆ ಮುರಿದು ರವಿಕೆಯೊಳಗೆ ಅಡಗಿಸಿದಾಗ, ಎದೆ ಮುಂದೆ ಉಬ್ಬುತ್ತಿತ್ತು ಆಗ ಅಲ್ಲಿ ‘ಟಸೆಲ್’ ಉದುರುತ್ತಿತ್ತು! ಕೆಲವೊಮ್ಮೆ ತೆನೆ ಬೆತ್ತಲಾಗಿ […]
ಕಾವ್ಯಯಾನ
ಗಝಲ್ ದಾಕ್ಷಾಯಣಿ ವೀ ಹುಡೇದ. ಗಜಲ್ ಕರಗಿ ನೀರಾದ ನೆನಪುಗಳಲಿ ಚಂದ್ರನ ಹುಡುಕುವುದನು ನಿಲ್ಲಿಸು ಸಖಿನಿರ್ಜೀವ ದಿಂಬಿನೊಡನೆ ಮಾತಾಡಿ ನೋವ ಕಳೆಯುವುದನು ನಿಲ್ಲಿಸು ಸಖಿ ಜಗಕೆ ತಿಳಿದೀತೆಂದು ಕದವಿಕ್ಕಿ ಸದ್ದಿಲ್ಲದೇ ಅತ್ತ ಘಳಿಗೆಗಳ ಲೆಕ್ಕವಿಟ್ಟಿಲ್ಲ ಯಾರೂಕುದಿವ ಮನಸಿಗೆ ಕದ್ದು ಅಳುವ ರೂಢಿಯನು ನಿಲ್ಲಿಸು ಸಖಿ ಅತ್ತು ಹಗುರಾಗು,ಬಚ್ಚಿಟ್ಟ ಸತ್ಯಗಳು ಬೆತ್ತಲಾಗಲಿಅವನ ವಂಚನೆಗಳಿಗೆ ಪರದೆ ಹಾಕುವುದನು ನಿಲ್ಲಿಸು ಸಖಿ ಸಖನ ಲೋಕದಲಿ ಜಾಗ ಹುಡುಕುವ ಪ್ರಯತ್ನ ಮೂರ್ಖತನದ್ದುರಮಿಸಲಿ ಎಂದು ಬೆನ್ನು ಬಿದ್ದು ಕಾಡುವುದನು ನಿಲ್ಲಿಸು ಸಖಿ. ಸಖನ ಕಣ್ಣುಗಳಲ್ಲಿ […]
ಅನುವಾದ ಸಂಗಾತಿ
ಜುಲೈನ ಗಸಗಸೆಯ ಹೂಗಳು ಮೂಲ: ಸಿಲ್ವಯಾ ಪ್ಲಾತ್(ಅಮೇರಿಕಾ ಕವಿ) ಕನ್ನಡಕ್ಕೆ ಕಮಲಾಕರ ಕಡವೆ ಜುಲೈನ ಗಸಗಸೆಯ ಹೂಗಳು ಪುಟ್ಟ ಗಸಗಸೆಯ ಹೂವೇ, ಪುಟ್ಟ ನರಕದ ಜ್ವಾಲೆಯೇನೀನು ಏನೂ ಹಾನಿ ಮಾಡೆಯೇನು? ನೀ ಕಂಪಿಸುವಿ, ನಿನ್ನ ಮುಟ್ಟಲಾರೆ ನಾನುಜ್ವಾಲೆಗಳ ನಡುವೆ ಕೈ ಇಡುವೆ ನಾನು. ಏನೂ ಸುಡುತ್ತಿಲ್ಲ ನಿನ್ನ ನೋಡುವುದರಲ್ಲೇ ನಿತ್ರಾಣನಾದೆ ನಾನುಹಾಗೆ ಕಂಪಿಸುತ್ತ, ಸುಕ್ಕುಗಟ್ಟಿ, ಕಡು ಕೆಂಪಾಗಿ, ಬಾಯೊಳಗಿನ ಚರ್ಮದಂತೆ ಬಾಯಿಯೊ ಅಷ್ಟೇ ರಕ್ತರಂಜಿತರಕ್ತಮಯ ಲಂಗದಂತೆ! ಮುಟ್ಟಲಾರೆ ಆ ಹೊಗೆಯ ನಾನುಎಲ್ಲಿ ನಿನ್ನ ಮಾದಕತೆ, ನಿನ್ನ ವಾಕರಿಕೆ […]
ಕಾವ್ಯಯಾನ
ಸುಡುಗಾಡು ರಾಜು ದರಗಾದವರ ಸುಡುಗಾಡು ನೀನೆಷ್ಟು ಸಹೃದಯಿ, ಭೇದಭಾವವಿಲ್ಲದ ನಿನ್ನಲ್ಲಿ ಅದೆಂತಹ ತಿಳಿಮೌನ. ಮೇಲುಕೀಳು ಕಾಣದ ನಿನ್ನಲ್ಲಿ ಹೋಲಿಕೆಗೆ ಸಿಗದ ಐಕ್ಯತೆ. ದೊಡ್ಡವ ಚಿಕ್ಕವ ಅನ್ನೋ ತಾರತಮ್ಯವಿಲ್ಲದ, ಎಲ್ಲರನ್ನು ಸಮಾನಭಾವದಿಂದ ಸ್ವಾಗತಿಸುವ ನಿನ್ನದು ಅದೆಂತಹ ಧರ್ಮ…! ವೀರರನ್ನು ,ಹೇಡಿಗಳನ್ನು ಪುಣ್ಯವಂತರನ್ನು,ಪಾಪಿಗಳನ್ನು ಬೇರ್ಪಡಿಸುವ ಬುದ್ಧಿಯೆಂತು ಇಲ್ಲ. ಹೆಣ್ಣು,ಗಂಡು ಒಂದೇ ಎಂದು ಸಮಾನಕಾಣೋ ಹೃದಯವಂತಿಕೆ ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು ಸಾಧ್ಯ ಹೇಳು…? ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…! ********
ಹಾಸ್ಯಲೋಕ
ನಾಯಿ ಬೇಕಾ ನಾಯಿ! ತಾರಾ ಸತ್ಯನಾರಾಯಣ ನಾಯಿ ಬೇಕಾ ನಾಯಿ! ನನ್ನ ನಾಲ್ಕು ವರ್ಷದ ಮಗಳು ಸೋನುಗೆ ನಾಯಿ ಕಂಡರೆ ತುಂಬಾ ಇಷ್ಟ.ಎಲ್ಲೇ ಹೋಗ್ತಾ ಇದ್ದರೂ……… ಬೀದಿ ನಲ್ಲಿ ಯಾವ ನಾಯಿ ನೋಡಿದರೂ……. .ನೋಡುತ್ತಾ ನಿಂತುಬಿಡುತ್ತಿದ್ದಳು.ಆ ಸ್ಥಳದಲ್ಲೇ ನಂಗೂ ನಾಯಿಮರಿಬೇಕು ತಂದುಕೊಡು ಅಂತ ಹಠ ಮಾಡುತ್ತಿದ್ದಳು. ಇವಳ ಜೊತೆ ನನ್ನ ಹೆಂಡತಿ ಬೇರೆ, “ನೋಡಿ ಮಗು ನಾಯಿಮರಿ ಬೇಕು ಅಂತ ಎಷ್ಟು ಹಠ ಮಾಡುತ್ತಾಳೆ ಅವಳ ಜೊತೆಗೆ ಒಂದು ನಾಯಿಮರಿ ಇದ್ದರೆ ಅವಳ ಪಾಡಿಗೆ ಅವಳು ಆಟ […]
ಕಾವ್ಯಯಾನ
ಕೊನೆಯೂ ಅಲ್ಲ! ರೇಖಾ ವಿ.ಕಂಪ್ಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ ಮೊದಲಾದೊಡೆ ಮೊದಲಿಗರು ಕೊನೆಯಾದಡೆ ಕೊನೆಗಿರುವ ಎಮ್ಮ ಜೀವದಾಟದಲ್ಲಿ ನಾವೇ ಮೊದಲಿಗರು, ಕೊನೆಯವರು ಎಮ್ಮ ದುಃಖ ಎಮಗೆ ಹಿರಿದು ತಮಗೆ ಕಿರಿದು ಕಾಲನುರುಳಲಿ ಕವಿಯು ಬರೆಯಲಿ ಮೊದಲು ಕೊನೆಯ ನಡುವಿನಲಿ ಜೀವದೂಟದ ಎಲೆಯಲಿ ಕಾವ್ಯ ಕಥನವು ಉಳಿಯಲಿ ಕವಿ ಕಾಣದೇ ಅಳಿಯಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ… ***********************************
ಕಥಾಗುಚ್ಛ
ಒಂದು ಸಾವಿನ ಸುತ್ತಾ ವೇಣುಗೋಪಾಲ್ ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.? ಎಲ್ಲಿದ್ದಿಲಾ.? ಇವಾಗ ಬಂದೆ ಮನೆಗೆ ಏನು ಹೇಳು.? ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ […]