Day: February 11, 2020

ಅನುವಾದ ಸಂಗಾತಿ

ಮೂಲ: ಮೇರಿ ಆಲಿವರ್(ಅಮೇರಿಕನ್) ಕನ್ನಡಕ್ಕೆ: ಕಮಲಾಕರ ಕಡವೆ ಪ್ರಾರ್ಥನೆ ಏನೆಂದು ಅರಿಯೆ ನಾನು” ಪ್ರಾರ್ಥನೆ ಏನೆಂದು ಸರಿಯಾಗಿ ತಿಳಿಯದು ನನಗೆನನಗೆ ತಿಳಿದಿದ್ದೆಂದರೆ, ಹೇಗೆ ಲಕ್ಷ್ಯವಿಟ್ಟು ಕೇಳುವದು, ಹೇಗೆ ಬೀಳುವದುಹುಲ್ಲಿನ ಮೇಲೆ, ಹೇಗೆ ಮಂಡಿಯೂರಿ ಹುಲ್ಲ ಮೇಲೆ ಕೂರುವದುಹೇಗೆ ಸೋಮಾರಿಯಾಗಿದ್ದು ಖುಷಿಯಾಗಿರುವದುಹೇಗೆ ಹೊಲದ ಉದ್ದ ನಡೆಯುವದು, ಇವುಗಳೇ ನಾನು ದಿನವಿಡೀ ಮಾಡುತ್ತಲಿರುವದು.ಹೇಳಿ, ಮತ್ತೇನ ಮಾಡ ಬೇಕಿತ್ತು?ಎಲ್ಲವೂ ಕೊನೆಗೆ ಕೊನೆಯಾಗುತ್ತಾವಲ್ಲವೇ, ಸ್ವಲ್ಪ ಬೇಗನೆ?ಹೇಳಿ, ನೀವೇನ ಮಾಡುವಿರಿ ನಿಮ್ಮ ಇರುವ ಒಂದು ಅಮೂಲ್ಯ ಅಪಕ್ವ ಬಾಳಿನಲ್ಲಿ? “I Don’t Know What […]

ಕಾವ್ಯಯಾನ

ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ […]

ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್.‌ ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ […]

ಕಾವ್ಯಯಾನ

ತೋಳ ಉಯ್ಯಾಲೆ ಶಾಂತಾ ಜೆ ಅಳದಂಗಡಿ ತೋಳ ಉಯ್ಯಾಲೆ ಅಂದದ ಸುಂದರ ಬಂಧುರ ಭಾವದ ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ ಕಾವ್ಯದ ನವ್ಯತೆ ಬಲು ನಾವೀನ್ಯತೆ ಬೆಳಗಿತು ನನ್ನಯ ಹೃದಯದ ಹಣತೆ ಚೆಲ್ಲುವೆ ನನ್ನವ ನಡೆಯುವ ಹಾದಿಗೆ ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ ಜತೆಯಾಗಿ ಕುಳಿತು ಜೋಕಾಲಿ ಆಡುವೆ ಸ್ವರ್ಗವೆ ಇರಲಿ ನರಕವೆ ಬರಲಿ ಹೂವು ನಾರಿನ ಬಂಧವು ಬೆಸೆಯಲಿ ******

Back To Top