Year: 2020

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ […]

ಕಾದಂಬರಿ ಕುರಿತು ಬಂಡಾಯ ವ್ಯಾಸರಾಯ ಬಲ್ಲಾಳ ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ ‘ನನ್ನ ಪುಟ’ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ ‘ಬಂಡಾಯ’.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು […]

ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು […]

ಗಝಲ್

ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ || ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ || ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ || ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ || ಜೀವನ ಪುಷ್ಪ ಮೊಗ್ಗಾಗಿ ಅರಳುವ […]

ಬಿಂದಿಗೆ ಕಳೆದಿದೆ

ಕವಿತೆ ಬಿಂದಿಗೆ ಕಳೆದಿದೆ ಸುಮಾವೀಣಾ ನಂಬಿಕೆಯೆಂಬೋ ಬಿಂದಿಗೆ ಕಳೆದಿದೆಕಳ್ಳನ ಮನೆಗೆ ಮಹಾಕಳ್ಳ ಹೊಕ್ಕಂತೆ!ಅಪನಂಬಿಕೆಯ ಮೇಲೆ ಅವಿಶ್ವಾಸ ಹೊಕ್ಕಿದೆನಂಬಿಕೆ ಕಳೆದರೂ ಕಳೆಯಿತುಕಳೆದು ಹೋಗುವ ಮುನ್ನ ಹೇಳಲೇಬೇಕಿತ್ತು!ಹೇಗೆ ?ಹೇಳುವೆ! ನಾ ಮರೆತಿದ್ದೆ ನೀ ಕಳ್ಳ ತಾನೆ!ನಂಬಿಕೆ ಮೂರು ಕಾಸಿನದ್ದೆ?ನಿನಗಿದ್ದರೂಇರಬಹುದು!ಇರಬಹುದು!ಮೂರು ಕಾಸಾದರೂ ಕಾಸೇ ತಾನೇಆತ್ಮಘಾತಕತನ ಮಾಡಲುಬಾರದುಬಿಂದಿಗೆ ಕಳೆದಿದೆ! ಬಿಂದಿಗೆ ಕಳೆದಿದೆ!ಕದ್ದು ಹೋಗಿದೆ ನಂಬಿಕೆತಿರುಗಿ ಬಂದರೂ ವಿಶ್ವಾಸವಲ್ಲದ ನಂಬಿಕೆಹೋದರೆ ಹೋಗಲಿ ಬಿಂದಿಗೆಒಳಿತೇ ಆಯಿತುನಿನ್ನ ವ್ಯಘ್ರತೆ, ರಾಕ್ಷಸತ್ವ ದರ್ಶನವಾಯಿತಲ್ಲ! *******************************

ಗಝಲ್

ಗಝಲ್ ಪ್ರತಿಮಾ ಕೋಮಾರ ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡುನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡುಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನುನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು “ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು ********************************

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ  ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ  ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ […]

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ […]

ಕಾದಂಬರಿ ಕುರಿತು ಮರಳಿಮಣ್ಣಿಗೆ ಡಾ.ಶಿವರಾಮ ಕಾರಂತ ಸುಮಾವೀಣಾ ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು   ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು  ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ  ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ  ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, […]

Back To Top