ಬಿಂದಿಗೆ ಕಳೆದಿದೆ

ಕವಿತೆ

ಬಿಂದಿಗೆ ಕಳೆದಿದೆ

ಸುಮಾವೀಣಾ

ನಂಬಿಕೆಯೆಂಬೋ ಬಿಂದಿಗೆ ಕಳೆದಿದೆ
ಕಳ್ಳನ ಮನೆಗೆ ಮಹಾಕಳ್ಳ ಹೊಕ್ಕಂತೆ!
ಅಪನಂಬಿಕೆಯ ಮೇಲೆ ಅವಿಶ್ವಾಸ ಹೊಕ್ಕಿದೆ
ನಂಬಿಕೆ ಕಳೆದರೂ ಕಳೆಯಿತು
ಕಳೆದು ಹೋಗುವ ಮುನ್ನ ಹೇಳಲೇಬೇಕಿತ್ತು!
ಹೇಗೆ ?ಹೇಳುವೆ! ನಾ ಮರೆತಿದ್ದೆ ನೀ ಕಳ್ಳ ತಾನೆ!
ನಂಬಿಕೆ ಮೂರು ಕಾಸಿನದ್ದೆ?
ನಿನಗಿದ್ದರೂ
ಇರಬಹುದು!
ಇರಬಹುದು!
ಮೂರು ಕಾಸಾದರೂ ಕಾಸೇ ತಾನೇ
ಆತ್ಮಘಾತಕತನ ಮಾಡಲುಬಾರದು
ಬಿಂದಿಗೆ ಕಳೆದಿದೆ! ಬಿಂದಿಗೆ ಕಳೆದಿದೆ!
ಕದ್ದು ಹೋಗಿದೆ ನಂಬಿಕೆ
ತಿರುಗಿ ಬಂದರೂ ವಿಶ್ವಾಸವಲ್ಲದ ನಂಬಿಕೆ
ಹೋದರೆ ಹೋಗಲಿ ಬಿಂದಿಗೆ
ಒಳಿತೇ ಆಯಿತು
ನಿನ್ನ ವ್ಯಘ್ರತೆ, ರಾಕ್ಷಸತ್ವ ದರ್ಶನವಾಯಿತಲ್ಲ!

*******************************

Leave a Reply

Back To Top