Month: November 2019

ಕವಿತೆ ಕಾರ್ನರ್

ರಕ್ತ ಒಸರುವ ಗತದ ಗಾಯ
ಮುಲಾಮುಗಳಿಗೆಲ್ಲ ಮಾಯುವುದಿಲ್ಲ
ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ
ನರಕದ ಭಯ ಯಾರಿಗಿದೆ ಇಲ್ಲೀಗ?

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ […]

ಜನರನ್ನು ತಲುಪುವ ಮಾರ್ಗ

ಕು.ಸ.ಮಧುಸೂದನ ರಂಗೇನಹಳ್ಳಿ ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು- ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ. ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ […]

ಪುಸ್ತಕ ವಿಮರ್ಶೆ

ಕೃತಿ ಬಿಕರಿಗಿಟ್ಟ ಕನಸು-ಕಾವ್ಯ ಲೇಖಕರು: ದೇವು ಮಾಕೊಂಡ ಡಾ.ವಿಜಯಶ್ರೀ ಇಟ್ಟಣ್ಣವರ ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು […]

ಗಜಲ್

ಯಾರಿಗೆ ಯಾರು ಸಂಗಾತಿ? ವಿನುತಾ ಹಂಚಿನಮನಿ ಬಾಳಿನ ಬಂಡಿ ಎಳೆಯುವ ಕನಸಿನ ಕುದುರೆಗಳೇ ಯೋಚಿಸಿ ಹೇಳಿ ನಾಲ್ಕು ದಿನದ ಬದುಕಿನಲಿ ಯಾರಿಗೆ ಯಾರು ಸಂಗಾತಿ ಹೇಳಿ ಮರಕೆ ಕೋಮಲ ಲತೆಯೇ ಸಂಗಾತಿ ಹೃದಯಕೆ ಮಧುರ ಭಾವನೆಗಳೆ ಸಂಗಾತಿ ಲತೆಯ ಭಾವನೆ ಮರ ಅರಿಯದಾದರೆ ಹೃದಯದ್ದೇನು ತಪ್ಪು ಹೇಳಿ ಚಂದಿರನಿಗೆ ಹೊಳೆವ ತಾರೆಗಳೆ ಸಂಗಾತಿ ಸುಂದರ ತನುವಿಗೆ ನಿರ್ಮಲ ಮನವೇಸಂಗಾತಿ ನಕತ್ರಗಳಿಲ್ಲದ ಆಗಸದಲ್ಲಿ ಚಂದ್ರ ಏಕಾಂಗಿಯಾದರೆ ನಿಷ್ಟೆಯಿಲ್ಲದ ಮನದ ಮಾಲಿಕ ಕುರೂಪಿಯಲ್ಲವೇ ಹೇಳಿ ಹೂವಿಗೆ ಹಾರುವ ದುಂಬಿಯೇ ಸಂಗಾತಿ […]

ಕವಿತೆ ಕಾರ್ನರ್

ಅವಳ ಕಣ್ಣುಗಳಲ್ಲಿ ಬೇಸಿಗೆಯ ಧಗೆಯನೆಲ್ಲ ಹೀರಿಬಿಡಬಲ್ಲ ಅವಳ ಕಣ್ಣುಗಳಲ್ಲಿ ಸದಾ ಒಂದು ಕನಸು ಬರಲಿಹ ನಾಳೆಗೆ. ಇಡಿ ಜಗದ ಕಸುವನೆಲ್ಲ ಹೀರಿಬಿಡಬಲ್ಲಂತ ಅವಳ ಕಣ್ಣುಗಳಲ್ಲಿ ಸದಾ ಒಂದು ಸೋನೆ ಒಳಗಿನ ದು:ಖಕ್ಕೆ. ಬದುಕಿನೆಲ್ಲ ವಿಷಾದಗಳ ಕೊನೆಗೊಳಿಸಬಲ್ಲಂತ ಉಡಾಫೆಯ ನೋಟವಿದ್ದ ಅವಳ ಕಣ್ಣುಗಳಲ್ಲಿ ಸದಾ ಒಂದು ನಗು ಮನುಜನ ಅಸಹಾಯಕತೆಗೆ. ಕಂಡಿದ್ದನ್ನೆಲ್ಲ ಮುಕ್ಕಿಬಿಡುವ ಹಸಿವಿದ್ದ ಅವಳ ಕಣ್ಣೊಳಗೆ ಸದಾ ಒಂದು ಆತುರ ಎದುರಿನ ಮಿಕದೆಡೆಗೆ. ನೋವುಗಳಿಗೆಲ್ಲ ಮುಕ್ತಿ ನೀಡುವ ಮುಲಾಮು ಇದ್ದ ಅವಳ ಕಣ್ಣೊಳಗೆ ಸದಾ ಒಂದು ನಿರಾಳತೆಯ […]

ಕಾವ್ಯಯಾನ

ಸಾವಿರದ ಸಾವಿರ ಕವಿತೆ ರವಿ ರಾಯಚೂರಕರ್ ಬಳಲಿ ಬೇಕೆಂದು ಬಿಕ್ಕಳಿಸಿ ಅತ್ತವನು ಎದೆಗಂಟಿ ನುಡಿ ನುಡಿದು ಆಸೆಯ ಗೋಪುರಕೆ ಹೊಸ ಕನಸುಗಳ ತುಂಬಿ ನೆಲಕಳಚಿ ಬಿದ್ದವನು ನೀನಲ್ಲವೇ ಹಸಿದು ಕುಳಿತಾಗ ಕುಟುಕಿ ಕಾಳನಿಟ್ಟು ನಿಟ್ಟುಸುರ ಹೆಜ್ಜೆಯಲಿ ಊರ ತಿರುಗಿದ ಬಿಕ್ಕು ಪ್ರಾಯದ ಪೊರೆ ಹರಿದು ಹದಿಹರೆಯದ ಒಲವನೆರದವನು ನೀನಲ್ಲವೇ ಬರಿ ಅರ್ಥಗಳನೆ ಈ ಮೌನಕೆ ತುಂಬಿ ಹಾಗೆ ತುಳುಕುವ ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ ಬೆಳಗಾಗುವವರೆಗೆ ಉರಿದು,ಸುಟ್ಟು, ಬೂದಿಯಾಗಿ ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ ಶತಮಾನದ […]

ಕವಿತೆ ಕಾರ್ನರ್

ನೀನು ಮಾತ್ರವೇ! ನೀನೊಂದು ಬರೀ ರಕ್ತಮಾಂಸದಏರುಯೌವನದ ಜೀವಂತ ಹೆಣ್ಣು ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು! ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನುನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನುನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನುನಾನು ಕಳೆದುಕೊಂಡ ಎಲ್ಲವನೂಮೊಗೆಮೊಗೆದು ಕೊಡಬಲ್ಲ ಸಾವಿರದ ನೋವಿರದ ದೇವತೆ ನೀನು. ನೀನೊಂದು ಭೂಮಿಯ ಹಾಗೆ ನಾನೋ ನಿನ್ನತ್ತಲೇ ಸರಿಯುವ ಸುತ್ತುವ ಕ್ಷುದ್ರ ಗ್ರಹನಿರಾಕರಿಸಿದಷ್ಟೂ ನಿನ್ನ ಕನವರಿಸುವಕಷ್ಟದ ದಿನಗಳಲ್ಲಿಯೂ ಸತ್ಯವ ನುಡಿದು ಸರಳುಗಳಹಿಂದೆ ನರಳುತಿಹ ಜೀವ ಮಾತ್ರ ನಾನುಇಷ್ಟು ಮಾತ್ರ ಹೇಳಬಲ್ಲೆ ನನ್ನೆಲ್ಲ ತಪ್ಪುಗಳ ಕ್ಷಮಿಸಿನನ್ನ […]

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ […]

ನಾನು ಕಂಡ ಹಿರಿಯರು

ಕೋಟ ಶಿವರಾಮ ಕಾರಂತ್ ಡಾ.ಗೋವಿಂದ ಹೆಗಡೆ “ವಿದ್ಯಾಸಾಗರ’ ಕಾರಂತರು (೧೯೦೨-೧೯೯೭) ಅದು ೧೯೭೭ರ ಬೇಸಿಗೆಯಿದ್ದಿರಬಹುದು. ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡು ಚುನಾವಣೆಯನ್ನು ಘೋಷಿಸಲಾಗಿತ್ತು. (ಇವೆಲ್ಲ ತಿಳಿದಿದ್ದು ನಂತರ,ಆಗ ಅಲ್ಲ.) ನಮ್ಮ ಊರಿನ ಬಳಿಯ ಉಮಚಗಿಯಲ್ಲಿ ಒಂದು ಕಾರ್ಯಕ್ರಮ. ಹತ್ತು ಹನ್ನೊಂದರ ಹುಡುಗ ನಾನು ಅಲ್ಲಿದ್ದೆ. ಎತ್ತರದ, ಗೌರವರ್ಣದ, ನೀಳ ಕೇಶದ ಪಂಚೆಯುಟ್ಟ ಹಿರಿಯರು ಮಾತನಾಡಿದರು. ಮುಂದೆ ಕುಳಿತಿದ್ದ ನಾವು ನಾಲ್ಕಾರು ಮಕ್ಕಳು ಕೆಲಹೊತ್ತು ಅವರ ಮಾತು ಕೇಳಿದೆವು ಏನೂ ತಿಳಿಯಲಿಲ್ಲ ; ಬೇಸರ ಬಂತು. ಗುಸುಗುಸು ಪಿಸುಮಾತು ಕೊನೆಗೆ ಜೋರಾಯಿತು. […]

Back To Top