ಕೃತಿ ಬಿಕರಿಗಿಟ್ಟ ಕನಸು-ಕಾವ್ಯ
ಲೇಖಕರು: ದೇವು ಮಾಕೊಂಡ
ಡಾ.ವಿಜಯಶ್ರೀ ಇಟ್ಟಣ್ಣವರ
ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು ಮತ್ತೆ ಮತ್ತೆ ಓರಣಗೊಳಿಸುವ ಪ್ರಯತ್ನವೂ ಅವಶ್ಯ. ಈ ಮೂರೂ ಮುಪ್ಪುರಿಗೊಂಡಾಗ ಯಶಸ್ವಿಗೊಂಡಾಗ ಯಶಸ್ವಿ ಕವಿಯೊಬ್ಬನನ್ನು ನರ‍್ಮಿಸುತ್ತವೆ. ಮೊದಲ ಪ್ರಯತ್ನದಲ್ಲೇ ಈ ಮೂರೂ ಲಕ್ಷಣಗಳನ್ನೊಳಗೊಂಡ ಕವಿ ದೇವಿ ಮಾಕೊಂಡ. ದೇವು ಮಾಕೊಂಡ ದೇಸೀ ಸಂಸ್ಕೃತಿ-ಪ್ರಜ್ಞೆಯನ್ನುಳ್ಳ ಕವಿ. ಹಳ್ಳಿ ವಿಭಿನ್ನ ಅನುಭವಗಳ ಆಗರ. ಲೊಕಜ್ಞಾನದ ಕೇಂದ್ರ. ಮನುಷ್ಯನಿಗೆ ಹಳ್ಳಿ ಕೊಡುವ ಅನುಭವ ಸಂಪತ್ತನ್ನು ಪಟ್ಟಣ ಕಟ್ಟಿಕೊಡಲಾರದು. ಪಟ್ಟಣದ ಕಂಪೌಂಡ ಸಂಸ್ಕೃತಿಯ ಅಡಿಯಾಳಾಗಿರುವ ನಾವುಗಳು ಇಂದು ನಮ್ಮ ಸುತ್ತ ಸ್ವರ‍್ಥದ ಗೋಡೆಕಟ್ಟಿಕೊಂಡಿದ್ದೇವೆ. ಆದರೆ ದೇವು ಮಾಕೊಂಡ ಹಳ್ಳಿಯೊಳಗೊಂದಾಗಿ ಬದುಕಿದ ಆಧುನಿಕ ಮನುಷ್ಯ. ಅಂತಲೇ ಈ ವ್ಯಕ್ತಿಗೆ ಹಳ್ಳಿಯಿಂದ ದಿಲ್ಲಿ ದಿಗಂತದವರೆಗಿನ ಅಪಾರ ಲೋಕಜ್ಞಾನವಿದೆ. ಅವರಿಗೆ ತಾನು, ತನ್ನ ವೈಯಕ್ತಿಕ ಬದುಕು ಇದಿಷ್ಟೇ ಜೀವನವಲ್ಲ. ಅದರಾಚೆಗೂ ತುಡಿತ-ತಲ್ಲಣಗಳಿವೆ. ಅಂತಲೇ ಅವರಿಗೆ ಅನ್ಯಾಯ, ಅತ್ಯಾಚಾರ, ಪರಿಸರ ನಾಶ, ಕೋಮು ಸಂರ‍್ಷ, ಜಾತಿ ಅಸಮಾನತೆಗಳ ಕುರಿತು ರೋಷವಿದೆ. ವಿರೂಪಗೊಂಡ ದೇಶದ ಚಿತ್ರಣದ ಜೊತೆಗೆ ನಮ್ಮಲ್ಲಿ ಇನ್ನೂ ಜೀವಂತವಿರುವ ಪ್ರೀತಿ, ಪ್ರೇಮ, ನನ್ನೂರು. ನನ್ನ ದೇಶಗಳ ಕುರಿತು ಅಭಿಮಾನವಿದೆ. ಇದನ್ನೆಲ್ಲ ನೋಡಿದಾಗ ಕವಿಗೆ ಒಟ್ಟು ಬದುಕಿನ ಬಗೆಗಿರುವ ವಿಶಾಲ ದೃಷ್ಟಿಕೋನದ ಅರಿವುಂಟಾಗುತ್ತದೆ. ಅದಕ್ಕೆ ಸಾಕ್ಷಿ ಬಿಕರಿಗಿಟ್ಟ ಕನಸುವಿನಲ್ಲಿನ ಕಾವ್ಯಾಭಿವ್ಯಕ್ತಿಗಳು. ‘ಬಿಕರಿಗಿಟ್ಟ ಕನಸು’ ಸಮನ್ವಯ ಮಾದರಿಯ ಕವನ ಸಂಕಲನ. ಇಲ್ಲಿಯ ಕವನಗಳಲ್ಲಿ ನವೋದಯದ ಜೀವನ ಪ್ರೀತಿ, ರಾಷ್ಟ್ರಭಕ್ತಿ, ಪ್ರಕೃತಿ ಪ್ರೀತಿ, ಆರ‍್ಶ ಕಲ್ಪನೆಗಳಿವೆ. ಪ್ರಗತಿಶೀಲರ ಪ್ರಗತಿಯ ದೃಷ್ಟಿಕೋನವಿದೆ, ಡೋಂಗಿ ಬಾಬಾಗಳನ್ನು ಬಯಲಿಗೆಳೆಯುವ ದಿಟ್ಟತನವಿದೆ. ನವ್ಯರ ಪ್ರತೀಕಾತ್ಮಕವಾಗಿ ಹೇಳುವ ಕಲೆಗಾರಿಕೆ ಇದೆ, ಬದುಕು-ದೇಶದ ಬಗ್ಗೆ ಭ್ರಮನಿರಸನವಿದೆ. ಬಂಡಾಯದ ಪ್ರತಿಭಟನಾ ಗುಣವಿದೆ. ಹೀಗೆ ಇದುವರೆಗಿನ ಕನ್ನಡ ಸಾಹಿತ್ಯ ಚಳುವಳಿಗಳಿಗೆಲ್ಲ ಇಲ್ಲಿ ಸ್ಪಂದನೆ ಇದೆ. ಜೊತೆಗೆ ರ‍್ತಮಾನಕ್ಕೂ ಪ್ರತಿಕ್ರಿಯೆ ಇದೆ. ಈ ಸಂಕಲನದಲ್ಲಿ ಒಟ್ಟು ೪೩ ಕವನಗಳಿವೆ. ಅವನ್ನು ಸ್ಥೂಲವಾಗಿ ಐದು ವಿಭಾಗಗಳನ್ನಾಗಿ ಮಾಡಿಕೊಂಡು ನೋಡಬಹುದು. ಕೋಮು-ಜಾತಿ ಸಂರ‍್ಷ , ಪ್ರೇಮಕವಿತೆಗಳು , ಪರಿಸರ ಕಾಳಜಿ, ರ‍್ತಮಾನಕ್ಕೆ ಪ್ರತಿಕ್ರಿಯೆ ಹೀಗೆ ಅನೇಕ ಭಾವದ ಕವಿತೆಗಳು ಈ ಸಂಕಲನದಲ್ಲಿವೆ. ಮನುಷ್ಯ ಮನುಷ್ಯನನ್ನು ಒಡೆಯುವ ರ‍್ಮ ಜಾತಿಗಳ ಕುರಿತಾಗಿ ಕವಿಗೆ ಅಪಾರವಾದ ಆಕ್ರೋಶವಿದೆ. ಅದನ್ನು ಬಿಕರಿಗಿಟ್ಟ ಕನಸು, ಗುಲಾಮಗಿರಿ, ಚಂದ್ರನ ಸಾಕ್ಷಿಯಾಗಿ, ನನ್ನೆದೆಯೇ ಮಹಾಗ್ರಂಥಗಳಂತಹ ಕವನಗಳಲ್ಲಿ ಕಾಣಬಹುದು. ಉದಾಹರಣೆಗೆ, ಬಿಕರಿಗಿಟ್ಟ ಕನಸು ಕವಿತೆಯಲ್ಲಿ “ಬಂದೂಕಿನ ನಳಿಕೆಯಲಿ ಗೂಡು ಕಟ್ಟಲು ಹೋದ ಹಕ್ಕಿ ಮೊಟ್ಟೆ ಇಟ್ಟ ಭ್ರೂಣ ತಟ್ಟದೇ ಅಳಿಯುತ್ತಿದೆ” ಎಂಬ ಸಾಲುಗಳಲ್ಲಿ ಕವಿಯ ನೋವು ಅಭಿವ್ಯಕ್ತಗೊಳ್ಳುತ್ತದೆ. ಮಾನವೀಯತೆಯ ಆಶಯ ಬಂದೂಕಿನ ಬಾಯಲ್ಲಿ ಗುಬ್ಬಚ್ಚಿ ಗೂಡುಕಟ್ಟಬೇಕೆಂಬುದು. ಆದರೆ ಗುಬ್ಬಚ್ಚಿ ಬಂದೂಕಿನ ಬಾಯಲ್ಲಿ ಗೂಡು ಕಟ್ಟಿ ಇನ್ನೇನು ಆ ಭ್ರೂಣಕ್ಕೆ ಕಾವು ಕೊಟ್ಟು ಮರಿಮಾಡಬೇಕು ಅಷ್ಟರಲ್ಲಿ ಆ ಗೂಡು ತತ್ತಿ ಸಹಿತವಾಗಿ ಇಲ್ಲವಾಗುವದು ಇಂದಿನ ಕರಾಳ ವಾಸ್ತವ. ಇಂಥ ಸಾಲುಗಳು ಕವಿಯ ಕಾವ್ಯ ಶಕ್ತಿಗೆ ಕೈಗನ್ನಡಿ. ಬಿಕರಿಗಿಟ್ಟ ಕವಿತೆ ಕೋಮು ದಳ್ಳುರಿಯ ಬೆಂಕಿ ಹೇಗೆ ಜಗತ್ತನ್ನೇ ಬೇಯಿಸುತ್ತಿದೆ, ಶಾಂತಿ ಸೌಹರ‍್ದತೆಯ ನೆಲೆವೀಡಾದ ತಾಣಗಳನೇಕ ಇಂದು ರಕ್ತದ ಮಡುವಾಗಿ ಭಯ ಹುಟ್ಟಿಸುವ ತಾಣಗಳಾಗಿರುವುದರ ಬಗ್ಗೆ ಕವಿಗೆ ವಿಶಾದವಿದೆ. ಬೆಂಕಿಯ ಮಳೆ ಕವಿತೆಯಲ್ಲಿ ಇಂದು ದೇಶಾದ್ಯಂತ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಅತ್ಯಾಚಾರ, ಅನ್ಯಾಯ, ಅಸಹಿಷ್ಣುತೆ ತಾಂಡವವಾಡುತ್ತಿವೆ. ದೇಶಕ್ಕೊದಗಿದ ಇಂಥ ದರ‍್ದೆಸೆಗೆ ಕವಿ ಮನಸ್ಸು ಘಾಸಿಗೊಂಡಿದೆ. ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆಯಂಥ ಕವಿತೆಗಳಲ್ಲಿ ಪರಂಪರಾಗತವಾಗಿ ಬಂದ ಯಜಮಾನ್ಯ ಸಂಸ್ಕೃತಿಯನ್ನು ಪುರೋಹಿತಶಾಹಿಯನ್ನು ಕವಿ ಪ್ರತಿಭಟಿಸುತ್ತಾನೆ. ಆದರೆ ಈ ಪ್ರತಿಭಟನೆ ಸೌಮ್ಯ ತೆರನಾದದ್ದಾಗಿದೆ. ‘ಗುಲಾಮಗಿರಿ’ ಕವಿತೆಯಲ್ಲಿ “ನನ್ನ ಸುಕ್ಕುಗಟ್ಟಿದ ನಲುಗಿ ಬಾಡಿದ ದೇಹದ ಹನಿ ರಕ್ತದಿಂದ ನಿನ್ನ ಸುಖದ ಗೋಪುರ ಕಟ್ಟಿರುವೆ ನನ್ನ ನೋವಿನ ಮಡುವಿನಿಂದ ನಿನ್ನ ಜೀವನ ಸಾಗಿದೆ” ಎಂದು ಪ್ರತಿಭಟಿಸುತ್ತಾನೆ ಕವಿ. ‘ಚಂದಿರನ ಸಾಕ್ಷಿಯಾಗಿ’ ಕವಿತೆಯಂತೂ ಕತೆಯಾಗುವ ಕವಿತೆ. ಲಂಕೇಶರ ದಾಳಿ ಕಥೆಯನ್ನು ನೆನಪಿಸುವ ಕವಿತೆ. ಪ್ರಕೃತಿ ತಾನೆ ಮನುಷ್ಯನನ್ನು “ನಿಮ್ಮ ಮನೆಯ ಮಗಳೆಂದು ರಕ್ಷಿಸಿ” ಎಂದು ಬೇಡಿಕೊಳ್ಳುವ ದಯನೀಯತೆ ಪ್ರಕೃತಿ ಎದುರಾಗಿದ್ದನ್ನು ದುಃಖದಿಂದ ಹೇಳುತ್ತಾನೆ ಕವಿ. ಸಂಬಂಧ-ಸಾಂಗತ್ಯ ಕವಿತೆಯಲ್ಲಿ “ಕಣ್ಣು-ಕಿವಿ ಮೂಗು-ಬಾಯಿ ತುಂಡರಸಿ ಕಾಮನೋಟ ಬೀರಿ ನಿತಂಬ ಕತ್ತರಿಸಿ ಹಾಕುವಾಗ ತನಿರಸ ಧಾರೆ ಎರೆದ ಗಳಿಗೆ ನೆನಪಾಗಲಿಲ್ಲವೆ?” ಎನ್ನುತ್ತಾನೆ ಕವಿ. ಇದು ಕವಿತೆಯ ಕೊನೆಯ ನುಡಿ. ಈ ನುಡಿಗೆ ಬರುವವರೆಗೂ ಕವಿ ಪ್ರಕೃತಿ ಮತ್ತು ಜೀವ ಸಂಕುಲದ ಮಧ್ಯದ ಅವಿನಾಭಾವ ಸಂಬಂಧವನ್ನು ರ‍್ಣಿಸುತ್ತಾ ಕೊನೆಗೆ ಈ ಮೇಲಿನಂತೆ ಹೇಳುತ್ತಾನೆ. ಪ್ರಕೃತಿಯ ಮೇಲೆ ಮಾನವನ ಕಾಮದ ಕಣ್ಣು ಬಿದ್ದಿದೆ. ಎಲ್ಲೆಲ್ಲ ಕಾಮದ ಕಣ್ಣು ಬೀಳುವದೋ ಅಲ್ಲೆಲ್ಲ ಸ್ವರ‍್ಥ ಮನೆ ಮಾಡುತ್ತದೆ. ಮಾನವ ದಾನವನಾಗಿ ಅಮಾನುಷವಾಗಿ ರ‍್ತಿಸಲಾರಂಭಿಸುತ್ತಾನೆ. ಅದನ್ನೇ ಕವಿ ಇಲ್ಲಿ ಹೀಗೆ ಕವಿತೆಯಾಗಿಸಿದ್ದಾನೆ. ಇನ್ನು ವಸಂತಕಾಲದ ಚಿಟ್ಟೆ, ನಲ್ಲೆ, ಬರಿ ನೋಟವಲ್ಲದಂತಹ ಮುದನೀಡುವ ಪ್ರೇಮ ಕವಿತೆಗಳಿವೆ. ಆರ‍್ಶ ಮೌಲ್ಯಗಳನ್ನು ಪ್ರತಿಪಾದಿಸುವ ನಾಡ ಕಟ್ಟತೇವ, ಭಾವಕೋಶವೊಂದೇ ಭಾರತಯಂತಹ ಕವಿತೆಗಳು ಸಂಕಲನದ ಮೌಲ್ಯ ಹೆಚ್ಚಿಸುತ್ತವೆ. ಜೊತೆಗೆ ರ‍್ತಮಾನಕ್ಕೆ ಕವಿಯ ಪ್ರತಿಕ್ರಿಯೆಯಾಗಿ ಗೋರಿಯೊಳಗಿನ ಹೂವು, ಭೀಮೆಯ ಸಿರಿಯಂತಹ ಕವಿತೆಗಳಿವೆ. ಹೀಗೆ ಕವಿ ವಿಭಿನ್ನ ವಸ್ತು, ಆಶಯ, ಸನ್ನಿವೇಶಗಳಿಗೆ ತನ್ನದೇರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ, ಅಭಿವ್ಯಕ್ತಿಸುತ್ತಾನೆ. ಕವಿಯೊಬ್ಬನ ಕವಿತೆಗಳೆಲ್ಲ ಒಂದೇ ಎತ್ತರದಲ್ಲಿರಲು ಸಾಧ್ಯವಿಲ್ಲ, ಅದನ್ನು ಕವಿಯಿಂದ ನಿರೀಕ್ಷಿಸಲೂ ಬಾರದು. ಎಷ್ಟೇ ದೊಡ್ಡ ಕವಿಯಾದರೂ ಸಾರಸ್ವತಲೋಕದಲ್ಲಿ ಕವಿಯೊಬ್ಬ ನೆಲೆ ನಿಲ್ಲುವದು ಕೆಲವು ಕವಿತೆಗಳಿಂದ ಮಾತ್ರ. ಅಂತೆಯೇ ದೇವು ಮಾಕೊಂಡ ಸಹ ಸುಡಗಾಡ ಹೂ, ಬಿಕರಿಗಿಟ್ಟ ಕನಸು, ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆ, ಚಂದ್ರನ ಸಾಕ್ಷಿಯಾಗಿ, ಗೋರಿಯೊಳಗಿನ ಹೂ, ಬಿಳಿ ಕ್ರಾಂತಿಯ ಶಿಶು ಅಂತಹ ಕವಿತೆಗಳಿಂದ ಒಂದಿಷ್ಟು ಕಾಲ ಈ ಸಾರಸ್ವತ ಲೋಕದಲ್ಲಿ ನೆಲೆ ನಿಲ್ಲುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಕಾವ್ಯ ರಸಾನಂದವನ್ನು ನೀಡಬೇಕು ಎನ್ನುವರು ಅಂಥ ರಸಾನಂದವನ್ನು ನೀಡುವ ಕವಿತೆ ಬಿಳಿ ಕ್ರಾಂತಿಯ ಶಿಶು. ಹೀಗೆ ಮೋದಲ ಸಂಕಲನದಿಂದಲೇ ಭರವಸೆಯನ್ನು ಮೂಡಿಸಿದ ಕವಿ ಮುಂದಿನ ದಿನಮಾನಗಳಲ್ಲಿ ಮತ್ತೊಂದಿಷ್ಟು ಸಂಕಲನಗಳ ಮೂಲಕ ಕಾವ್ಯ ಸಂಪತ್ತನ್ನು ಹೆಚ್ಚಿಸಲಿ.