Day: November 10, 2019

ಅನಿಸಿಕೆ

ನಗರಗಳಲ್ಲಿ ದುಡಿಯುವ ಹುಡುಗರ ಕಷ್ಟ ಐಶ್ವರ್ಯ ಎಲ್ಲೇ ಹೋದ್ರು, ಎಷ್ಟೊತ್ತಿಗೆ ಮನೆಗೆ ಬಂದ್ರು ಯಾಕೆ, ಏನು ಅನ್ನೊ ಪ್ರಶ್ನೆಗಳನ್ನ ಹುಡ್ಗುರಿಗೆ ಮಾತ್ರ ಕೇಳಲ್ಲ ಅನ್ನೋದು ಪ್ರತಿಯೊಂದು ಮನೆಯಲ್ಲಿರೊ ಅಕ್ಕ ತಂಗಿಯರ ವಾದ. ನನ್ನನ್ನೂ ಸೇರ್ಸಿ…..ನಾವು ಅಪ್ಪ ಅಮ್ಮನ ಹತ್ರ ಜಾಸ್ತಿ ಜಗಳ ಮಾಡೋದು ಇದೊಂದೇ ವಿಷಯಕ್ಕೆ ಅನ್ಸತ್ತೆ. ನಮಗೂ ಹುಡ್ಗುರ ತರ ಫ್ರೀಡಂ ಬೇಕು ಅಂತ. ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಗಂಡಿಗೆ ಸರಿ ಸಮನಾಗಿ ನಿಂತಿದ್ದಾಳೆ ಅಂತ ನಾವೆಷ್ಟೇ ಬಾಯ್ ಬಡ್ಕೊಂಡು […]

ಕಾವ್ಯಯಾನ

ಸುತ್ತ ಸುಳಿವ ಗಾಳಿಯಲ್ಲೇ ಪುಳಕ
ಗಂಧಕ್ಕಾಗಿ ಕಾದ ಮೂಗು
ಬಂಡುಣಲು ದುಂಬಿ
ಜೇನ್ನೊಣಗಳ ಪೈಪೋಟಿ
ಎರಗಿ ದಳದಳ ಕಿತ್ತು
ಹೊಸಕಲು ತಯಾರಾಗುವ ಕೈಗಳೂ

ಕಾವ್ಯಯಾನ

ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ […]

Back To Top