ಕಾವ್ಯಯಾನ
ಮದುವೆಯ ಪ್ರಸ್ತಾಪ ಹರ್ಷಿತಾ ಕೆ.ಟಿ. ನೋಡುನೋಡುತ್ತಿದ್ದಂತೆ ಆಕಾಶದಲ್ಲೊಂದು ಕದ ತೆರೆದುಕೊಂಡಿತು ಯಾವುದೋ ಕೈಯೊಂದೂ ಚಾಚಿ ಕರೆಯಿತು ನಿಂತಲ್ಲಿಂದಲೇ ಕತ್ತು ನೀಳ ಮಾಡಿ ಎಟುಗಿಸಿ ನೋಡಿದೆ ಕದದ ಆ ಬದಿಯ ಲೋಕ ಅಲ್ಲಿ ಎಲ್ಲವೂ ಕಲ್ಪಿಸಿಕೊಂಡಿದ್ದಕಿಂತ ಅಚ್ಚುಕಟ್ಟು ಜೋಡಿಸಿಟ್ಟ ಕನಸುಗಳಿಗೆ ಧೂಳು ತಾಕಿರಲಿಲ್ಲ ಅಲ್ಲಿ ಹಸಿವು ಬಾಯಾರಿಕೆಗಳೂ ಊಳಿಡುವುದಿಲ್ಲ ಬತ್ತಿ ಸಿಕ್ಕಿಸಿ ಎಣ್ಣೆ ತುಂಬಿಸಿಟ್ಟ ದೀಪಗಳು ಬೆಳಗುವುದೊಂದೇ ಬಾಕಿ ಆದರೂ ಎತ್ತಲೂ ಈಗಾಗಲೇ ಬೆಳಕು ಈ ಭೂಮಿಯಂತಲ್ಲ ಕಸದ ರಾಶಿ ಇಲ್ಲ ಅಂಗಳವೂ ಇಕ್ಕಟ್ಟಿಲ್ಲ ಒಲೆಯೇರಿ ಕುಳಿತ ಮಡಿಕೆಗೆ […]
ಕವಿತೆ ಕಾರ್ನರ್
ಅಡ್ಡಾಡಬೇಡ ಒಬ್ಬಳೇ! ಅಡ್ಡಾಡಬೇಡ ಒಬ್ಬಳೇ! ಅದರಲ್ಲೂ ಮಳೆಗಾಲ! ಇರುಳಿಡೀ ಸುರಿದ ಜಡಿಮಳೆಗೆ ತೊಯ್ದು ತೊಪ್ಪೆಯಾದವಳು ಜಗುಲಿಯೊಳಗೆ ಕಾದು ಕೂತಳು ಹಗಲ ಸೂರ್ಯನ! ನೆಂದದ್ದೆಲ್ಲ ಒಣಗಬೇಕು ಇಲ್ಲ ಫಲವತ್ತಾದ ನೆಲದೊಳಗೆ ಮೊಳಕೆಯೊಡೆಯಲು ಬೇಕು ಒಂದಿಷ್ಟು ಶಾಖ ಬೆಳಕು ಎಷ್ಟು ಹೊತ್ತಾದರು ಬಾರದ ಸೂರ್ಯನೊ ಬಿದ್ದ ಮಳೆಗೆ ಕಾರಣ ತಾನಲ್ಲ ಮೊಳಕೆಯೊಡೆವ ಬೀಜವೂ ತನ್ನದಲ್ಲವೆಂಬಂತೆ ಬರಲೇ ಇಲ್ಲ ಕಾದು ಕುಂತವಳ ಕಾಲುಗಳು ಬೇರುಬಿಟ್ಟು ಮನುಜರ ಕಾಡಿನಲಿ ತನ್ನದೇ ಗೂಡು ಕಟ್ಟಿದಳು ಒಂಟಿಯಾಗಿ ಈಗವಳು ಮಗಳ ಕೂರಿಸಿಕೊಂಡು ಕತೆ ಹೇಳುತ್ತಾಳೆ ಜೊತೆಗಷ್ಟು […]
ಕಾವ್ಯ ಯಾನ
ಆ ಕರಾಳ ಇರುಳು ಮಧು ವಸ್ತ್ರದ್ ನಾವು ಮುಂಬಯಿ ಮಾಯಾ ನಗರದ ದಿಟ್ಟನಿವಾಸಿಗಳು.. ಮರೆಯೆವು ಎಂದೂ 26-11ರ ಆ ಕರಾಳ ಇರುಳು.. ಉತ್ಸಾಹದ ಕೆಲಸದೊತ್ತಡದ ಗಜಿಬಿಜಿಯ ದಿನಗಳು.. ಅರಿವಿಲ್ಲದೆ ಬಲಿಯಾದರು ತಪ್ಪನೆಸಗದ ಮುಗ್ಧಜನಗಳು.. ಶತ್ರುಗಳು ನುಗ್ಗಿದರು ಮೋಸದಿ ಸಮುದ್ರಮಾರ್ಗದೊಳು.. ಯಾರಿಗೂ ಕಾಣಲಿಲ್ಲ ಆ ನೀಚ ಕಪಟಿಗಳ ನೆರಳು.. ಅಕಸ್ಮಾತ್ತಾಗಿಎರಗಿದ ಭೀಕರ ಗುಂಡು ಸಿಡಿಮದ್ದುಗಳು.. ಜೀವತೆತ್ತರನೇಕ ಕಾರ್ಯನಿರತ ಪೋಲಿಸ್ ಕರ್ಮಚಾರಿಗಳು.. ಸೋತುಬಳಲಿದವುಮುಂಬೈನ ಎತ್ತರದ ಕಟ್ಟಡಗಳು.. ಮೌನವಾದವು ಫುಟ್ ಪಾತ್ ಗಳು..ಖಾವುಗಲ್ಲಿಗಳು.. ಹೋಟೆಲ್ ತಾಜ್ಒಳಾಂಗಣದಿ ಪೋಲಿಸರ ಕಸರತ್ತು ಗಳು ಮೂರುದಿನಗಳವರೆಗೆ […]
ಅವ್ಯಕ್ತಳ ಅಂಗಳದಿಂದ
ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ ಬಗ್ಗೆ ವಿಶ್ಲೇಷಣೆ…. ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ […]