Day: November 28, 2019

ಕಾವ್ಯಯಾನ

ಮೌನ ಮಾತಾದಾಗ ಸರೋಜಾ ಶ್ರೀಕಾಂತ ಅಮಾತಿ ಎದೆಯಗೂಡೊಳಗೆ ಬಚ್ಚಿಟ್ಟು ಮರೆಮಾಚಿದ ಮಾತುಗಳೆಷ್ಟೋ!? ನುಡಿಯದೇ ಮೌನರಾಗವಾದ ಶ್ರುತಿ,ತಾಳಗಳಿಲ್ಲದ ಹಾಡುಗಳೆಷ್ಟೋ!!? ತುಟಿಯ ಬಿಟ್ಟು ಹೊರಬರದೇ ಅಡಗಿಸಿಟ್ಟ ನಲಿವು-ನೋವ ಬಗೆಯ! ಬಿಡಿ ಬಿಡಿಸಿ ನಿನ್ನ ಮುಂದಿಡುವೆ ನಾನೀಗ ಕೇಳದಿರಬೇಡ ಗೆಳತಿ ಮನದ ಮಾತೀಗ!! ಅಳಿಯದೆ ಉಳಿದ ಭಾವಗಳಿಗೆ  ಜೀವ ಬಂದಿದೆ ಮತ್ತೊಮ್ಮೆ ಈಗ! ಮನದ ಮೂಲೆಯಲಿ ಅವಿತಿರುವ ಆಸೆ ಹಕ್ಕಿಗೆ  ಹಾರಲು ರೆಕ್ಕೆ ಬಂತೀಗ!! ನನ್ನೀ ಮೌನ ಮಾತಾಗಬೇಕೆಂದರೂ ಬೇಕು ನಿನ್ನ ಸನಿಹ ಸಾಂಗತ್ಯ ನಾ ಬರೆವ ಲೇಖನಿ ನೀನೆಂಬುದು ಸತ್ಯ! […]

ಕಾವ್ಯಯಾನ

ದಾರಿಹೋಕನೆಂದು ನಂಬಿ ಬಿಟ್ಟೆ! ಅವ್ಯಕ್ತ ಕುಶಲ ಚೇಷ್ಟೆಗಳ ಕನಸ ಮಾರುವ ಕಾಂತನೆ ಹೆಣ್ಣಿನ ಒಳಮನಸ್ಸ ಮರ್ಮವ ಹೇಳುವೆ ತಿಳಿದುಕೊ… ನಿನ್ನ ನಿಜ ಲೋಕದ ಕಡಲ ಮುತ್ತು ಗಳಂತಿರುವ, ಮೌನ ವನಿತೆಯರ ಸಖಿಗುಟ್ಟಿದು.. ಮುಂಗುರುಳ ನಡುವೆ ನಲಿವ ಕಣ್ಣಲ್ಲಿ ಕನಸೊಂದ ಹುಡುಕುವುದು ತಪ್ಪೇನಲ್ಲಾ.. ತುಂಟ ನಗುವಿನೊಳಗೆ ರಸಿಕತೆಯ ಬಯಕೆಯು ಅಲ್ಪಾಯುಷಿಯೂ ಅಲ್ಲಾ.. ಸಭ್ಯತೆಯ ನೀಳ ಸೆರಗ ಜಾರಿಸಲು ಬಾಡದ ನಿತ್ಯಾನುರಾಗವ ಹುಡುಕುವಳಷ್ಟೆ, ಸಹಜ ಜೀವನದಲ್ಲಿರುವ ತಿರುವುಗಳ ಮಧ್ಯೆ ಸ್ಪಷ್ಟ ಮನದ ಮದುರ ಪ್ರೀತಿಯ ಅರಸುವಳಷ್ಟೇ. ಉದಾಸೀನ ಪುರುಷನ ಭೂಷಣವಾದರೆ, […]

ಕವಿತೆ ಕಾರ್ನರ್

ಮತ್ತೆಂದೂ ನಿನ್ನ ನೆನೆಯದೆ! ನಾನೀಗ ಬರೆಯುವುದ ನಿಲ್ಲಿಸಿರಬಹುದು ಹಾಗೆಯೇ ನಿನ್ನ ನೆನೆಯುವುದನ್ನೂ ಮೊದಲಿನಂತೆ ಅಕ್ಷರಗಳ ಸಹಕರಿಸುತಿಲ್ಲ ಹುಟ್ಟಿದ ಶಬ್ದಗಳೂ ಅರ್ಥ ಕೊಡುತಿಲ್ಲ ಘನಘೋರ ಬದುಕಿನ  ಹಲವು ಹಗಲುಗಳು ಅಸ್ಥವ್ಯಸ್ಥವಾಗಿ ಸರಿದು ಹೋದವು  ಓಡುವ ರೈಲಿನ ಪಕ್ಕದ ಗಿಡಗಂಟೆಗಳಂತೆ ಆಯ್ದುಕೊಂಡಿದ್ದೆನೆ ನಾನೀಗ ಇರುಳುಗಳನ್ನು ಅದು ತಂದೊಡ್ಡುವ ಸಾವಿನಂತಹ ಏಕಾಕಿತನವನ್ನು ಮೋಡಗಳ  ಹಿಂದಿನ ಬೆತ್ತಲೆ ಚಂದ್ರ ಮೊದಲಿನಂತೆ ಕಣ್ಣಾ ಮುಚ್ಚಾಲೆಯಾಡುವುದಿಲ್ಲ ಬೀಸುವ ಗಾಳಿಗೂ ಉತ್ಸಾಹದ ಉಸಿರಿಲ್ಲ ಎಲ್ಲ ಮುಗಿದು ಹೋದವರ ಅಂಗಳದಲ್ಲಿ ಮಿಂಚು ಹುಳುವೂ ಮಿನುಗುವುದಿಲ್ಲ ನನ್ನ ಪಾಪಗಳು ನಿರಂತರವಾಗಿ […]

ಮಕ್ಕಳ ಕವಿತೆ

ಚಂದ್ರಯಾನ ಎನ್. ಶಂಕರರಾವ್ ಆಹಾ ಚಂದಿರ ಪೂರ್ಣ ಚಂದಿರ ಎಷ್ಟು ಎತ್ತರ ನಿಲುಕದಷ್ಟು ದೂರ. ನಾ ನೀ ಜೊತೆ ಜೊತೆಯಲಿ ಆಡುವ ಬಾ ಚಂದಿರ, ಮೋಡದಿ ಮರೆಯಾಗದಿರು ಅಂಬರದಿ ತೇಲಾಡದಿರು. ನಿಲ್ಲು ಅಲ್ಲೇ ಚಂದಮಾಮ ಎಲ್ಲಿ ಅವಿತೆ ಬಾನಲಿ ನೀನು, ಬಲ್ಲೆ ನಿನ್ನ ಕಣ್ಣುಮುಚ್ಚಾಲೆ ಜಲದ ಹಿಂದೆ ಅವಿತೆಯೇಕೆ. ಹುಣ್ಣಿಮೆಯ ಸುಂದರ ಚಂದಿರ ವಿಧು ನೀ ಬಾನಲಿ ಮಂದಿರ, ಮುದದಲಿ ಪ್ರಕಾಶಿಸು ನಿರಂತರ ಬದುಕಿಗೆ ನೀ ಭಾಸುರ. ವಿಜ್ಞಾನದ ಪರಿಶ್ರಮ ಭಾರತದ ಚಂದ್ರಯಾನ, ನೋಡತಲಿರು ಮುಂದೊಮ್ಮೆ ನಿನ್ನಲ್ಲಿಗೆ […]

ಕಾವ್ಯಯಾನ

ಹೇಳಿ ಹೋಗು ಕಾರಣ ಪ್ರಮಿಳಾ ಎಸ್.ಪಿ. ದಿಂಬಿನ ಕೆಳಗಿನ ಜಂಗಮ ಗಂಟೆಯನ್ನು ಮತ್ತೊಮ್ಮೆ ಮಗದೊಮ್ಮೆ ಹುಡುಕಿ ನೋಡುತ್ತಿದ್ದೆ….. ಕೆಂಪು ಗುಲಾಬಿ ಅದರ ಮುದ್ರೆ ಹೃದಯದ ಇಮೇಜು ಇದ್ದಿರಬಹುದು ನಿನ್ನ ಕಡೆಯಿಂದ…ಎಂದು!!! ಈಗೆಲ್ಲವು ಶೂನ್ಯ… ಅದೆಷ್ಟು ದಿನ ಅಂತರಂಗದ ಒಡೆನಾಟವಿತ್ತೋ… ಅಷ್ಟೂ ದಿನ ನಿನ್ನ ಡಿಪಿ ಗೊಂದು ಬೆಲೆಯಿತ್ತು…. ಈಗ ಕೊನೆಯ ಸೀನ್ ಎಷ್ಟು ಗಂಟೆಗೆ ನೋಡಿರುವೆ… ಎಂಬುದು ಒಂದೇ ಬಾಕಿ ನನಗೆ… ಹೇಳಿ ಹೋಗು ಕಾರಣ ಎನ್ನುವುದಿಲ್ಲ ನಾನು ಕಾರಣ ಹೇಳದೆ ಬಂದಿದ್ದವನು ನೀನು….!!!

Back To Top