Day: November 1, 2019

ಲಹರಿ

ಮಳೆಯಲ್ಲಿ ನೆನೆದ ನೆನಪು ಪ್ರಮೀಳಾ ಎಸ್.ಪಿ. ” ಮಳೆ”… ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು […]

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

ರಾಜ್ಯೋತ್ಸವದ ನೆಪದಲ್ಲೆರಡು ಮಾತು.

ಬಲಾಢ್ಯವಾಗಬೇಕಿರುವ ಕನ್ನಡಭಾಷಿಕ ಸಮುದಾಯ! ನಿಮ್ಮೆಲ್ಲರಿಗು  ಕನ್ನಡ ರಾಜ್ಯೋತ್ಷವದ ಶುಭಾಶಯಗಳು…ಈ ಸಂದರ್ಭದಲ್ಲಿ ನಿಮ್ಮೊಂದಿಗೆಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ:  ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೆÃಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ.ಇಂತಹ ನಿರಾಶಾದಾಯಕ  ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ […]

Back To Top