ಕವಿತೆ ಕಾರ್ನರ್
ಅವಳ ಕಣ್ಣುಗಳಲ್ಲಿ ಬೇಸಿಗೆಯ ಧಗೆಯನೆಲ್ಲ ಹೀರಿಬಿಡಬಲ್ಲ ಅವಳ ಕಣ್ಣುಗಳಲ್ಲಿ ಸದಾ ಒಂದು ಕನಸು ಬರಲಿಹ ನಾಳೆಗೆ. ಇಡಿ ಜಗದ ಕಸುವನೆಲ್ಲ ಹೀರಿಬಿಡಬಲ್ಲಂತ ಅವಳ ಕಣ್ಣುಗಳಲ್ಲಿ ಸದಾ ಒಂದು ಸೋನೆ ಒಳಗಿನ ದು:ಖಕ್ಕೆ. ಬದುಕಿನೆಲ್ಲ ವಿಷಾದಗಳ ಕೊನೆಗೊಳಿಸಬಲ್ಲಂತ ಉಡಾಫೆಯ ನೋಟವಿದ್ದ ಅವಳ ಕಣ್ಣುಗಳಲ್ಲಿ ಸದಾ ಒಂದು ನಗು ಮನುಜನ ಅಸಹಾಯಕತೆಗೆ. ಕಂಡಿದ್ದನ್ನೆಲ್ಲ ಮುಕ್ಕಿಬಿಡುವ ಹಸಿವಿದ್ದ ಅವಳ ಕಣ್ಣೊಳಗೆ ಸದಾ ಒಂದು ಆತುರ ಎದುರಿನ ಮಿಕದೆಡೆಗೆ. ನೋವುಗಳಿಗೆಲ್ಲ ಮುಕ್ತಿ ನೀಡುವ ಮುಲಾಮು ಇದ್ದ ಅವಳ ಕಣ್ಣೊಳಗೆ ಸದಾ ಒಂದು ನಿರಾಳತೆಯ […]