ಕವಿತೆ ಕಾರ್ನರ್
ಒಮ್ಮೊಮ್ಮೆ ಹೀಗೂ ಆಗುತ್ತೆ! ಚಳಿಗಾಲದ ಸಂಜೆಯೊಳಗೆ ಗೋಡೆಗೊರಗಿ ಕೂತಿದ್ದವಳೆನ್ನ ಎದೆಗಾನಿಸಿಕೊಂಡು ಕವಿತೆ ಹಾಡುತ್ತಾ ಹೋದಳು ಕೇಳುತ್ತ ವಿರಮಿಸಿದವನ ಕನಸಲ್ಲಿ ದೇವತೆಗಳು ಬಂದು ನಿಂತರು ಅದು ಯಾವ ಕಾಲಕ್ಕೂ ಮುಗಿಯದ ಹಾಡೆಂಬ ನಂಬಿಕೆಯೊಳು ಮಲಗಿದವನಿಗೆ ಎಚ್ಚರವಾದಾಗ ಗೋಡೆಯಿರಲಿಲ್ಲ,ಅಸಲಿಗೆ ಅಲ್ಲೊಂದು ಮನೆಯೇ ಇರಲಿಲ್ಲ ಬಯಲ ಹೊರತು ಇನ್ನು ಅವಳಾಗಲಿ, ಅವಳ ಮಡಿಲಾಗಲಿ ಕಾಣಲಿಲ್ಲ ತೆರೆದು ಬಿದ್ದ ಬಯಲೊಳಗೆ ಕೇವಲ ನಾನು ಮತ್ತು ನಾನು ಮತ್ತು ನನ್ನ ಮೌನ ನನ್ನ ಹೆಗಲ ಮೇಲೆ ನನ್ನದೇ ಹೆಣ! ಕು.ಸ.ಮಧುಸೂದನ ರಂಗೇನಹಳ್ಳಿ