ನಾನು ಕಂಡ ಹಿರಿಯರು.
ಪ್ರೋ.ಎ.ಎನ್.ಮೂರ್ತಿರಾವ್ ಡಾ.ಗೋವಿಂದ ಹೆಗಡೆ ಪ್ರೊ ಎ ಎನ್ ಮೂರ್ತಿರಾವ್ (೧೯೦೦-೨೦೦೩) ೧೯೮೭ರ ಒಂದು ದಿನ. ಮೈಸೂರಿನಲ್ಲಿ ನಾನು ಎಂ ಬಿ ಬಿ ಎಸ್ ಓದುತ್ತಿದ್ದ ಸಮಯ. ಅಂದು ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದವು. ಉದ್ಘಾಟನೆಗೆ ಬಂದವರು ೮೭ರ ಹರೆಯದ ವಾಮನಮೂರ್ತಿ ಪ್ರೊ.ಎ ಎನ್ ಮೂರ್ತಿರಾವ್. ಬಿಳಿಯ ಪಂಚೆ, ತುಂಬುತೋಳಿನ ಸಾದಾ ಅಂಗಿಯಲ್ಲಿದ್ದರು. ಅವರು ೧೯೮೪ರ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಬಿಟ್ಟರೆ ನನಗೂ ಹೆಚ್ಚು ಗೊತ್ತಿರಲಿಲ್ಲ. ಕಾರ್ಯದರ್ಶಿ ಅವರನ್ನು ಸ್ವಾಗತಿಸಿ […]
ಕಾವ್ಯಯಾನ
ಪಯಣ ಶಂಭುಗೌಡ.ಆರ್.ಗಂಟೆಪ್ಪಗೌಡ್ರ) ಬೆವರ ಬಸಿಯಬಹುದೇ ಹೇಳು ನೀನು ಶ್ರಮದ ಕವಾಟ ತಟ್ಟದೇ “ಬೆಳಕು” ಕತ್ತಲ ಸಮಾದಿಯ ಮೇಲೊಬ್ಬ ಗೊತ್ತಿಲ್ಲದೇ ಇಟ್ಟು ಹೋದ ಮೊಗ್ಗಲ್ಲದ ಹೂ “ಪ್ರೀತಿ” ಮುಚ್ಚಿದ ಕಣ್ಣೊಡಲೊಳಗಿನ ದಿವ್ಯ ಚೇತನ ಬೆಳಕು ಮತ್ತೆ ಪ್ರೀತಿ ಸಂಗತಿ ಎರಡಾದರೂ ಬೆಳಗುವ ತತ್ವವೊಂದೇ, ಬದುಕೊಂದು ಎರಡು ಬಾಗಿಲು ತೆರೆದರೊಂದು ಮುಚ್ಚುವುದು ಮತ್ತೊಂದು ತೆಗೆದು ಮುಚ್ಚುವ ಮಧ್ಯೆ ತನ್ನ ತನವ ಬಚ್ಚಿಟ್ಟು ಪರರ ಮೆಚ್ಚಿಸುವ ಬಣ್ಣದಾಟವೇನು ಬದುಕು ಹೇಳು ನೀನು ; ಕಾಣದವನ ಸೂತ್ರಗಳ ಬೀಜಾಕ್ಷರಗಳು ನಾವು ಒಬ್ಬರನ್ನೊಬ್ಬರು ಕೂಡಲೂ […]
ಲಹರಿ
ಖಾಸಗಿ ಬಸ್ ಪಯಣ ಜಿ.ಹರೀಶ್ ಬೇದ್ರೆ ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು. ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ […]
ಕಾವ್ಯಯಾನ
ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!
ಶಿವಮೊಗ್ಗ ಜಿಲ್ಲೆಯ ಚಳುವಳಿಗಳು
ಡಾ.ಸಣ್ಣರಾಮ ಹಿಂದಿನ ವಾರದ ಮುಂದುವರೆದ ಭಾಗ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ವೈಶಿಷ್ಟ್ಯಪೂರ್ಣವಾದುದು. ಈ ಜಿಲ್ಲೆಯಲ್ಲಿ ಸದ್ಯ ಏಳು ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ಅತೀ ಹೆಚ್ಚು ಮಳೆಯಾಗುವ ತಾಲ್ಲೂಕುಗಳಾದರೆ, ಮೂರು ಸಾಧಾರಣ ಮಳೆಯಾಗುವ ತಾಲ್ಲೂಕುಗಳು. ದಕ್ಷಿಣ ಭಾರತದ ‘ಚಿರಾಪುಂಜಿ’ ಎಂದು ಪ್ರಖ್ಯಾತವಾಗಿರುವ ಆಗುಂಬೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ದಟ್ಟ ಮಲೆನಾಡು ಅರೆಮಲೆನಾಡು ಭಾಗಗಳು ಜಿಲ್ಲೆಗೆ ಪ್ರಾಕೃತಿಕ, ಸಾಂಸ್ಕೃತಿಕ ವೈಶಿಷ್ಟತೆಯನ್ನು ತಂದುಕೊಟ್ಟಿದೆ. ಭಾಷೆಯ ಬಳಕೆಯಲ್ಲಿಯೂ ಈ ಏಳು ತಾಲ್ಲೂಕುಗಳು ಸೂಕ್ಷ್ಮವಾಗಿ ಭಿನ್ನತೆ ಕಂಡು ಬರುತ್ತದೆ. ಈ ಭಿನ್ನತೆ ಮತ್ತು ವೈಶಿಷ್ಟತೆ ಅಲ್ಲಿನ […]