Day: November 14, 2019

ಕಥಾಗುಚ್ಛ

ಜೀವನವೆಂದರೆ ಹೀಗೇನೆ ಟಿ.ಎಸ್.ಶ್ರವಣಕುಮಾರಿ ಪುಟ್ಟ ದೀಪೂಗೆ ಇವತ್ತು ಶಾಲೆಯಿಂದ ಬರುವಾಗಲೇ ಎರಡು ರೆಕ್ಕೆ ಹುಟ್ಟಿಕೊಂಡು ಬಿಟ್ಟಿತ್ತು. ಯಾವಾಗಲೂ ತನ್ನನ್ನು ಎರಡನೆಯ ಸ್ಥಾನಕ್ಕೆ ತಳ್ಳುತ್ತಿದ್ದ ಪುನೀತನನ್ನು ಅವನು ಎರಡನೆಯ ಸ್ಥಾನಕ್ಕೆ ಕಳಿಸಿ ತಾನು ಅವನ ಜಾಗದಲ್ಲಿ ಹೆಮ್ಮೆಯಿಂದ ನಿಂತಿದ್ದ. ಟೀಚರ್ ಮಾರ್ಕ್ಸ್ ಕಾರ್ಡ್ ಕೊಡೋವಾಗ ಪುನೀತನ ಮುಖ ನೋಡ್ಬೇಕಿತ್ತು. `ತಾನೇ ಫಸ್ಟ್ ಬರೋದು ಅನ್ನೋ ಜಂಭ… ಬೀಗ್ತಾ ಎಲ್ಲರ ಕಡೆ ನೋಡ್ತಾ ಇದ್ದ. ಆದರೆ ತನ್ನ ಹೆಸರು ಹೇಳಿದ ತಕ್ಷಣ ಅವನ ಮುಖ ಹೇಗಾಗಿ ಹೋಯಿತು…. ಹಾ! ಹಾ! […]

ನಿಮ್ಮೊಂದಿಗೆ ಮಕ್ಕಳ ಬಗ್ಗೆ ಎರಡು ಮಾತು

ಇವತ್ತು ನವೆಂಬರ್ ಹದಿನಾಲ್ಕು ಮಕ್ಕಳದಿನಾಚರಣೆ. ಯಾರ ನೆನಪಿನಲ್ಲಿ  ಆಚರಿಸುತ್ತಿದ್ದೇವೆ ಅನ್ನುವುದಕ್ಕಿಂತ, ಹೇಗೆ ಮತ್ತು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಆಚರಿಸುತ್ತಿದ್ದೇವೆಂಬುದು ಮಾತ್ರ ನಮಗೆ ಮುಖ್ಯವಾಗಬೇಕಿದೆ. ಮಕ್ಕಳ ದಿನದಂದು ಮಕ್ಕಳಿಂದ ನೃತ್ಯ ಮಾಡಿಸಿ, ಆಟ  ಆಡಿಸಿ, ಸಿಹಿ ಹಂಚಿ ಮಕ್ಕಳ ಬಗ್ಗೆ ಉದ್ದನೆಯ ಬಾಷಣಗಳನ್ನು ಬಿಗಿಯುವಷ್ಟಕ್ಕೆ ಈ ಆಚರಣೆಯನ್ನು ಮುಗಿಸಲಾಗುತ್ತಿದೆ. ಆದರೆ  ಮಕ್ಕಳದಿನದಂದು ಮಾತ್ರವಲ್ಲದೆ ಪ್ರತಿನಿತ್ಯವು ನಮಗೆ ಮಕ್ಕಳ ಬಗ್ಗೆ ಕಾಳಜಿ-ಪ್ರೀತಿಯಿರಬೇಕು. ಯಾಕೆಂದರೆ ಯಾವುದೇ ನಾಡಿನ ಭವಿಷ್ಯ ನಿಂತಿರುವುದು ಆ ನಾಡಿನ ಮಕ್ಕಳು ಹೇಗೆ ಪಾಲಿಸಲ್ಪಡುತ್ತಿದ್ದಾರೆ-ಬೆಳೆಸಲ್ಪಡುತ್ತಿದ್ದಾರೆ  ಎನ್ನುವುದರ ಮೇಲೆ. ಹಾಗಾಗಿ […]

ಮಕ್ಕಳ ದಿನ

ಅಣ್ಣ ಬಾರಣ್ಣ ಸಿಂದು ಭಾರ್ಗವ್ ಅಣ್ಣ ಅಣ್ಣ ನನ್ನ ಜೊತೆಗೆ ಆಡಲು ಬಾರಣ್ಣ ಬ್ಯಾಟು ಬಾಲು ತಂದು ಇಡುವೆನು ಬೇಗ ಬಾರಣ್ಣ ಸ್ಕೂಲ್ ಗೆ ಹೋಗುವೆ ನನ್ನನು ಬಿಟ್ಟು ಏಕೆ ಹೇಳಣ್ಣ ತಿರುಗಿ ಬರುವ ತನಕ ಕಾಯುವೆ ನಿನ್ನೀ ಹಾದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಅಂಗಡಿಗೆ ಬಾರಣ್ಣ ಮಿಠಾಯಿ ಕೊಡಿಸು ಆಟಿಕೆ ಕೊಡಿಸು ಎಂದು ಕೇಳೆನಣ್ಣ. ನಿನ್ನ ಕೈಹಿಡಿದೇ ಸಾಗುವೆ ಪೂರ ಬೀದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಊಟಕೆ ಬಾರಣ್ಣ ನಾನೊಂದು ತುತ್ತು ನೀನೊಂದು […]

Back To Top