ಜನರನ್ನು ತಲುಪುವ ಮಾರ್ಗ

library with books

ಕು.ಸ.ಮಧುಸೂದನ ರಂಗೇನಹಳ್ಳಿ

ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು-

ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ.

ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ ಸಾಮಾನ್ಯ ಓದುಗನೊಬ್ಬನಿಗೆ ನೇರವಾಗಿ ತಲುಪಬಲ್ಲಂತಹ  ಬರಹಗಳು ಅವುಗಳಲ್ಲಿ ಕಾಣಬರುವುದಿಲ್ಲ. ಹಾಗೆ ಗಂಬೀರವಾಗಿ ಬರೆಯುವುದೇ ತಮ್ಮ ಪ್ರತಿಭೆಯ ಅನಾವರಣ ಎನ್ನುವಂತಹ  ಭಾವನೆ ಬಹಳಷ್ಟು ಲೇಖಕರಿಗೆ ಇರುವಂತೆ ಕಾಣುತ್ತಿದೆ. 

ಹೀಗಿರುವಾಗ ಸಾಹಿತ್ಯಕ ಪತ್ರಿಕೆಗಳು ಹೇಗೆ ಬದುಕಲು ಸಾದ್ಯ?

ಸಾಹಿತ್ಯಕ ಪತ್ರಿಕೆಗಳನ್ನೂ ಸರಳವಾಗಿ, ಗಂಬೀರ ವಿಷಯವನ್ನೂ ಜನರನ್ನು ತಲುಪುವಭಾಷೆಯಲ್ಲಿ ತರದ ಹೊರತು ಯಾವ ಸಾಹಿತ್ಯ ಪತ್ರಿಕೆಯೂ ಬಹಳ ಕಾಲ ಬದುಕಲುಸಾದ್ಯವಿಲ್ಲ. ಅದರಪರಿಣಾಮವಾಗಿ ಪ್ರಗತಿಪರ ವಿಚಾರಧಾರೆಗಳು,ಕೋಮುವಾದ ಮತ್ತು ಬಂಡವಾಳಶಾಹಿ ಶಕ್ತಿಗಳಕುರೂಪಿ ಮುಖಗಳ ಪರಿಚಯ ಜನಸಾಮಾನ್ಯರಿಗೆಆಗುತ್ತಿಲ್ಲ. ಹೀಗಾಗಿಯೇ  ನಮ್ಮ ಹೋರಾಟಗಳು ಬಹುಜನರನ್ನುತಲುಪುತ್ತಿಲ್ಲಇನ್ನಾದರುನಮ್ಮ ಸಾಹಿತ್ಯ ಪತ್ರಿಕೆಗಳ ಲೇಖಕರು ತಮ್ಮ ನುಡಿಕಟ್ಟನ್ನು ಬಲಾಯಿಸಿಕೊಳ್ಳಬೇಕು. 

ಸರಳವಾಗಿ ಜನರನ್ನು ತಲುಪುವಂತೆ ಬರೆಯುವುದೇ ಮಹಾಪರಾಧವೆಂದು ನಂಬಿಕೊಂಡಿರುವ ನಮ್ಮ  ಸಾಹಿತಿಗಳು ಸಹ ತಮ್ಮ ವಿಚಾರಸಂಕೀರ್ಣಗಳ, ವಿಶ್ವ ವಿದ್ಯಾನಿಲಯಗಳ ಗಾಂಭೀರ್ಯಭರಿತ ಶಬ್ದಗಳ ಹಂಗಿನಿಂದ ಹೊರಬಂದು  ಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕುಇಲ್ಲ ಜನರ  ಬಾಯಲ್ಲಿ ನಮ್ಮ ಹೆಸರು ಬಂದು ಪ್ರಚಾರ ಸಿಕ್ಕರೆ ಸಾಕು ನಮ್ಮ ಬರಹಗಳನ್ನು ಅವರು ಓದದೇ ಹೋದರೂ ನಡೆಯುತ್ತದೆ ಎಂದವರು ಬಾವಿಸಿದ್ದರೆ ನನ್ನದೇನೂ ತಕರಾರೇನಿಲ್ಲ.

 ಅದೇ ನೀವು ಬಲಪಂಥೀಯ ವಿಚಾರಧಾರೆಯ ಪತ್ರಿಕೆಗಳನ್ನು  ಮತ್ತು ಪುಸ್ತಕಗಳತ್ತ ಗಮನಹರಿಸಿನೋಡಿ:  

ಜನಸಾಮಾನ್ಯರಿಗೆ ಅರ್ಥವಾಗುವ ಬಾಷೆಯಲ್ಲಿ ತಮಗೇಒಗ್ಗುವ ಲೇಖಕರಿಂದ ಬರೆಸಿ ಅತ್ಯಂತಕಡಿಮೆ ಬೆಲೆಯಲ್ಲಿ ಪತ್ರಿಕೆ ಪುಸ್ತಕಗಳನ್ನು ಅವರು ಹೊರ ತರುತ್ತಿದ್ದಾರೆ. ಐದು ಹತ್ತುರೂಪಾಯಿಗಳಕಿರು ಹೊತ್ತಿಗೆಗಳನ್ನು ಮಾಡಿತಮ್ಮ ವಿಚಾರಧಾರೆಯನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಲುಪಿಸುತ್ತಿದ್ದಾರೆ

ಹೀಗಾಗಿಯೇ ಬಲಪಂಥೀಯ ವಿಚಾರದಾರೆಗಳು ಜನಸಾಮಾನ್ಯರನ್ನು ವೇಗವಾಗಿ ತಲುಪಿ ,ಅವರು ಅದನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ. 

ಇದರ  ನಡುವೆ ನಾವುಪ್ರಗತಿಪರ ವಿಷಯಗಳನ್ನು ಗಂಬೀರವಾಗಿ ಅವರಿಗೆ ಅರ್ಥವಾಗದ ಬಾಷೆಯಲ್ಲಿ ಹೇಳಿದರೆ ಅವರಿಗೆ ಸತ್ಯ ಸುಳ್ಳಿನ ನಡುವೆ  ವ್ಯತ್ಯಾಸಹೇಗೆ ತಿಳಿಯುತ್ತದೆ. ಹಾಗಾಗಿಯೇ ನಮ್ಮ    ವಿಚಾರಗಳೇನಿದ್ದರೂ ಸೆಮಿನಾರುಗಳಲ್ಲಿ ಕಮ್ಮಟಗಳಲ್ಲಿಯೇ ಕೊಳೆತು ಹೋಗುತ್ತಿವೆ. ಇದರಬಗ್ಗೆ ನಮ್ಮ ವಿಚಾರವಂತರು ಯೋಚಿಸಬೇಕಿದೆ

ಕು.ಸ.ಮಧುಸೂದನ ರಂಗೇನಹಳ್ಳಿ


4 thoughts on “ಜನರನ್ನು ತಲುಪುವ ಮಾರ್ಗ

  1. ಸರ್ ನೀವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ನಮ್ಮ ಸ್ಥಳೀಯ ಹಿರಿಯ ಸಾಹಿತಿಗಳ ಹತ್ತಿರ ನನ್ನ ಬರಹ ಸರಳವಾಗಿದೆ ಅಂದ್ರು. ಜನರನ್ನು ತಲಪಲು ಭಾಷೆ ಸರಳವಾಗಿದ್ರೆ ಚೆನ್ನ ಅಲ್ವಾ ಸರ್ ? ಅಂದೆ… ಅದಕ್ಕೆ ಅವರು ಸಾಹಿತ್ಯದಲ್ಲಿ ಹೊಸ ಪದಗಳನ್ನು ಉಪತೋಗಿಸಿ ಅಂದ್ರು. ಹೌದು ಅವರು ಹೇಳಿದ ಮಾತು ಸರಿ ಇದೆ . ಆದರೆ ಕೆಲ ಹೊಸ ಪದಗಳು ಓದುಗ ಎಲ್ಲರಿಗೂ ಅರ್ಥ ಆಗಲ್ಲ ಅಂದೆ ಸುಮ್ಮನಾದ್ರು…

  2. ಈ ಲೇಖನದಲ್ಲಿಯೇ ನಿಮ್ಮ ಪ್ರಾಬ್ಲಮ್ ನ ಉತ್ತರವಿದೆ. ನಿಮ್ಮ ಪ್ರಕಾರ” ಪ್ರಗತಿಪರ ವಿಚಾರಧಾರೆಗಳು,ಕೋಮುವಾದ ಮತ್ತು ಬಂಡವಾಳಶಾಹಿ ಶಕ್ತಿಗಳಕುರೂಪಿ ಮುಖಗಳ ಪರಿಚಯ ಜನಸಾಮಾನ್ಯರಿಗೆಆಗುತ್ತಿಲ್ಲ. ಹೀಗಾಗಿಯೇ  ನಮ್ಮ ಹೋರಾಟಗಳು ಬಹುಜನರನ್ನುತಲುಪುತ್ತಿಲ್ಲಇನ್ನಾದರುನಮ್ಮ ಸಾಹಿತ್ಯ ಪತ್ರಿಕೆಗಳ ಲೇಖಕರು ತಮ್ಮ ನುಡಿಕಟ್ಟನ್ನು ಬಲಾಯಿಸಿಕೊಳ್ಳಬೇಕು.”
    ಅಂದರೆ ಸಾಹಿತ್ಯವೆಂದರೆ ನೀವು ಹೇಳುವಂಥದ್ದೇ ಎನ್ನುವ ಧೋರಣೆ.ನಿಮ್ಮ ಸಾಹಿತ್ಯವನ್ನು,ವಿಚಾರವನ್ನೂ ಒಪ್ಪದ ದೊಡ್ಡ ವರ್ಗ ಇದೆ.ನಿಮ್ಮ ಸಾಹಿತ್ಯ ಅವರಿಗೆ ಸಹ್ಯವಲ್ಲ.ಇದೇ ಕಾರಣ. ಸಾಹಿತ್ಯ ಯಾವಾಗ ಈ ಇಸಂ ಗಳನ್ನು ಮೀರಿ ಹೊರಬರುವುದೋ ಆಗ ಎಲ್ಲರಿಗೂ ತಲುಪುತ್ತದೆ. ನೀವು ಒಪ್ಪದಿದ್ದರೂ ಬಿಟ್ಟರೂ ಇದೇ ಸತ್ಯ.

    1. ನಮ್ಮ ದೋರಣೆಯನ್ನು ಒಪ್ಪದವರಿಗು ಅರ್ಥವಾಗುವಂತೆ ನಾವು ಬರೆಯಬೇಕೆಂಬುದೆ ನನ್ನ ಆಶಯ- ಒಪ್ಪುವುದದು -ಬಿಡುವುದು ನಂತರದ್ದು…ಮೊದಲು ಜನರನ್ನುತಲುಪಬೆಕಷ್ಟೆ.
      ಜನರನ್ನು ತಲುಪದೇ ಹೋಗುವ ಸಾಹಿತ್ಯ ಯಾವುದೇ ಇಸಂದಾದರೂ ವ್ಯರ್ಥವೇ

Leave a Reply

Back To Top