ಶರೀಫರ ನೆನೆಯುತ್ತಾ…
ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. […]
ಕಾವ್ಯಯಾನ
ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..
ವೈದೇಹಿ-75
ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ
ಪುಸ್ತಕ ಸಂಭ್ರಮ
ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. […]