Day: November 3, 2019

ಕಾವ್ಯಯಾನ

ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ  ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ […]

ಕಾವ್ಯಯಾನ

ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ […]

Back To Top