ಸ್ವರ್ಗದ ಕುರುಹಿಲ್ಲವಿಲ್ಲಿ!
ಕು.ಸ.ಮಧುಸೂದನ ರಂಗೇನಹಳ್ಳಿ
ಆಡಿದ ಮಾತುಗಳೆಲ್ಲ ವಚನಗಳೇನಲ್ಲ
ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ
ರಕ್ತ ಒಸರುವ ಗತದ ಗಾಯ
ಮುಲಾಮುಗಳಿಗೆಲ್ಲ ಮಾಯುವುದಿಲ್ಲ
ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ
ನರಕದ ಭಯ ಯಾರಿಗಿದೆ ಇಲ್ಲೀಗ?
ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ
ದೇಹವೇ ದೇಗುಲವೆಂಬುದು ನೆನಪಾದೊಡನೆ
ದೂರವಾಗಿ ಮೈಥುನದಾಸೆ
ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ
ಗುಂಪುಗಳಿಂದ ದೂರನಿಂತ
ತರುಣಿಯರ
ತೊಡೆಗಳಿಂದೊಸರುವ ರಕ್ತದಲಿ
ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು
ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ
ಮಸ್ತಕಕ್ಕಿಳಿಸದೆ
ಸುಮ್ಮನೆ ನಡೆದು ಬಿಡು ಅಲೆಮಾರಿಯಂತೆ
ಇಲ್ಲಿ ಸಿಗಲಾರದ್ದು ನಿನಗಿನ್ನೆಲ್ಲಯೂ ಸಿಗಲಾರದು.
ಕು.ಸ.ಮಧುಸೂದನ ರಂಗೇನಹಳ್ಳಿ
ಅದ್ಬುತ..
“ದೂರವಾಗಿ ಮೈಥುನದಾಸೆ
ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ
ಗುಂಪುಗಳಿಂದ ದೂರನಿಂತ
ತರುಣಿಯರ
ತೊಡೆಗಳಿಂದೊಸರುವ ರಕ್ತದಲಿ”
ಸತ್ಯ ವಿಮರ್ಶೆಯಾದಗ ಉತ್ತರಗಳು ಬೂದಿಯೊಳಗೆ ಸೇರಿ ಬಿಡುವುದಲ್ಲವೇ?
ವಿಶ್ಲೇಷಣೆಗೆ ಥ್ಯಾಂಕ್ಸ್