ಕಾವ್ಯಯಾನ
ಇರಬಹುದೆ? ಪ್ರಮೀಳಾ ಎಸ್.ಪಿ. ನಿತ್ಯ ನಿರಂತರ ನೆರಳು ನೀಡುವ ಎಲೆ ಯುದುರದ ಮರವಾದರೂ ಇರಲಹುದೇ! ಮುಂಗಾರೂ ಮೂರೇ ದಿನ ಮಲ್ಲಿಗೆಯ ಪರಿಮಳವೂ ಸಪ್ತದಿನಗಳೇ! ಚಂದಿರನು ಬೆಳದಿಂಗಳ ತಿಂಗಳಿಡೀ ಹೊಳಪಾಗಿ ಹರವಲಹುದೇ! ತುಂಬೆಯ ರಸ ಸವಿದ ದುಂಬಿಯೊಂದು ಮತ್ತದರತ್ತ ಇರಲುಬಹುದೇ! ಅದರದರ ಕಾಲಕ್ಕೆ ಭಾವ ಬಕುತಿಯ ತಾಳಕ್ಕೆ ಸಿಕ್ಕಷ್ಟು ದಕ್ಕಿಸುವುದು ನೇಮವಲ್ಲವೇ! ಇಷ್ಟಾದರೂ ಹುಡುಕುತ್ತಲೇ ಇರುವೆ ನಿತ್ಯವೂ ಹಸಿರಾದ ಪ್ರೀತಿಯನು ನಾನು ಮೂರ್ಖಳಾದೆನೆ ಗೆಳೆಯ!
ನಮ್ಮ ಕವಿ
ಪ್ರತಿ ಎರಡು ವಾರಕ್ಕೊಮ್ಮೆ(ಎರಡನೆ,ನಾಲ್ಕನೇ ಶುಕ್ರವಾರ) ಕನ್ನಡದ ಕವಿಯೊಬ್ಬರು ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ಇಲ್ಲಿ ಪರಿಚಯಿಸಲಾಗುವುದು. ಈಸರಣಿಯ ಮೊದಲ ಕವಿಯ ಬದುಕು-ಬರಹ ನಿಮ್ಮ ಮುಂದಿದೆ: ಸತ್ಯಮಂಗಲ ಮಹಾದೇವ ಸತ್ಯಮಂಗಲ ಮಹಾದೇವ 1983 ಜೂನ್ 12 ರಂದು ತುಮಕೂರು ಜಿಲ್ಲೆಯ ಸತ್ಯಮಂಗಲಗ್ರಾಮದಲ್ಲಿ, ಬುಟ್ಟಿ ಹೆಣೆಯುವುದು, ಹಚ್ಚೆಹಾಕುವುದು, ವಿವಿಧ ವೃತ್ತಿಗಳಲ್ಲಿ ತೊಡಗಿದ್ದ ಅಲೆಮಾರಿ ಕುಟುಂಬದ ರಾಜಣ್ಣ ಮತ್ತು ಜಯಮ್ಮ ದಂಪತಿಗಳ ಎರಡನೆಯ ಮಗನಾಗಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಸತ್ಯಮಂಗಲದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಶ್ರೀಶಿವಾನಂದಪ್ರೌಢಶಾಲೆಯಲ್ಲಿ […]
ಆರ್ಥಿಕತೆ.
ನೋಟು ರದ್ದತಿಗೆ ಮೂರು ವರ್ಷ ಗಣೇಶ್ ಭಟ್ ಶಿರಸಿ 2016 ರ ನವೆಂಬರ್ 08 ರಂದು ಭಾರತದಲ್ಲಿ ಆಂತರಿಕ ರ‍್ಥಿಕ ರ‍್ಜಿಕಲ್ ಸ್ಟ್ರೈಕ್ ನಡೆಯಿತು. ರೂ. 500 , 1000 ರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯಲಾಯಿತು. ಕಪ್ಪು ಹಣವನ್ನು ಹೊರಗೆಡಹುವದು ಭ್ರಷ್ಟಾಚಾರ ನರ‍್ಮೂಲನೆ ಮಾಡಲು ಈ ಕಠಿಣ ನರ‍್ಣಯ ಕೈಗೊಳ್ಳಲಾಗಿದೆಯೆಂದು ಜನರಿಗೆ ಹೇಳಲಾಯಿತು. ಸ್ವಲ್ಪ ದಿನಗಳ ನಂತರ ನೋಟ ರದ್ದತಿಯ ಉದ್ದೇಶಗಳನ್ನು ಇನ್ನಷ್ಟು ವಿಸ್ತ್ರತಗೊಳಿಸಲಾಯಿತು. ಚಲಾವಣೆಯಲ್ಲಿರುವ ಖೋಟಾ ನೋಟುಗಳನ್ನು ಕಂಡು ಹಿಡಿಯುವುದು , ಭಯೋತ್ಪಾದಕರಿಗೆ […]