ನನ್ನೊಳಗೆ!
ಕನಸಿನೂರಿಂದ…. -ಕನಸಿನೂರಿನವ ಮತ್ತದೆ ದ್ವಂದ್ವ! ಚಿತ್ತಭಿತ್ತಿಯಲಿ ಸ್ಥಿರವಾಗಿ ಉಳಿದ ಅ ಮೊಗವನೆಲ್ಲಿ ಕಂಡೆ, ಪಡೆಯದೆಲೆ ಕಳೆದುಕೊಂಡೆ? ನೆನಪಿಸಿಕೊ ಹೃದಯ ಕವಾಟವೆ ಕಣ್ಣೊಳಗೆ ಬಿಂಬವಾಗಿ ಎದೆಯೊಳಗೆ ಕಂಬವಾಗಿ ನರನಾಡಿಗಳಲಿ ಜೀವ ಮಿಡಿತವಾಗಿ ನಿಂತಾ ಮೊಗವ ಎಲ್ಲಿ ಕಂಡೆ ಹೇಗೆ ಕಳೆದುಕೊಂಡೆ. ಮೊದಲ ನೋಟದಲೇನು ತುಂಬಿಕೊಂಡೆ ಆ ಮುದ್ದು ಮೊಗದ ನಕ್ಷತ್ರಗಳ ಕಣ್ಣುಗಳನೊ ಅದರೊಳಗಿನ ಬೆಳಕನ್ನೊ? ಆ ಬಿರಿಯದೆ ಬಿಗಿದ ತುಟಿಗಳ ಹಿಂದಿನ ಮೌನವನೊ? ಬಹಳ ವರುಷಗಳ ಹಿಂದೆ ಆ ಮುಖವನ್ನು ಮೊದಲ ಬಾರಿಗೆ ನೋಡಿದೆ. ಅದೇಕೊ ಆ ಮುಖ […]
ಕಾವ್ಯಯಾನ
ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ […]
ಶಿವಮೊಗ್ಗ ಜಿಲ್ಲೆಯ ಚಳುವಳಿಗಳು
(ಶಿವಮೊಗ್ಗ ಜಿಲ್ಲೆ ಹಲವಾರು ಚಳವಳಿಗಳ ಉಗಮಸ್ಥಾನವಾಗಿದೆ. ಇವತ್ತಿಗೂ ಶಿವಮೊಗ್ಗ ಜಿಲ್ಲೆಯ ಜನರ ಮನಸ್ಸುಗಳು ಪ್ರಗತಿಪರವಾಗಿಯೇ ಆಲೋಚಿಸುತ್ತಿವೆ. ಈ ಪ್ರಗತಿಪರ ಮನಸ್ಸುಗಳ ಮೂಲ ಬೇರು ಜಿಲ್ಲೆಯಲ್ಲಿ ಹುಟ್ಟಿದ ಚಳವಳಿಗಳಲ್ಲಿ ಅಡಗಿದೆ. ಈ ಕುರಿತು “ ಶಿವಮೊಗ್ಗ ಜಿಲ್ಲೆಯ ಚಳವಳಿಗಳು” ಎಂಬ ಹೆಸರಿನಲ್ಲಿ ಡಾ.ಸಣ್ಣರಾಮರವರು ಸವಿಸ್ತಾರವಾಗಿ ಪತ್ರಿಕೆಗೆ ಬರೆಯಲಿದ್ದಾರೆ.) ಡಾ.ಸಣ್ಣರಾಮ ಭಾಗ-ಒಂದು. ಮನುಷ್ಯ ವಿಕಾಸದ ಹಂತದಿಂದಲೇ ಒಬ್ಬ ಮತ್ತೊಬ್ಬನಂತಿಲ್ಲ, ಆಲೋಚನ ರೀತಿ, ಗ್ರಹಿಕೆ, ಪ್ರತಿಕ್ರಿಯೆ, ದೈಹಿಕ ಸ್ವರೂಪ, ಬಣ್ಣ ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. […]