Category: ಗಝಲ್

ಗಝಲ್

ಗಝಲ್ ಶುಭಲಕ್ಷ್ಮಿ ಆರ್ ನಾಯಕ ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರುಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರುಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ […]

ಗಝಲ್

ಗಝಲ್ ಶ್ರೀದೇವಿ ಕೆರೆಮನೆ ನೀನು ಮತ್ತೆ ಬರುವುದಿಲ್ಲವೆಂದು ಬುದ್ಧಿಗೆ ಅರ್ಥವಾಗಿದೆಹಾಳಾದ ಮನಸ್ಸು ಇನ್ನೂ ನಿನಗಾಗಿ ಕಾತರಿಸುತ್ತಿದೆ ಹೀಗೆ ಬಂದು ಹಾಗೆ ಹೋಗಲು ನಾನೇಕೆ ಬೇಕಿತ್ತು ಹೇಳುನನ್ನ ಮನೆಯಂಗಳದ ಮಲ್ಲಿಗೆ ನಿನಗೀಗ ಮರೆತು ಹೋಗಿದೆ ಅಗಲುವ ಮಾತಾಡಿದ್ದು ಇಂದು, ನಿರ್ಧಾರ ಎಂದಾಗಿತ್ತು?ಮಾಮರದ ಕೋಗಿಲೆಯೇಕೆ ಹೀಗೆ ಕರ್ಕಶವಾಗಿ ಅಳುತಿದೆ ಕೊನೆಯ ಕ್ಷಣದವರೆಗೂ ಗುಟ್ಟು ಬಿಡದ ಮಹಾ ಚತುರ ನೀನುನೆತ್ತರಿಲ್ಲದೇ ಇರಿಯುವುದನು ನಿನ್ನಿಂದ ಕಲಿಯಬೇಕಿದೆ ನಾಟಕದ ಮಂದಿರದಲ್ಲೀಗ ಕಣ್ಣು ಕುಕ್ಕುವ ಬೆಳಕಿಲ್ಲಮನಸನು ಬಲಿ‌ಪಡೆದ ಪ್ರಹಸನವು ಜಗಜ್ಜಾಹೀರಾಗಿದೆ ನಿನ್ನವಳೆಂಬ ಹೆಮ್ಮೆ ಎದೆಯೊಳಗೆ ಮೊರೆದು […]

ಗಝಲ್

ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು […]

ಗಝಲ್

ಗಝಲ್ ಸಹದೇವ ಯರಗೊಪ್ಪ ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆಒಲವ ಮಳೆಗೆ […]

ಗಝಲ್

ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ […]

ಗಝಲ್

ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ

ಗಝಲ್

ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ […]

ಕಾವ್ಯಯಾನ

ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂ‌ಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.

ಗಝಲ್

ಗಝಲ್ ಭಾಗೆಪಲ್ಲಿ ಕೃಷ್ಣಮೂರ್ತಿ ನೀ ದರ್ಷನಕೆ ಸಿಗದೆ ಕಾಡಿ ಕಾಡಿ ನೋಯಿಸುವೆನಿನ್ನ ಭಾವ ಚಿತ್ರವ ನೀಡದೆ ಕಾಡಿ ನೋಯಿಸುವೆ ನಮ್ಮ ಅಗಲಿಕೆ ಇಷ್ಟು ಧೀರ್ಘ ಕಾಲ ಆಗಿರುವಾಗಕನಸಲೂ ಅಪ್ಪಲು ಸಿಗದೆ ಹಿಂಸಿಸಿ ನೋಯಿಸುವೆ ನಮ್ಮ ಪ್ರೀತಿಯ ವಿಷಯ ಎಷ್ಟು ಗೋಪ್ಯ ವೆನೆನನ್ನ ಅಂತಿಮ ಕ್ಷಣವೂ ಅರಿಯದೆ ಬಹಳ ನೋಯಿಸುವೆ ಬೇರ್ಪಡಿಕೆಯಲಿ ನಮ್ಮ ಪ್ರೀತಿ ಇಷ್ಟು ಗಾಢವಾಗಿರೆಸೇರ್ಪಡಿಕಯ ಊಹೆ ಇದ್ದೂ ಹೀಗೇಕೆ ನೋಯಿಸುವೆ ಯಾವುದಾದರೂ ಬಹನೇ ಹುಡುಕಿ ಭೇಟಿಯಾಗು ಬಾಸುಮ್ಮನೆ ಹೆದರಿ ನೀನೂ ನೊಂದು ನನ್ನನೂ ನೋಯಿಸುವೆ ಕಾಲಕೂಡಿ […]

ಗಝಲ್

ಗಝಲ್ ರೇಮಾಸಂ ಎದೆಯ ಗೂಡಲಿ ಅವಿತಿರು ಕಾಣದಂತೆ ಯಾರಿಗೂಸಣ್ಣದನಿಲಿ ಹಾಡುತಿರು ಕೇಳಿಸದಂತೆ ಯಾರಿಗೂ ಒಪ್ಪಿದ ಮನಗಳ ಆಳವನು ಇವರಾರು ಅರಿಯರುಕಣ್ಣ ಸನ್ನೆಯಲಿ ಕರೆಯದಿರು ಎಂದಿನಂತೆ ಯಾರಿಗೂ ಲೋಕವು ಹುಚ್ಚನೆಂದು ಕೂಗಿದರೂ ಕೊರಗದಿರುಬೆಸುಗೆಯಲಿ ಹೆದರದಿರು ಬೆಪ್ಪನಂತೆ ಯಾರಿಗೂ ಇಂದು ಇರುವಿಕೆಯನು ತೋರಬೇಕಾಗಿದೆ ಜಗಕೆಬಂಧನದಲಿ ನೀ ಬೆಳಗುತಿರು ಸುಡದಂತೆ ಯಾರಿಗೂ ಬಳಲದಿರು ಪ್ರೇಮವಿರದ ಬಿರುಸಿನ ಗಡಸು ನುಡಿಗಳಿಗೆತಾಯಿ ಮಡಿಲಲಿ ಒರಗಿರು ಬೇಸರಿಸದಂತೆ ಯಾರಿಗೂ *****************

Back To Top