ಗಝಲ್
ಶುಭಲಕ್ಷ್ಮಿ ಆರ್ ನಾಯಕ
ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀ
ಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ
ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರು
ಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ
ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರು
ಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ
ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವ
ಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ
ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ ಳ ಕೋಮಲ ಹೃದಯ ಚೂರಾಗಿದೆ
ಭೇದ ಭಾವ ಸ್ವಾರ್ಥ ಮೋಹಗಳಿಂದ ಮಹಲುಗಳ ಕಟ್ಟಲುಂಟೇ ಸಖೀ
*****************************
Very good
ಚೆನ್ನಾಗಿದೆ
ಧನ್ಯವಾದಗಳು ಶ್ರೀ..
Super
Good
ಸಖಿಯ ಮನದಿಂಗಿತವನರಿತವನೇ ಸುಖಿ…….ಸೂಪರ್…
ಧನ್ಯವಾದಗಳು .
ಚೆನ್ನಾಗಿದೆ ಮೇಡಂ
ಚೆನ್ನಾಗಿದೆ ಮೇಡಂ… ಅಭಿನಂದನೆಗಳು
ತುಂಬಾ ಚೆನ್ನಾಗಿದೆ.