ಗಝಲ್
ಭಾಗೆಪಲ್ಲಿ ಕೃಷ್ಣಮೂರ್ತಿ
ನೀ ದರ್ಷನಕೆ ಸಿಗದೆ ಕಾಡಿ ಕಾಡಿ ನೋಯಿಸುವೆ
ನಿನ್ನ ಭಾವ ಚಿತ್ರವ ನೀಡದೆ ಕಾಡಿ ನೋಯಿಸುವೆ
ನಮ್ಮ ಅಗಲಿಕೆ ಇಷ್ಟು ಧೀರ್ಘ ಕಾಲ ಆಗಿರುವಾಗ
ಕನಸಲೂ ಅಪ್ಪಲು ಸಿಗದೆ ಹಿಂಸಿಸಿ ನೋಯಿಸುವೆ
ನಮ್ಮ ಪ್ರೀತಿಯ ವಿಷಯ ಎಷ್ಟು ಗೋಪ್ಯ ವೆನೆ
ನನ್ನ ಅಂತಿಮ ಕ್ಷಣವೂ ಅರಿಯದೆ ಬಹಳ ನೋಯಿಸುವೆ
ಬೇರ್ಪಡಿಕೆಯಲಿ ನಮ್ಮ ಪ್ರೀತಿ ಇಷ್ಟು ಗಾಢವಾಗಿರೆ
ಸೇರ್ಪಡಿಕಯ ಊಹೆ ಇದ್ದೂ ಹೀಗೇಕೆ ನೋಯಿಸುವೆ
ಯಾವುದಾದರೂ ಬಹನೇ ಹುಡುಕಿ ಭೇಟಿಯಾಗು ಬಾ
ಸುಮ್ಮನೆ ಹೆದರಿ ನೀನೂ ನೊಂದು ನನ್ನನೂ ನೋಯಿಸುವೆ
ಕಾಲಕೂಡಿ ಬರಬೇಕೆಂದು ಕಾರಣ ಹೇಳುತ ‘ಮಂಕೇ ‘
ಕೈಲಿರುವ ಅದ್ಭುತ ಕ್ಷಣ ಕಳೆದು ವೃಥಾ ನೋಯಿಸುವೆ.
*************************
ಸರ್, ಇದು ತಾಂತ್ರಿಕವಾಗಿ ಗಜಲ್ ಆಗಿಲ್ಲ. ಗಜಲ್ ನ ಜೀವಾಳವಾದ ಕಾಫಿಯ ಬಂದಿಲ್ಲ.
ಭಾವಾಭಿವ್ಯಕ್ತಿ ಚಂದವಿದೆ..
ಪ್ರತಿಕ್ರಿಯೆಗೆ ವಂದನೆ, ಅಭ್ಯಾಸ ಮಾಡುವೆ ಮೇಡಂ