ಗಝಲ್

ಗಝಲ್

ಎ. ಹೇಮಗಂಗಾ

ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆ
ಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನು
ಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳು
ಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದು
ಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದು
ತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

*****************************

4 thoughts on “ಗಝಲ್

  1. ಮಾಯಲೋಕದಲಿ ಮನವದು ಕನಸಿನೊಳು ಜಾರಿ ಹೋಗಿದೆ.

  2. ಸೂಪರ್
    ಸುಮಧುರ ಕಂಠದಲ್ಲಿ ಹಾಡಾಗಿ ಹೊರ ಹೊಮ್ಮಿದರೆ ಕೇಳುವ ಆನಂದವೇ ಪರಮಾನಂದ

  3. ಪ್ರೇಮದ ಉತ್ಕಟತೆ ಸುಂದರ ಸಾಲುಗಳಲ್ಲಿ ಹೊಮ್ಮಿದೆ.

  4. ಗಝಲ್ ನಲ್ಲಿರುವ ಮೌಲಿಕ ವಿಚಾರಗಳು ಮೊಗ್ಗು ತಾನರಳಿ ಹೂವಾದಂತಿದೆ.

Leave a Reply

Back To Top