Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ […]

ನಿಮ್ಮೊಂದಿಗೆ….

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ಪ್ರೇಮವೇ ಒಂದು ಧರ್ಮ.

ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು–

ಕಾವ್ಯಯಾನ

ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು […]

ನಿಮ್ಮೊಂದಿಗೆ

ಪ್ರಿಯ ಬರಹಗಾರರೆ- ಪ್ರಿಯ ಬರಹಗಾರರೆ,ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ. ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು. ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ. ಮೊದಲನೆಯದಾಗಿ ನಮ್ಮ  ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಮೂರನೆಯದಾಗಿ ಬ್ಲಾಗಿನ […]

ನಿಮ್ಮೊಂದಿಗೆ

ಪ್ರಿಯ ಬರಹಗಾರರಿಗೆ ಪ್ರಿಯರೆ ಆರಂಭದ ಅಡಚಣೆಗಳನ್ನು ದಾಟಿಸಂಗಾತಿ ಬ್ಲಾಗ್ ಐದನೆ ತಿಂಗಳನ್ನು ಪೂರೈಸುತ್ತಿದೆ.ಈ ನಿಟ್ಟಿನಲ್ಲಿ ಬರಹಗಾರರಿಗೆ ಕೆಲವು ಮಾತುಗಳನ್ನುಹೇಳಲೇ ಬೇಕಿದೆ.ಮೊದಲನೆಯದಾಗಿ ಇದುವರೆಗಿನ ನಿಮ್ಮಸಹಕಾರಕ್ಕೆ ದನ್ಯವಾದಗಳು. ಮುಂದೆಯೂತಮ್ಮ ಸಲಹೆ-ಸಹಕಾರಗಳು ಹೀಗೆ ಮುಂದುವರೆಯಲೆಂದು ಬಯಸುತ್ತೇನೆ ದಯಮಾಡಿ ನಿಮ್ಮಬರಹಗಳನ್ನುತಪ್ಪಿರದೆ ಟೈಪ್ ಮಾಡಿ ಕಳಿಸಿ,ಇನ್ನು ಬರಹಗಳಪಿಡಿಎಫ್ ಮತ್ತು ಪೋಟೊಪ್ರತಿಗಳನ್ನು ಕಳಿಸಬೇಡಿ. ಈಗಾಗಲೇ ಫೇಸ್ಬುಕ್ಕಿನಲ್ಲಿ ಹಾಕಿದಬರಹಗಳನ್ನು ಕಳಿಸದೆ,ನಿಮ್ಮಹೊಸ ಬರಹಗಳನ್ನು ಕಳಿಸಿ,ಆದಷ್ಟು ಗುಣ ಮಟ್ಟದ ಬರಹಗಳನ್ನು ಕಳಿಸಿಒಂದು ಬರಹಕ್ಕು ಮತ್ತೊಂದು ಬರಹಕ್ಕು ಕನಿಷ್ಠ  ಒಂದುವಾರ ಅಂತರವಿರಲಿ.ಬರಹದ ಗುಣಮಟ್ಟದ ಬಗ್ಗೆ ನೀವೇ ಮೌಲ್ಯಮಾಪನ ಮಾಡಿಕೊಂಡು  ಪ್ರಕಟಿಸಬಹುದಾದದ್ದು ಅನಿಸಿದರೆ […]

ನಿಮ್ಮೊಂದಿಗೆ

ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. […]

ಸೂಚನೆ

ಪ್ರಿಯರೆ, ನಮಸ್ಕಾರಗಳು.ಹೊಸ ವರ್ಷದಿಂದ (2020)ಸಂಗಾತಿ ಪತ್ರಿಕೆಯನ್ನು  ಪ್ರತಿ ಬುದವಾರ ಪ್ರಕಟಿಸಲಾಗುವುದು. ಆರಂಭದ ದಿನಗಳ ಅನಿಶ್ಚಿತತೆ ಈಗ ಮುಗಿದಿದ್ದು, ವಿಶೇಷ ಮತ್ತು ಅನಿವಾರ್ಯ ಸಂದರ್ಭ ಹೊರತು ಪಡಿಸಿದಂತೆ, ವಾರಕ್ಕೊಮ್ಮೆ ಪ್ರಕಟಿಸುವ ನಿರ್ದಾರ ಕೈಗೊಳ್ಳಲಾಗಿದೆ. ಪ್ರತಿ ಗುರುವಾರದಿಂದ ಮುಂಗಳವಾರದವರೆಗು ನಮಗೆ ತಲುಪಿದ ಬರಹಗಳನ್ನು ಬುದವಾರ  ಮುಂಜಾನೆ ಪ್ರಕಟಿಸಲಾಗುವುದು-ಅಂಕಣಗಳಿಗು ಇದು ಅನ್ವಯಿಸಲಿದೆ. ಎಂದಿನಂತೆ ಬರಹಗಾರರು ಮತ್ತು ಓದುಗರು ಸಹಕರಿಸಬೇಕಾಗಿ ಕೋರುತ್ತೇವೆ,ಸಂಪಾದಕರು. ಸಂಗಾತಿ ಪತ್ರಿಕೆ

ನಿಮ್ಮೊಂದಿಗೆ

ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು […]

ಜನರನ್ನು ತಲುಪುವ ಮಾರ್ಗ

ಕು.ಸ.ಮಧುಸೂದನ ರಂಗೇನಹಳ್ಳಿ ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು- ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ. ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ […]

Back To Top