ಕರೋನಾ ಮತ್ತು ಭಯ

ಜ್ಯೋತಿ ಡಿ.ಬೊಮ್ಮಾ

ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ ರೋಗಿ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕರೋನಾ ರೋಗದ ಹೆಸರಿನಿಂದಲೇ ಮನೊಸೈರ್ಯ ಕುಸಿಯುತ್ತಿದೆ. ಹೊರಗೆ ರಾಜಾರೋಷವಾಗಿ ಓಡಾಡುವವರು ಕರೋನಾ ಬಂದ ತಕ್ಷಣ ಭಯಭೀತರಾಗುತ್ತಿದ್ದಾರೆ.
Quarantine ಭಯದಿಂದ ಎಷ್ಟೋ ಜನರು ರೋಗ ಲಕ್ಷಣಗಳಿದ್ದರು ಪರಿಕ್ಷೆ ಮಾಡಿಸಿಕೊಳ್ಳದೆ, ರೋಗ ಉಲ್ಫಣಗೊಂಡಮೇಲೆ ಆಸ್ಪತ್ರೆಗೆ ದೌಡಾಯಿಸುತ್ತಾರೆ.ಅಷ್ಟರಲ್ಲಿ ಸೋಂಕು ವ್ಯಾಪಿಸಿ ಮರಣ ಸಂಭವಿಸಬಹುದು.

ಭಯಕ್ಕೆ ಮತ್ತೊಂದು ಕಾರಣ ರೋಗದ ಸಂದರ್ಬದಲ್ಲಿ ತಮ್ಮವರಾರು ತಮ್ಮ ಬಳಿ ಇರದೆ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ಇರಬೇಕಾದ ಸಂದರ್ಭ ಬಂದಾಗ ರೋಗಿ ತನ್ನ ಆತ್ಮಸೈರ್ಯ ಕಳೆದುಕೊಳ್ಳುತ್ತಾನೆ. ಅನಾಥ ಪ್ರಜ್ಞೆ ಯಿಂದ ಖಿನ್ನತೆಗೊಂಡು ರೋಗ ನೀರೋಧಕ ಶಕ್ತಿ ಕುಂಠಿತಗೊಂಡು ಚಿಕಿತ್ಸೆ ದೇಹಕ್ಕೆ ಪ್ರತಿಕ್ರಿಯಿಸಲಾರದು.
ಇನ್ನೊಂದು ಭಯ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ದೂರದಿಂದಲೇ (ತುರ್ತು ಸಂದರ್ಬ ಹೊರತು ಪಡಿಸಿ) ರೋಗಿಗಳೊಂದಿಗೆ ಸ್ಪಂದಿಸುವದರಿಂದ ರೋಗಿ ಕುಗ್ಗುತ್ತಾನೆ.ರೋಗ ಬೃಹದಾಕಾರವಾಗಿ ಕಾಡತೋಡಗುತ್ತದೆ.

ಇನ್ನೂ ಕರೋನಾ ರೋಗಿಗಳು ಮನೆಯಲ್ಲಿದ್ದುಕೊಂಡೆ ಆರೈಕೆ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿರುವದು ಸಮಧಾನಕರವೆ. ಆದರೆ ಮನೆಯವರು ರೋಗಿಯೊಂದಿಗೆ ಪ್ರೀತಿಯಿಂದ ಕಾಳಜಿಯಿಂದ ನೊಇಡಿಕೊಳ್ಳಬೇಕು.ಅವರಿಂದ ನಮಗೆಲ್ಲಿ ಹರಡುವದೊ ಎಂದು ರೋಗಿಯನ್ನು ಅನಾದರ ಮಾಡಿದರೆ ರೋಗಿ ನಿರಾಶೆಯಿಂದ ಕುಗ್ಗಬಹುದು.ರೋಗಿಯೊಂದಿಗೆ ಕೆಲದಿನ ದೈಹಿಕ ಅಂತರವಿಟ್ಟುಕೊಂಡು ಅವರನ್ನು ಆರೈಕೆ ಮಾಡಬಹುದು. ತಮ್ಮವರ ಪ್ರೀತಿ ಅಂತಃಕರಣ ದಿಂದಲೇ ರೋಗ ಗುಣಮುಖವಾಗಬಹುದು.

Portrait of frustrated anxious girl hear horrible corona novelty disease feel fear touch fists face chin wear good. Portrait of frustrated anxious girl hear royalty free stock photos

ಹಾಗಾದರೆ ಈ ಭಯದ ಮೂಲ ಶುರುವಾದದ್ದು ಎಲ್ಲಿಂದ..? ರೋಗ ಬಂದರೆ ಸಾವು ಖಚಿತ ಎಂದು ನಂಬಿದ್ದರಿಂದ ,ಅಥವಾ ತಾವೇ ಅಂತಹ ಸಂದರ್ಬ ನೋಡಿದ್ದರಿಂದ ಇರಬಹುದು.
ಇನ್ನೊಂದು ಈ ರೋಗ ತಮ್ಮವರಿಂದ ಪ್ರತ್ಯಕಗೊಳಿಸುತ್ತದೆ ಎಂಬ ದುಗಡ ..
ಆಸ್ಪತ್ರೆಯಲ್ಲಿ ವೈದ್ಯರು ದೂರದಿಂದಲೆ ತಮ್ಮ ಕರ್ತವ್ಯ ನಿರ್ವಹಿಸುವ ರೀತಿಯಿಂದ..
ರೋಗ ಬಂದಮೇಲೆ ಗುಣಮುಖ ವಾಗುವದೋ ಇಲ್ವೋ ಎಂಬ ಆತಂಕ..
ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕೋ ಬೇಡವೂ ಎಂಬ ಇಬ್ಬಂದಿತನ..
ರೋಗ ದೃಢ ಪಟ್ಟರೆ ಅಕ್ಕಪಕ್ಕದ ಮನೆಯವರ ನಿರಾದರ..
ಇಂತಹ ಎಲ್ಲಾ ಸಂದರ್ಬಗಳು ಭಯ ಹೆಚ್ಚಾಗಲು ಕಾರಣವಾಗುತ್ತಿವೆ.

ಉದ್ಯೋಗಸ್ಥರು ಭಯಮುಕ್ತರಾಗಿ ನಿರಾಂತಕವಾಗಿ ಕಾರ್ಯನಿರ್ವಹಿಸದಂತಾಗಿದೆ.ಹೋರಗೆ ಹೋದರೆ ಎಲ್ಲಿ ಸೋಂಕು ತಗಲುವದೋ ಎಂಬ ದುಗುಡದಲ್ಲೆ ಕಾರ್ಯೋನ್ಮುಖರಾಗಬೇಕಾಗಿರುವದು ಅನಿವಾರ್ಯ. ಮಕ್ಕಳಂತೂ ಶಾಲೆಯೆ ಮರೆತಂತಾಗಿದ್ದರೆ.ಎಲ್ಲಿ ನೋಡಿದ್ದರು ರೋಗ ಮತ್ತು ಭಯದ್ದೆ ವಿಜೃಂಬಣೆ.ಎಲ್ಲವೂ ಅಯೋಮಯ.

ಒಂದಂತೂ ಸತ್ಯ ,ರೋಗ ಗೆಲ್ಲಬೇಕಾದರೆ ಆತ್ಮಸೈರ್ಯ ಅತ್ಯಂತ ಮುಖ್ಯ.ಆದರೆ ಈ ಸಂದರ್ಬದಲ್ಲಿ ಬಹುತೇಕ ಜನ ಅದನ್ನೇ ಕಳೆದುಕೊಳ್ಳುತ್ತಿದ್ದಾರೆ.ಕರೋನಾ ಬಂದು ಗುಣಮುಖರಾದವರು ಉತ್ಸಾಹ ಭರಿತರಾಗಿರದೆ ಯಾವದೇ ಖಿನ್ನತೆಯಿಂದ ಬಳಲುವರಂತೆ ಕಾಣುತಿದ್ದಾರೆ.ಎಕೆಂದರೆ ರೋಗದ ಭಯ ಅಷ್ಟೊಂದು ಆವರಿಸಿಕೊಂಡಿದೆ.

ಈಗ ಇದರೊಂದಿಗೆ ಬದುಕುವದು ಅನಿವಾರ್ಯ. ಯಾವಾಗಾದರೂ ಒಮ್ಮೆ ಬರುತ್ತದೆ ಎಂದಿಟ್ಟುಕೊಳ್ಳೊಣ.ಭಯ ಪಡದೆ ಹಿಂದೆ ಅನೇಕ ಸಲ ಬಂದು ಹೋದ ನೆಗಡಿ ಕೆಮ್ಮನ್ನೆ ನೆನಸಿಕೊಂಡು ಹಗುರವಾಗಿ ತೆಗೆ್ಉಕೊಳ್ಳಬೇಕು.ಭಯ ಪಟ್ಟಷ್ಟು ರೋಗದ ತೀವ್ರತೆ ಹೆಚ್ಚುತ್ತದೆ.
ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಕರೋನಾ ರೋಗಕ್ಕೆ ಭಯಪಡದೆ ಇರುವದು.ಆತ್ಮವಿಶ್ವಾಸ ಗಟ್ಟಿಗೋಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮತ್ತು ಸ್ವಲ್ಪ ಮಟ್ಟಿನ ಯೋಗ ಮತ್ತು ದ್ಯಾನಗಳು ಅತ್ಯವಶ್ಯಕ.

******************************

.

Leave a Reply

Back To Top