ಸಾನಿಯಾಳನ್ನು ನಾನು ಮೆಚ್ಚಲು ಆಕೆಯ ಆಟದ ಹೊರತಾಗಿಯು ಇನ್ನೊಂದಿಷ್ಟು ಕಾರಣಗಳಿವೆ…
ಅವಳು ಬೆಳೆದು ಆಡಿದಂತೆಲ್ಲ ಯಶಸ್ಸೇನೊ ದೊರೆಯಿತು,ಆದರೆ ಅದರ ಜೊತೆಗೆ ಅವಳನ್ನು ವಿವಾದಗಳು ಕಾಡತೊಡಗಿದವು. ಆಕೆ ಮೈತುಂಬಾ ಬಟ್ಟೆ ಧರಿಸಿ ಆಡಬೇಕೆಂದೂ ಇಲ್ಲದಿದ್ದರೆ ಆಕೆಗೆ ತಕ್ಕ ಶಾಸ್ತಿ ಮಾಡುವುದಾಗಿ ಅವಳದೇ ಧರ್ಮದ ಮತಾಂಧರು ಬೆದರಿಕೆ ಒಡ್ಡತೊಡಗಿದ್ದರು.ಕೆಲವು ಮುಠ್ಹಾಳರಂತು ಆಕೆ ಸೀರೆ ಅಥವಾ ಬುರ್ಕಾ ಧರಿಸಿ ಆಡಲಿ ಅನ್ನುವವರೆಗು ಹೋಗಿದ್ದರು. ಇಂತಹ ಬೆದರಿಕೆಗಳಿಗೆ ಆಕೆ ಜಗ್ಗದೆ ತನ್ನ ಪಾಡಿಗೆ ತಾನು ಆಟಮುಂದುವರೆಸುತ್ತಾ ಹೋದಳು. ಹಾಗೆ ಮತೀಯವಾದಿಗಳ ಕ್ರೂರ ದೃಷ್ಠಿಗೆ ಬಿದ್ದೂ ಅವಳೆಂದೂ ತನ್ನ ಏಕಾಗ್ರತೆಯನ್ನು ಕಳೆದುಕೊಳ್ಳಲಿಲ್ಲ ಆ ಛಲ ಯಾರೂ ಮೆಚ್ಚುವಂತಾದ್ದು
ಅದರ ನಂತರ ಆಕೆಯ ಮದುವೆಯ ವಿವಾದ ಶುರುವಾಯಿತು. ಎಲ್ಲ ಹರಯದ ಹೆಣ್ಣುಮಕ್ಕಳಂತೆ ಆಕೆಯಲ್ಲು ಪ್ರೇಮ ಮೊಳಕೆಯೊಡತೊಡಗಿತು. ಬದುಕಿನ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗಲೇ ಆಕೆ ತನ್ನಷ್ಟೆ ಜನಪ್ರಿಯನಾದ ಹುಡುಗನನ್ನು ಪ್ರೀತಿಸ ತೊಡಗಿದಳು. ತನಗರಿವಿಲ್ಲದಂತೆ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ ಆಕೆಗೆ ಈಗ ತನ್ನ ಧರ್ಮದವರ ಬೆದರಿಕೆಗಿಂತ ತನ್ನದೇಶದ ಜನರೇ ಶತ್ರುಗಳಂತಾದರು.
ಕಾರಣ: ಆಕೆ ಪ್ರೀತಿಸಿದ್ದು ಇಂಡಿಯಾದ ಬದ್ದವೈರಿ ದೇಶವಾದ ಪಾಕಿಸ್ತಾನದ ಹುಡುಗನನ್ನು. ಮೊದಲೇ ಮುಸ್ಲಿಂ ದ್ವೇಷವನ್ನು ಹುಟ್ಟುಹಾಕಿದ್ದ ನಮ್ಮ ದೇಶದ ಬಲಪಂಥೀಯ ಶಕ್ತಿಗಳು ಆಕೆಯ ಪ್ರೇಮವನ್ನು ನಾಟಕವೆಂತಲು,ಆಕೆಯ ವಿವಾಹವನ್ನು ದೇಶದ್ರೋಹವೆಂತಲು ವರ್ಣಿಸುತ್ತ ಜನರನ್ನು ಆಕೆಯ ವಿರುದ್ದ ಎತ್ತಿ ಕಟ್ಟಲು ತೊಡಗಿದರು. ಇಂತಹ ಸನ್ನಿವೇಶದಲ್ಲಿಯೂ ಸಹನೆ ಕಳೆದುಕೊಳ್ಳದ ಆ ಹೆಣ್ಣುಮಗಳು ಇಂಗ್ಲೇಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು ಮನಮುಟ್ಟುವಂತಾದ್ದು.– ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು-—
ದುರಂತವೆಂದರೆ ನಮ್ಮ ಮಾಧ್ಯಮಗಳು ಆಕೆಯ ಮಾತುಗಳನ್ನು ಜನರಿಗೆ ತಲುಪಿಸಲೂ ಹಿಂದೇಟು ಹಾಕಿದವು. ಆದರೆ ಆಕೆಯ ವೃತ್ತಿಜೀವನ ಅಲ್ಲಿಗೇ ನಿಲ್ಲಲಿಲ್ಲ.
.
ಧರ್ಮಾಂಧರ ಊಹೆಯಂತೆ ಆಕೆ ಇಂಡಿಯಾದ ನಾಗರೀಕತ್ವ ತ್ಯಜಿಸಿ ಪಾಕಿಸ್ತಾನದ ಪ್ರಜೆಯಾಗಲಿಲ್ಲ. ಕೊನೆಯವರೆಗು ನಾನು ನನ್ನ ದೇಶದ ಪರವಾಗಿಯೇ ಆಡುತ್ತೇನೆಂದು ಆಕೆ ಹೇಳಿದ ಮಾತುಗಳು ನನ್ನಂತಹ ಲಕ್ಷಾಂತರ ಜನರ ಹೃದಯಗಳನ್ನು ತೇವಗೊಳಿಸಿದವು!
ವಿಶ್ವದ ಅತ್ಯುನ್ನತ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಾದ ಅಮೇರಿಕನ್ ಓಪೆನ್, ಫ್ರೆಂಚ್ ಓಪೆನ್, ಆಸ್ಟ್ರೇಲಿಯನ್ ಓಪೇನ್ ಮಿಕ್ಸೆಡ್ ಗಳನ್ನು(ಡಬಲ್ಸ್ ) ಗೆದ್ದು ತನ್ನ ಆಟಕ್ಕೆ ಯಾವ ವಿವಾದವು ಅಡ್ಡಿ ಬರಲಾರದೆಂಬುದನ್ನು ಜಗತ್ತಿಗೆ ತೋರಿಸುತ್ತಾ ಹೋದಳು. ವಿಂಬಲ್ಡನ್ ಸಹ ಗೆದ್ದು ಜಗತ್ತಿಗೆ ತನ್ನ ದೃಢತೆಯನ್ನು ಸಾಭೀತು ಪಡಿಸಿದ್ದಾಳೆ.
ಇಷ್ಟೆಲ್ಲಾ ಆದರು ಮದುವೆಯ ನಂತರವೂ ಅನೇಕ ಪ್ರಶಸ್ತಿಗಳನ್ನುಗೆಲ್ಲುವ ಮೂಲ ಯಾವುದೂತನ್ನ ಆಟವನ್ನು ನಿಲ್ಲಿಸಲಾರದೆಂದು ತೋರಿಸಿದಳು..
ಒಂದು ಮಗುವಿನ ತಾಯಿಯಾದ ನಂತರವೂ ಆಕೆ ಮತ್ತೆಅಂಕಣಕ್ಕಿಳಿದು ಆಡುವಾಗಲೂ ಆಕೆಯ ಟೀ ಶರ್ಟಿನ ಮೇಲಿದ್ದುದು ಇಂಡಿಯಾದ ರಾಷ್ಟ್ರ ಲಾಂಛನವೇ!
ದೇಶಭಕ್ತಿಯ ಬಗ್ಗೆ ಮಾತಾಡುವುದು ಸುಲಭ ಮತ್ತು ಅಗ್ಗವಾಗಿರುವ ಈ ಕಾಲಘಟ್ಟದಲ್ಲಿ ಸಾನಿಯಾ ನಿಜವಾದ ಭಾರತೀಯಳು
.
ಸಾನಿಯಾಳನ್ನು ಪ್ರೀತಿಸದಿರಲು ಕಾರಣಗಳೇ ಇಲ್ಲ….
ಲವ್ ಯೂ ಸಾನಿಯಾ!
*********
ಕು.ಸ.ಮಧುಸೂದನ
ನಿಜ ಸರ್
ಥ್ಯಾಂಕ್ಸ್
ದುರಿತ ಕಾಲದಲ್ಲಿ ಸಾನಿಯಾ ಎಂಬ ಬೆಳಕಿನ ಧರ್ಮವನ್ನು ನೆನಪಿಸಿದ್ದು ಆಶಾದಾಯಕ ಹಾಗೂ ಭರವಸೆ. ಸಾನಿಯಾ ಮಿರ್ಜಾಳ ನಿಲುವಿನ ಮೂಲಕ ನಿಜವಾದ ಭಾರತೀಯರ ಧರ್ಮ ಹಾಗೂ ಸೌಹಾರ್ದತೆಯನ್ನು ಲೇಖನದಲ್ಲಿ ಕಟ್ಟಿರುವಿರಿ….
ಧರ್ಮದ ಹೆಸರಲ್ಲಿ ಎನೆಲ್ಲ ಮಾಡಲು ಸಾಧ್ಯವೋ ಅವೆಲ್ಲವೂ ಚಾಚು ತಪ್ಪದೆ ಶಿಸ್ತು ಬದ್ದವಾಗಿ ನಡೆಸುವವರ ನಡುವೇ ನಾನು ಭಾರತೀಯಳು ಅನ್ನೋ ಮಾತೆ ಗೌರವಕ್ಕೆ ಪಾತ್ರರಾಗುವಂತದ್ದು…..ಸತ್ಯ ಒಪ್ಪದವರು ತೆಪ್ಪ ಎರುವರು….ನೈಸ್…
ಸಾನಿಯಾಳ ಕ್ರೀಡಾಶಕ್ತಿ ಮತ್ತು ಅವಳ ದೇಶ ಭಕ್ತಿ ಅವಳ ಪ್ರೇಮಾದರ್ಶಎಲ್ಲರಿಗೂ ಮಾದರಿಯಾಗಲಿ . ನಿಜ ಪ್ರೇಮ ಧರ್ಮದ ಮುಂದೆ ಯಾವ ಧರ್ಮವೂ ದೊಡ್ಡದಲ್ಲ. ವ್ಯಕ್ತಿಯ ಶಕ್ತಿ ಯನ್ನು ಬೆಳಕಿಗೆ ತಂದ ಲೇಖನ. ಅಭಿನಂದನೆಗಳು
Nice. ಸುಂದರವಾಗಿ ಬರೆದಿದ್ದೀರಿ.