ನಿಮ್ಮೊಂದಿಗೆ

ಸಂಪಾದಕೀಯ

Red Rose, BNSS Farming Pvt. Ltd. | ID: 16498244288

ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ    ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು.

ಸಂಗಾತಿಯ ಸಾಧನೆಯೇನು?

ಕೇಳಿದವರಿಗೆ ನನ್ನ ಉತ್ತರ:

ಒಂದು ವಿನಮ್ರ ಮುಗುಳ್ನಗುವಷ್ಟೆ!

ಹೆಚ್ಚೇನು ಹೇಳಲಿ?

ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ.

**

ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು:

ಮುನ್ನೂರ ಅರವತ್ತೈದು ದಿನಗಳು,

ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು,

ಮೂರು ಸಾವಿರಕ್ಕೂ ಹೆಚ್ಚಿನ  ಬರಹಗಳು

ಹದಿನೈದಕ್ಕೂ ಹೆಚ್ಚು ಅಂಕಣಗಳು

ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ  ಮಾಲತಿ ಯವರವರೆಗು ಹರಡಿದ ವಿಶಾಲ ಬರಹಗಾರರ ದಂಡು

ಕನ್ನಡ ಸಾಹಿತ್ಯಕ್ಕೆ    ಸಂಗಾತಿ ನೀಡಿದ ಅಲ್ಪ ಕೊಡುಗೆ.

ಇದರಲ್ಲಿ ನಿಮ್ಮ ಪಾಲೇ ಅಧಿಕ..

ಸಂಪಾದಕ ನೆಪ ಮಾತ್ರ!

***

ಮುಖ್ಯವಾಗಿ ಸಂಗಾತಿಗೆ——

ಜಾತಿ-ದರ್ಮಗಳಿಲ್ಲ,

ಗುಂಪುಗಳ ಗೊಡವೆಯಿಲ್ಲ,

ಅರಗಿಸಿಕೊಳ್ಳಲಾಗದಂತಹ ಸಿದ್ದಾಂತಗಳ ಹೆಣಬಾರವಿಲ್ಲ,

***

ಸಂಗಾತಿಗಿರುವುದು-

ಕನ್ನಡ ಸಾಹಿತ್ಯದ ಜೀವನದಿಗೆ ಸಂಗಾತಿಯ ಪುಟ್ಟಪುಟ್ಟ ಝರಿಗಳು ಸೇರಿ ಸಂಗಾತಿಯ ಸ್ರಮ ಸಾರ್ಥಕವಾಗಬೇಕು

***

ಹೆಚ್ಚೇನು ಹೇಳಲಿ?

ಮುಂದಿನ ದಿನಗಳಲ್ಲಿಯೂ ಸಂಗಾತಿಯ ಜೊತೆ ನೀವಿರುತ್ತೀರಿ ಎಂಬ ನಂಬಿಕೆ ನನ್ನದು.

***

Single red rose Royalty Free Vector Image - VectorStock

ಇಷ್ಟು ದಿನಗಳ ನಿಮ್ಮ ಪ್ರೀತಿಗೆ ಶರಣು


*************************************************

5 thoughts on “ನಿಮ್ಮೊಂದಿಗೆ

  1. ನೀವು ಹೇಳಿದ ಸಂಗತಿಗಳೆಲ್ಲ ನಿಜ. ಅದಕ್ಕೆ ನಾನು ನಿಮ್ಮೊಂದಿಗೆ.

  2. ನಿಮ್ಮ‌ಮನದಾಳದ ಮಾತುಗಳೆಲ್ಲವೂ ದಿಟ.ಇನ್ನೂ ಹೆಚ್ಚು ಸಮೃದ್ಧ ವಾಗಿ ಬೆಳೆಯಲಿ ಶುಭಹಾರೈಕೆಗಳು.ನಾವು ನಿಮ್ಮೊಂದಿಗೆ…ಬೆಸೆದ ನಂಟಾಗಿ ಸಾಗುವೆವು…ಶುಭವಾಗಲಿ *ಸಂಗಾತಿ ಪತ್ರಿಕೆಗೆ*

  3. ಶುಭವಾಗಲಿ…ಪತ್ರಿಕೆಯ ಜೊತೆಗೆ ಓದುಗ- ಲೇಖಕ/ಕಿ ಹೆಜ್ಜೆ ಹಾಕಬೇಕು. ಅಂತೆ ಪತ್ರಿಕೆ ಸಹ ಲೇಖಕರನ್ನು ತನ್ನ ಜೊತೆಗೆ ಕರೆದೊಯ್ಯಬೇಕು. ಈ ನಿಟ್ಟಿನಲ್ಲಿ ಸಂಗಾತಿಯ ಪಯಣ ಸ್ತುತ್ಯರ್ಹ..

  4. ತಮ್ಮ ಮಾತುಗಳೆಲ್ಲವೂ ಸತ್ಯ, ಹಾಗೂ ನಮ್ಮ ಬರಹ ಓದುಗರನ್ನು ತಲುಪುವಲ್ಲಿ, ಉತ್ತಮ ಸಾಹಿತಿಗಳ ಸಾಹಿತ್ಯದ ಕಂಪನ್ನು ನಮಗೆ ನೀಡುವಲ್ಲಿ ಸಂಗಾತಿ*ಯ ಕಾರ್ಯ ಶ್ಲಾಘನೀಯ, ಸಂಗಾತಿಯ ಕನ್ನಡ ಸೇವೆಗೆ ಶುಭವಾಗಲಿ, ಜಯವಾಗಲಿ.

  5. ಜಾತಿ, ಧರ್ಮ‌,ಪಂಥ, ಸಿದ್ಧಾಂತಗಳ ಹಂಗಿಲ್ಲದ ಸಂಗಾತಿ ಪತ್ರಿಕೆಗೆ ಶುಭಾಶಯಗಳು.ಇಂತಹಾ ಒಂದು ಪತ್ರಿಕೆ ನಡೆಸುತ್ತಿರುವ ತಮಗೂ ಶುಭಾಶಯಗಳು

Leave a Reply

Back To Top