Category: ಇತರೆ

ಇತರೆ

ಸಂಗೀತ ಸಂಗಾತಿ

ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ […]

ಮಾನವ ಹಕ್ಕುಗಳು

ಡಿಸೆಂಬರ್ – 10 ಮಾನವ ಹಕ್ಕುಗಳ ರಕ್ಷಣಾ ದಿನ. ಈ ಹಕ್ಕುಗಳ ರಕ್ಷಣೆ ಅರ್ಥಪೂರ್ಣವಾಗಿ ಸಾಕಾರಗೊಳುತ್ತಿದೆಯೇ..? ಅಲ್ಲದೇ ಭಾರತದಲ್ಲಿ ‘ಮಾನವ ಹಕ್ಕು’ಗಳ ಸ್ಥಿತಿ‌ ಹೇಗಿದೆ..!? ಕೆ.ಶಿವು.ಲಕ್ಕಣ್ಣವರ ಇದೇ ಡಿಸೆಂಬರ್ 10ರಂದೇ ಈ ಮಾನವ ಹಕ್ಕುಗಳ ರಕ್ಷಣಾ ದಿನದ ಈ ಲೇಖನ ಬರೆಯಬೇಕಾಗಿತ್ತು ನಾನು. ಅಲ್ಲದೇ ಇನ್ನೂ ಒಂದಿಷ್ಟು ಸಾಂದರ್ಭಿಕ ಲೇಖನಗಳನ್ನೂ ಬರೆಯಬೇಕಾಗಿತ್ತು. ಆದರೆ ಈ ಯಾವುದೋ ಲೇಖನಗಳ ಮಾಹಿತಿ ಸಂಗ್ರಹಕ್ಕಾಗಿ ಹೀಗೆಯೇ ಸಿರಿಗೆರೆ ಹೋಗಿದ್ದೆ. ಹಾಗಾಗಿ ಈ ಡಿಸೆಂಬರ್ ‌10ರ ಈ ಮಾನವ ಹಕ್ಕುಗಳ ರಕ್ಷಣಾ ದಿನದ […]

ಕಾವ್ಯ ಪರಂಪರೆ

ಬನ್ನಿ ನಮ್ಮ ಜೊತೆಗೂಡಿ…….. ಪ್ರತಿ ತಿಂಗಳ ಕಾರ್ಯಕ್ರಮ ಹಳಗನ್ನಡ ವಾಚನ ಮತ್ತು ವ್ಯಾಖ್ಯಾನ ದಿನಾಂಕ:15/12/2019 ಭಾನುವಾರ ಬೆಳಿಗ್ಗೆ 11ಕ್ಕೆ. ಮಹಿಳಾ ವಿಶ್ರಾಂತಿ ಕೊಠಡಿ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಬನ್ನಿ ನಮ್ಮ ಜೊತೆಗೂಡಿ……..

ಲಹರಿ

ಸಂಬಂಧಗಳ ಸಂಭ್ರಮ ದೀಪಾಜಿ ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ‌ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ […]

ರಾಜಕಾರಣ

ಪಕ್ಷ ರಾಜಕಾರಣಕ್ಕೊಂದು ಪರ್ಯಾಯ ಗಣೇಶ ಭಟ್, ಶಿರಸಿ ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ…… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ […]

ಪಯಣ

ಸಂಜಯ ಮಹಾಜನ್ ಅಳಿದು ಹೋಗುವ ಮಾನವ ನಿರ್ಮಿತ ಕಟ್ಟಡಗಳ ಮಧ್ಯ ಅಳಿಯದೆ ಮುಂದೆ ಸಾಗಿದೆ ಹಸಿರೆಲೆಗಳ ಪಯಣ ಸದ್ದಿಲ್ಲದೆ ಮಾಸಿ ಹೋಗುವ ದೇಹಕ್ಕೆ ಚೈತನ್ಯ ತುಂಬುವ ಹೃದಯಾಂತರಾಳದ ನೆನಪುಗಳ ಪಯಣ ಪಚ್ಚೆಯಾಗಸದಿ ಸುರಿವ ಮಳೆಹನಿ ಕಪ್ಪು ಹಂಚಿನ ಹಸಿರ ಹಾಸಿನ ಮಧ್ಯ ಮಳೆಹನಿಗಳ ಪಯಣ ಮೊಳಕೆಯೊಂದು ಬೇರೂರಿ ಆಗಸಕ್ಕೆ ಕೈಚಾಚಲು ಗಟ್ಟಿ ಕಾಂಕ್ರೀಟು ಮೇಲೆ ನಡೆಸಿದೆ ಸೆನಸಾಟದ ಪಯಣ ಭೂವಿಯಲ್ಲಿ ಹೆಜ್ಜೆಯುರಿದ ಕಬ್ಬಿಣದ ಸರಳುಗಳು ಬಿಡುಗಡೆಗೆ ನಡೆಸಿವೇ ಕನಸುಗಳ ಪಯಣ ಈ ಪಯಣಗಳ ಮಧ್ಯ ಚಂಚಲ ನನ್ನ […]

ಅನಿಸಿಕೆ

ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ ಐಶ್ವರ್ಯ ತನ್ನ ಮೂರು ವರ್ಷದ ಹೆಣ್ಣು ಮಗುಗೆ ಮನೆಯಿಂದಾಚೆ ಕಳಿಸ್ಬೆಕಾದ್ರೆ ಒಬ್ಬ ತಾಯಿ ಹಾಕಿದ್ದ ಕಾಲ್ ಗೆಜ್ಜೆ, ಕೈಬಳೆ, ಹೂವೆಲ್ಲ ತೆಗೆದು ಗಂಡ್ಮಕ್ಕಳ ತರ ತಲೆಗೆ ಎಣ್ಣೆ ಹಾಕಿ ಕ್ರಾಪ್ ಬಾಚಿ ಹುಡ್ಗುರ ಬಟ್ಟೆ ಹಾಕಿದ್ದು ನೋಡಿ ನಾನ್ ಅನ್ಕೊಂಡೆ ಅವರಿಗೆ ಪಾಪ ಗಂಡ್ಮಗು ಅಂದ್ರೆ ಇಷ್ಟ ಅನ್ಸತ್ತೆ ಅವರಿಗೆ ಗಂಡು ಮಗು ಇಲ್ಲ ಅನ್ಕೊಳ್ತಿದ್ದ ಹಂಗೆನೆ ಮನೆಯಿಂದ ಆಚೆ ಅಳುತ್ತ ಅವರ ಮಗ ಬಂದು ನನ್ ಬಟ್ಟೆ ಯಾಕೆ ಅವಳಿಗೆ […]

ಪ್ರೀತಿಯೆನಲು ಹಾಸ್ಯವೇ

ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ […]

Back To Top