ಲಹರಿ

Reach for the and Blue Moon Neon Signages

ಬೆಂಗಳೂರು ಬ್ಯಾಚುಲರ್ ಹುಡುಗರ ಡೇ ಡ್ರೀಮು

ದೇವರಾಜ್

ಹೆಂಡ್ತಿ ಹೇಗಿರಬೇಕು…? ಹೆಂಡ್ತಿ ಆಗಿದ್ರೆ ಸಾಕ…
ಜೀವನದ ಜೋಕಾಲಿಯಲ್ಲಿ ಮಗು ತರ ಇರ್ಬೇಕಲ್ವಾ.
ಬ್ಯಾಚುಲರ್ ಜೀವನ ಒಂತರ ಬೋನ್ ಲೆಸ್ ಬೋಟಿ
ಆಗೋಗಿದೆ .ಬ್ಯಾಚುಲರ್ ಅಂದ್ರೆ ಭಗವಂತ ಕೇರ್
ತಗೊಳಲ್ಲ. ಊರು ಮನೆ ಅಪ್ಪ ಅಮ್ಮ ತಂಗಿ ತಮ್ಮ
ಅಕ್ಕ ನೆಂಟ್ರು ನಿಷ್ಠರು ಎಲ್ಲರನ್ನು ಬಿಟ್ಟು ಬಂದು ಬೆಂಗಳೂರಿನನಲ್ಲಿ ಬಂದು ಸಿಂಹದಂತೆ ಬದುಕವರು
ಬ್ಯಾಚುಲರ್ ಹುಡುಗ್ರು. ತಿಂಗಳಿಗೊಂದು ಸಲ ಸಂಬಳ .ಮನೆ ರೆಂಟು ವಾಟರ್ ಬಿಲ್ಲು ಚೀಟಿ ಬಟ್ಟೆ ಅಂತ ನೂರಾರು ಖರ್ಚು .ಎದುರುಗಡೆ ಮನೆ ಆಂಟಿ ಮಗಳು. ಚುಡಾಯ್ಸಿದ್ರೆ ಹುಡ್ಗಿ ಕಡೆಯಿಂದ ಬಿಸಿ ಬಿಸಿ ಕಜ್ಜಾಯ. ಇದೆಲ್ಲ ಮಾಮೂಲು ಬೆಂಗಳೂರು ಅಂದ್ರೆ.
ವಯಸ್ಸು ಮೀರುತ್ತ ಇರುತ್ತೆ ಮನೇಲಿ ಮದುವೆ ಮಾಡ್ಕೊ ಅಂತ ಒತ್ತಾಯ.ತಂಗಿ ಮದುವೆಗೂ ದುಡ್ಡು ಬೇಕು ಅಂತ ತಂದೆ ತಾಯಿ ಕೇಳೋದು ಮಾಮೂಲು. ಅದು ನಮ್ಮ ಧರ್ಮ.ಬರೋ ಸಂಬಳ
ಕೈಗೆ ಸಿಗಲ್ಲ .ಏನೋ ಸಾಲ ಸೂಲ ಮಾಡಿ ತಂಗಿ
ಮದುವೆ ಮಾಡ್ತಾರೆ..ಇನ್ನು ಇವನ ಮದುವೆಗೆ ಹಣಬೇಕು.ಸಾಲ ಮಾಡಲೇಬೇಕು ವಿಧಿ ಇಲ್ಲ..
ಮದುವೆ ಆಗೋ ಹುಡುಗಿ ಮೇಲೆ ಬಾನೆತ್ತರದ ಕನಸುಗಳು.ಬೊಂಬೆ ತರ ಇರ್ಬೇಕು .ಯಾವಾಗ್ಲೂ
ನನ್ನ ಜೊತೆ ಇರ್ಬೇಕು. ಮದ್ವೆ ಛತ್ರದಲ್ಲೇ ಮಾಡ್ಕೋಬೇಕು. ಫ್ರೆಂಡ್ಸ್ಗೆಲ್ಲಾ ಪಾರ್ಟಿ ಕೊಡುಸ್ಬೇಕು.
ಇದೆಲ್ಲ ಇದ್ದಿದ್ದೇ.ಮದುವೆ ಆದ್ಮೇಲೆ ಬೆಂಗಳೂರಿನಲ್ಲಿ
ಚಿಕ್ಕ ಮನೆ ಲೀಜ್ ಹಾಕ್ಕೊಂಡು.ಹೆಂಡ್ತಿನ ಮನೇಲಿ
ಇರುಸ್ಬೇಕು ಅಂತ ನೂರೆಂಟು ಚಿಂತನೆಗಳು. ಅತ್ತೆ ಮಗಳು ಆದ್ರೆ ಇರ್ಲಿ ಅಂತ.ಅತ್ತೆ ಮಗಳಿಗೆ ಮದ್ವೆ
ಆಗೋಗಿದೆ ಬೇರೆ ಸಂಬಂದ ಆದ್ರು ಓಕೆ. ತೊಂದ್ರೆ
ಇಲ್ಲ.ಹುಡ್ಗಿ ಚನಾಗಿ ಇದ್ರೆ ಸಾಕು. ವರದಕ್ಷಿಣೆ ಬೇಕಾದ್ರೆ
ನಾವೇ ಕೊಟ್ಟು ಮಾಡ್ಕೊಂಡು ಬರೋಣ ಅಂತ ಹುಡುಗ್ರು.ಹುಡುಗ್ರು ಬಾನೆತ್ತರಕ್ಕೆ ಚಪ್ಪರ ಹಾಕ್ತಾರೆ
ಅಂದ್ರೆ ಎರಡು ಮಾತಿಲ್ಲ .ಹು ಅನ್ಬೇಕು ಅಷ್ಟೇ….
ಮದ್ವೆ ಮಾಡ್ಕೊಂಡು ಬಂದ ಮೇಲೆ ಹೆಂಡ್ತಿನ ಮನೇಲಿ ಇರಸಿ ತಾನು ಕೆಲಸಕ್ಕೆ ಹೋಗೋದು…
ಕೆಲ್ಸ ಮುಗ್ಸಿ ಬರ್ತಾ ಇದ್ದ ಹಾಗೆ ಒಂದು ಸಿಹಿ ಮುತ್ತು.
ಬಿಸಿ ಬಿಸಿ ಕಾಫಿ .ಇಲ್ಲ ಅಂದ್ರೆ ತಣ್ಣನೆ ನೀರು…
ಸಂಜೆ ಆದ್ಮೇಲೆ ಹೆಂಡ್ತಿಗೆ ಗೋಬಿ ಇಲ್ಲ ಅಂದ್ರೆ ಪಾನಿ
ಪಾನಿಪುರಿ.ಇಲ್ಲ ಅಂದ್ರೆ ಹನಿಕೇಕ್ ಇಷ್ಟೇ ಸಾಕು.
ರಾತ್ರಿ ಆದ್ರೆ ಊಟಕ್ಕೆ ಹಪ್ಪಳ ಜೊತೆಗೆ ಉಪ್ಪಿನಕಾಯಿ. ಪರಸ್ಪರವಾಗಿ ತುತ್ತು ತಿನಿಸೋದು.
ಮಿಸ್ಸಾಗಿ ಒಂದು ಕಿಸ್ ಕೊಡೋದು ಇದೆಲ್ಲ ಮಾಮೂಲು. ವಾರಕ್ಕೊಂದು ಸಲ ಮಾಲು.
ಹಬ್ಬ ಬಂದ್ರೆ ಊರಿಗೆ. ಆರು ತಿಂಗಳಿಗೊಮ್ಮೆ ಟ್ರಿಪ್.
ವರುಶಕ್ಕೆ ಒಂದು ಮಗು ಹೆಣ್ಣು ಆದ್ರು ಸರಿ ಗಂಡು ಆದ್ರು ಸರಿ.ಅದರಲ್ಲಿ ವಾದ ಇಲ್ಲ.ದೇವರು ಕೊಟ್ಟ
ವರ ಮಗು.ಆ ಮಗುನ ಜೋಕಾಲಿಯಲ್ಲಿ ಇಟ್ಟು
ಅತ್ತಾಗ ಜೋಗುಳವಾಡಿ .ನಕ್ಕಾಗ ಮುತ್ತನಿಟ್ಟು
ಪೋಷಿಸುವದು.ಸ್ವಲ್ಪ ದಿನದ ನಂತರ ಒಂದು ಚಿಕ್ಕ
ಕಾರು.ಹಳ್ಳಿ ರೋಡಲ್ಲಿ ಅವ್ಳು .ಹೈವೇ ರೋಡಲ್ಲಿ
ನಾವು ರೈಡ್ ಮಾಡೋದು .ಮಗುನ ಕಾರಿನಲ್ಲಿ
ಜೋಕಾಲಿ ಕಟ್ಟಿ ಇಂಪಾದ ಹಾಡು ಹಾಕೋದು.
ಅತ್ತಾಗ ಕೈನಲ್ಲಿ ಎತ್ತಿಕೊಂಡು ಮುದ್ಧಾಡೋದು.
ಮಗುವಿಗೆ ಹೆಸರು ಸುಹಾಸ್ .ಮಗಳು ಹುಟ್ಟಿದ್ರೆ
ಸುಹಾಸಿನಿ .ಬೇಡ ಅಂದ್ರೆ ಬೇರೆ ಹೆಸ್ರು .ಊರಲ್ಲಿ
ಅಪ್ಪ ಅಮ್ಮನಿಗೆ ತಿಂಗಳಿಗೊಂದು ಸಲ ಮನೆ
ಖರ್ಚಿಗೆ ಸ್ವಲ್ಪ ಹಣ ಕೊಡ್ಲೆಬೇಕು.ನಮ್ಮ ಧರ್ಮ.
ಇನ್ನು ಏನೇನೋ ಕನಸುಗಳ ಹೊತ್ತ ಹುಡುಗ್ರು
ಬೆಂಗಳೂರಿನಲ್ಲಿ ಬ್ಯಾಚುಲರ್ ಆಗಿ ಉಳಿದವ್ರೆ.

*********

Leave a Reply

Back To Top