Category: ಇತರೆ

ಇತರೆ

ಅನಿಸಿಕೆ

ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಶ್ರೀವತ್ಸ ಜೋಶಿ ಅದು ಸ್ವಾತಿ ಮಳೆಯೇ ಇರಬೇಕು! ನಿನ್ನ ಎದೆಯಿಂದ ಜಾರಿದ ಹನಿಯೊಂದು ನನ್ನ ತುಟಿ ಸಿಂಪಿಯ ಸೇರಿ ಈಗ- ಮುತ್ತಾಗಿದೆ ! @ಡಾ.ಗೋವಿಂದ ಹೆಗಡೆ ‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ […]

ಚರ್ಚೆ

ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಡಾ.ಗೋವಿಂದ ಹೆಗಡೆಯವರ ಪ್ರತಿಕ್ರಿಯೆ ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಸಂಬಂಧಿಸಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಶ್ರೀ ಕಾಸೆ ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು ಎರಡು ವರ್ಷಗಳಿಂದ ಬಲ್ಲೆ. ಅವರೊಬ್ಬ ಉತ್ಸಾಹಿ. ತುಂಬ ಬರೆಯುವ, ಏನಾದರೂ ಸಾಧಿಸಬೇಕೆಂಬ ತಹತಹವುಳ್ಳ ಲೇಖಕ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಮನೆಗೆಲಸವನ್ನು- ಹೋಂವರ್ಕ್-ಸರಿಯಾಗಿ ಮಾಡಿದಂತಿಲ್ಲ. ಮೊದಲನೆಯದಾಗಿ ಅವರು ಹೇಳುವ ಈ “ಫಲಕುಗಳು- ಝಲಕುಗಳು” ಪದಪುಂಜವನ್ನು ನೋಡೋಣ. […]

ಅಭಿನಂದನೆ

ಕೆ.ಶಿವು.ಲಕ್ಕಣ್ಣವರ ಸಾಹಿತಿ, ರಂಗಭೂಮಿ ಕಲಾವಿದೆ, ಪತ್ರಕರ್ತೆ ಡಾ.ವಿಜಯಮ್ಮನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು ಸಮಂಜಸವಾಗೇ ಇದೆ..! ಸಾಹಿತಿ, ಲೇಖಕಿ, ರಂಗಭೂಮಿ ಕಲಾವಿದೆ ಡಾ.ವಿಜಯಾ (ವಿಜಯಮ್ಮ) ಅವರಿಗೆ 2019 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾನ್ ಪಿಕ್ಸನ್ ನ ಕನ್ನಡ ಭಾಷಾ ವಿಭಾಗದಲ್ಲಿ ಅವರ ‘ಕುದಿ ಎಸರು’ ಆತ್ಮಕಥೆಗೆ ಈ ಪ್ರಶಸ್ತಿ ಸಂದಿದೆ… ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಇವರ ಜೊತೆ ದೇಶದ 21 ಭಾಷೆಯ […]

ಫಲಕುಗಳು-ಝಲಕುಗಳು

*ಫಲುಕುಗಳು ಮತ್ತು ಅದರ ಝಲಕ್ಕುಳು* ಬಸವರಾಜ ಕಾಸೆ ಸಾಹಿತ್ಯದ ಪ್ರಕಾರ ಅದೆಷ್ಟೋ ಇದ್ದರೂ ಅಪರೂಪಕ್ಕೊಮ್ಮೆ ಹೊಸ ಹೊಸ ಪ್ರಕಾರಗಳು ಸೃಷ್ಟಿಯಾಗುತ್ತಲೇ ಸಾಗುತ್ತವೆ. ಅದೆಲ್ಲವನ್ನೂ ತನ್ನೊಳಗೆ ಹುದುಗಿಸಿಕೊಳ್ಳುತ್ತಲೇ ಕುತೂಹಲವನ್ನು ಹೆಚ್ಚಿಸಿ ಹೊಸ ಹೊಸ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮೂಲಕ ನಿರಂತರವಾಗಿ ಬೆಳವಣಿಗೆ ಹೊಂದುವುದು ಸಾಹಿತ್ಯಕ್ಕೆ ಇರುವ ಹಿರಿಮೆ ಮತ್ತು ಗರಿಮೆ. ಫಲುಕುಗಳು ಎನ್ನುವುದು ಅಂತದ್ದೇ ಒಂದು ಸಾಹಿತ್ಯದ ನೂತನ ಪ್ರಕಾರ. ಹೆಸರು ಮತ್ತು ಶೀರ್ಷಿಕೆಗಳು ವಿಭಿನ್ನವಾಗಿ ಇರುವುದರಿಂದ ಮೊದಲ ನೋಟದಲ್ಲಿಯೇ ಆಕರ್ಷಿಸಿ ಬಿಡುತ್ತೆ ಈ ಬರಹ. ಇನ್ನೂ ಫಲುಕುಗಳ […]

ಸಂಗೀತ ಸಂಗಾತಿ

ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ […]

ಮಾನವ ಹಕ್ಕುಗಳು

ಡಿಸೆಂಬರ್ – 10 ಮಾನವ ಹಕ್ಕುಗಳ ರಕ್ಷಣಾ ದಿನ. ಈ ಹಕ್ಕುಗಳ ರಕ್ಷಣೆ ಅರ್ಥಪೂರ್ಣವಾಗಿ ಸಾಕಾರಗೊಳುತ್ತಿದೆಯೇ..? ಅಲ್ಲದೇ ಭಾರತದಲ್ಲಿ ‘ಮಾನವ ಹಕ್ಕು’ಗಳ ಸ್ಥಿತಿ‌ ಹೇಗಿದೆ..!? ಕೆ.ಶಿವು.ಲಕ್ಕಣ್ಣವರ ಇದೇ ಡಿಸೆಂಬರ್ 10ರಂದೇ ಈ ಮಾನವ ಹಕ್ಕುಗಳ ರಕ್ಷಣಾ ದಿನದ ಈ ಲೇಖನ ಬರೆಯಬೇಕಾಗಿತ್ತು ನಾನು. ಅಲ್ಲದೇ ಇನ್ನೂ ಒಂದಿಷ್ಟು ಸಾಂದರ್ಭಿಕ ಲೇಖನಗಳನ್ನೂ ಬರೆಯಬೇಕಾಗಿತ್ತು. ಆದರೆ ಈ ಯಾವುದೋ ಲೇಖನಗಳ ಮಾಹಿತಿ ಸಂಗ್ರಹಕ್ಕಾಗಿ ಹೀಗೆಯೇ ಸಿರಿಗೆರೆ ಹೋಗಿದ್ದೆ. ಹಾಗಾಗಿ ಈ ಡಿಸೆಂಬರ್ ‌10ರ ಈ ಮಾನವ ಹಕ್ಕುಗಳ ರಕ್ಷಣಾ ದಿನದ […]

ಕಾವ್ಯ ಪರಂಪರೆ

ಬನ್ನಿ ನಮ್ಮ ಜೊತೆಗೂಡಿ…….. ಪ್ರತಿ ತಿಂಗಳ ಕಾರ್ಯಕ್ರಮ ಹಳಗನ್ನಡ ವಾಚನ ಮತ್ತು ವ್ಯಾಖ್ಯಾನ ದಿನಾಂಕ:15/12/2019 ಭಾನುವಾರ ಬೆಳಿಗ್ಗೆ 11ಕ್ಕೆ. ಮಹಿಳಾ ವಿಶ್ರಾಂತಿ ಕೊಠಡಿ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಬನ್ನಿ ನಮ್ಮ ಜೊತೆಗೂಡಿ……..

ಲಹರಿ

ಸಂಬಂಧಗಳ ಸಂಭ್ರಮ ದೀಪಾಜಿ ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ‌ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ […]

Back To Top