ಫಲಕುಗಳು-ಝಲಕುಗಳು

Purple Thunder Storm during Nighttime

*ಫಲುಕುಗಳು ಮತ್ತು ಅದರ ಝಲಕ್ಕುಳು*

hanging pendant lamps

ಬಸವರಾಜ ಕಾಸೆ

ಸಾಹಿತ್ಯದ ಪ್ರಕಾರ ಅದೆಷ್ಟೋ ಇದ್ದರೂ ಅಪರೂಪಕ್ಕೊಮ್ಮೆ ಹೊಸ ಹೊಸ ಪ್ರಕಾರಗಳು ಸೃಷ್ಟಿಯಾಗುತ್ತಲೇ ಸಾಗುತ್ತವೆ. ಅದೆಲ್ಲವನ್ನೂ ತನ್ನೊಳಗೆ ಹುದುಗಿಸಿಕೊಳ್ಳುತ್ತಲೇ ಕುತೂಹಲವನ್ನು ಹೆಚ್ಚಿಸಿ ಹೊಸ ಹೊಸ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮೂಲಕ ನಿರಂತರವಾಗಿ ಬೆಳವಣಿಗೆ ಹೊಂದುವುದು ಸಾಹಿತ್ಯಕ್ಕೆ ಇರುವ ಹಿರಿಮೆ ಮತ್ತು ಗರಿಮೆ.

ಫಲುಕುಗಳು ಎನ್ನುವುದು ಅಂತದ್ದೇ ಒಂದು ಸಾಹಿತ್ಯದ ನೂತನ ಪ್ರಕಾರ. ಹೆಸರು ಮತ್ತು ಶೀರ್ಷಿಕೆಗಳು ವಿಭಿನ್ನವಾಗಿ ಇರುವುದರಿಂದ ಮೊದಲ ನೋಟದಲ್ಲಿಯೇ ಆಕರ್ಷಿಸಿ ಬಿಡುತ್ತೆ ಈ ಬರಹ. ಇನ್ನೂ ಫಲುಕುಗಳ ಓದು ಒಂದು ಓದಿನಲ್ಲಿಯೇ ಓದುಗರನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಮರ್ಥ್ಯ ಇರುವ ಬರಹ.

ಹಾಗಾದರೆ ಫಲುಕುಗಳು ಅಂದರೆ ಏನು, ಅದರ ಗುಣ ಲಕ್ಷಣಗಳು ಮತ್ತು ನಿಯಮಗಳು ಹಾಗೂ ಅದರ ಬರಹ ಹೇಗೆ ಬನ್ನಿ ತಿಳಿದುಕೊಳ್ಳೋಣ.

ಯಾವುದಾದರೂ ಒಂದು ನಿರ್ದಿಷ್ಟ ಸನ್ನಿವೇಶವನ್ನು ಆರಿಸಿಕೊಂಡು ಅದನ್ನು ಗಾಢವಾಗಿ ಪರಿಣಾಮ ಬೀರುವಂತೆ ನಮ್ಮದೇ ಪದಗಳಲ್ಲಿ ೨ ರಿಂದ ೪ ೫ ಸಾಲುಗಳಲ್ಲಿ ಚಿತ್ರಿಸುವ ಸಣ್ಣ ಸಣ್ಣ ಬರಹಗಳೇ ಫಲುಕುಗಳು. ವಿಶೇಷವೆಂದರೆ ಇಲ್ಲಿ ಶೀರ್ಷಿಕೆಯ ಹೆಸರು ಸನ್ನಿವೇಶವೇ ಆಗಿರುತ್ತದೆ. ಯಾವ ಸಂದರ್ಭದ ಕುರಿತು ಆ ಫಲುಕುಗಳನ್ನು ಬರೆದಿರಲಾಗಿರುತ್ತದೆಯೋ ಆ ಸಂದರ್ಭವನ್ನು ಸ್ಪಷ್ಟವಾಗಿ ಶೀರ್ಷಿಕೆಯಲ್ಲಿ ಸೂಚಿಸಿರಬೇಕಾಗುತ್ತದೆ.

ಒಂದು ಸನ್ನಿವೇಶದ ಮೇಲಿನ ಇಂತಹ ಪ್ರತಿ ಫಲುಕುಗಳು ಕನಿಷ್ಠ ೧೦ ಝಲಕ್ಕುಗಳನ್ನು ಸ್ವಾತಂತ್ರ್ಯವಾಗಿ ಮತ್ತು ಕಡ್ಡಾಯವಾಗಿ ಹೊಂದಿರಬೇಕು, ಇಲ್ಲಿಯೇ ಒಬ್ಬ ಬರಹಗಾರನ ಶಕ್ತಿ ಅನಾವರಣಗೊಳ್ಳುವುದು. ಇಲ್ಲಿ ಝಲಕ್ಕುಗಳು ಎಂದರೆ ಒಂದು ಸ್ವಾತಂತ್ರ್ಯವಾದ ಚರಣ. ಅದಕ್ಕೆ ಇನ್ನೊಂದು ಚರಣದ ಜೊತೆಗೆ ಯಾವುದೇ ಸಂಬಂಧ ಇರುವುದಿಲ್ಲ ಮತ್ತು ಪ್ರತಿ ಝಲಕ್ಕುಗಳು ಸಂದರ್ಭದ ತೀವ್ರತೆಯನ್ನು ಹೆಚ್ಚಿಸುತ್ತಾ ಸಾಗಬೇಕು. ಆದ್ದರಿಂದ ಆ ಎಲ್ಲಾ ಹತ್ತು ಝಲಕ್ಕುಗಳನ್ನು ಒಂದಾದ ನಂತರ ಒಂದು ಕ್ರಮ ಸಂಖ್ಯೆಯ ಮೂಲಕ ಸೂಚಿಸುತ್ತಾ ಹೋಗಬೇಕು. ಪ್ರತಿಯೊಂದು ಝಲಕ್ಕುಗಳು ಸಹ ಆ ಕುರಿತು ವಿಭಿನ್ನ ಭಾವವನ್ನು, ತರಹೇವಾರಿ ದೃಷ್ಟಿಕೋನವನ್ನು ಹೊಂದಿರಬೇಕು.

ಇನ್ನೂ ಸಾಲುಗಳ ಮಿತಿ ಕನಿಷ್ಠ ಎರಡು ಮತ್ತು ಗರಿಷ್ಠ ಐದನ್ನು ಮೀರುವಂತಿಲ್ಲ. ಆದಷ್ಟು ಕಡಿಮೆ ಸಾಲುಗಳಲ್ಲಿ ಹೆಚ್ಚಿನ ಭಾವವನ್ನು ಹೊರ ಹೊಮ್ಮಿಸಬೇಕು. ಅನವಶ್ಯಕ ಪದಗಳ ತಾಕಲಾಟ ಇಲ್ಲಿ ಸಲ್ಲದು. ಹಾಗೆಂದು ಬರಹವೇನು ಕಷ್ಟವೇನಲ್ಲ. ಸಂದರ್ಭಗಳ ಕುರಿತ ಜ್ಞಾನ, ವಿಭಿನ್ನ ಬಗೆಯ ಚಿಂತನೆ ಇದ್ದರೆ ಒಮ್ಮೆ ಪ್ರಯತ್ನಿಸಬಹುದು. ಒಂದೇ ಬರಹಕ್ಕೆ ಪರಿಪೂರ್ಣವಾಗದ ಇದನ್ನು ಮತ್ತೆ ಮತ್ತೆ ಓದಿ ತಿದ್ದಿ ತೀಡಿ ಪೂರ್ಣಗೊಳಿಸಬಹುದು. ವಿಷಯದ ನಿರೂಪಣೆಯ ಕುರಿತು ಹೆಚ್ಚಿನ ಜಾಗೃತಿ, ಸ್ಪಷ್ಟ ಕಲ್ಪನೆ, ವಾಸ್ತವಿಕ ಆಗು ಹೋಗುಗಳ ಬಗ್ಗೆ ಈ ಬರಹ ಹೆಚ್ಚಿನ ಜ್ಞಾನವನ್ನು ಅಪೇಕ್ಷಿಸುತ್ತದೆ.

ಹಾಗಿದ್ದರೆ ಕನ್ನಡದಲ್ಲಿ ಫಲುಕುಗಳ ಬಗ್ಗೆ ಕೃತಿಗಳು ಬಂದಿದ್ದಾವಾ? ಇದಕ್ಕೆ ಇಲ್ಲ ಎಂದೇ ಹೇಳಬೇಕು. ಇದುವರೆಗೂ ಈ ಪ್ರಕಾರದಲ್ಲಿ ಯಾವುದೇ ಕೃತಿಗಳು ಹೊರ ಬಂದಿಲ್ಲ, ಇನ್ನಷ್ಟೇ ಹೊರ ಬರಬೇಕು. ಆದರೆ ಈ ಪ್ರಕಾರದಲ್ಲಿ ಬೆರಳಣಿಕೆಯಷ್ಟು ಕವಿಗಳು ಮಾತ್ರ ಬರೆಯುತ್ತಿರುವುದರಿಂದ ಇನ್ನೂ ತಡವಾಗಬಹುದು ಅನಿಸುತ್ತೆ.ಈ ಮಾದರಿ ಇನ್ನೂ ಹೆಚ್ಚು ಪ್ರಚಾರದಲ್ಲಿ ಇರದ ಕಾರಣ, ಇದ್ದರೂ ಕೂಡ ಈ ಬಗ್ಗೆ ಮಾಹಿತಿ ಲಭ್ಯವಿರದ ಕಾರಣ ಮತ್ತು ಹೊಚ್ಚ ಹೊಸ ಬಗೆಯ ಪ್ರಕಾರವಾದರಿಂದ ಕೃತಿಗಳು ಹೊರ ಬಂದಿಲ್ಲ. ಅತಿ ಶೀಘ್ರದಲ್ಲೇ ಹೊರ ಬರಲಿ ಎಂದು ಆಶಿಸುತ್ತಾ ನನ್ನದೇ ಫಲುಕುಗಳನ್ನು ಉದಾಹರಣೆಗೆ ನೀಡುತ್ತಿರುವೆ.

ಫಲುಕುಗಳು

ಸನ್ನಿವೇಶ- ಕೊಟ್ಟು ತೆಗೆದುಕೊಳ್ಳಲಾಗದ ಸಂದರ್ಭ


ಬಪ್ಪರೇ ಮಗನೇ ಚಾಲಾಕಿ ಅಂದರೆ ನೀನೇ
ತೆಗೆದುಕೊಂಡಿರುವುದಾ ಮರೆತು
ನಾ ಮರೆಯುವಂತೆ ಮರೆಸುವ ನಿನಗೆ
ಎಷ್ಟೆಂದು ಉಘೇ ಉಘೇ ಎನ್ನಲಿ


ಕೊಟ್ಟಿರುವದಾ ಕೊಟ್ಟು ಕೂಡಬೇಕು
ತೇಲುತ್ತಾ ನಂಬಿಕೆ ವಿಶ್ವಾಸಗಳ ಅಲೆಯಲ್ಲಿ
ಇಲ್ಲದಿದ್ದರೆ ಮತ್ತೆ ಮುಖ ತೋರಿಸುವುದು
ಹೇಗೆ ಹೇಳಿ ಕೊಡು ನಾಚಿಕೆ ಬಿಟ್ಟು


ಕೊಡುವುದನ್ನು ಕೊಟ್ಟು ಬಿಟ್ಟರೆ
ಮುಗಿಯುವುದು ಹೇಗೆ ಎಲ್ಲಾ ಅಲ್ಲಿಗೆ
ಬಂಧಗಳು ಗಟ್ಟಿಯಾದಗಲೇ ಚಿಗುರು
ಬೆಸೆದು ಹೆಚ್ಚೆಚ್ಚು ಆತ್ಮೀಯತೆ ಅಂಟಂಟು


ಸಂಬಂಧಗಳಲ್ಲಿ ವ್ಯವಹಾರ ಬೇಡ
ಎನ್ನುವ ಮನಸ್ಥಿತಿವನಲ್ಲ ನಾನು
ಆದರೆ ಸಂಬಂಧಗಳು ವ್ಯವಹಾರ ಅಲ್ಲ ಗೆಳೆಯ
ವ್ಯವಹರಿಸುವುದೇ ಸಂಬಂಧವಾದರೆ
ಅದು ಕೇವಲ ಲಾಭ ನಷ್ಟಗಳ ವ್ಯಾಪಾರ


ಕೊಡು ತಗೊಳ್ಳುವುದು ಎಲ್ಲಾ ಕಡೆ ಇದ್ದದ್ದೆ
ಕೊಟ್ಟು ತಗೋಬೇಕು ಎನ್ನುವರು ಅದಕ್ಕೆ
ಮೋಡ ಮಳೆ ನೀಡಿದರೆ ಇಳೆಗೆ
ಹಸಿರಾಗಿ ಹರಿದು ಮುಂದೆ ಆವಿಯಾಗಿ ನೀಡುವುದು ತಾ ಪಡೆದುಕೊಂಡಿರುವುದನ್ನು


ಮನುಷ್ಯ ಎಂದ ಮೇಲೆ ಕಷ್ಟ ನೋವುಗಳು
ಸಹಜವೇ ಅಲ್ಲವೇ ಗೆಳೆಯ
ಒಬ್ಬರಿಗೊಬ್ಬರು ಸಮಯಕ್ಕಾದರೆ
ತಾನೇ ಉಳಿಯುವುದು ಅನುರಾಗ
ಬಿತ್ತಿ ಉತ್ತಿದಂತೆ ಬೀಜದ ಫಲ


ಚಿಂತಿಸದಿರು ಹೆಚ್ಚಿಗೆ, ನಾನಂತೂ ಚಿಂತಿಸಲಾರೆ
ನೀ ಎಲ್ಲಿಯೂ ಹೋಗಲಾರೆ, ನಾನು ಸಹ
ಮತ್ತೆ ಆಗುವುದಿದೆ ಮುಖಾಮುಖಿ
ನಿನಗಾಗಿ ಆಗ ಕಾದಿರಲಿದೆ ಸರಿಯಾದ ಉತ್ತರ


ಅಯ್ಯೋ ಪಾಪ ಎನಿಸುವ ಯೋಗ್ಯತೆ
ಅನುಕಂಪ ಗಿಟ್ಟಿಸಿಕೊಳ್ಳುವಾಗ
ಥೂ ಪಾಪಿ ಎನ್ನುವುದಕ್ಕೂ ನಾಲಾಯಕ್ಕು
ಅತಿರೇಕಕ್ಕೆ ಏರಿದಾಗ ಪರ್ಯಾಯ ದುರ್ವ್ಯಸನ


ನನ್ನಲ್ಲಿಯೂ ಇದ್ದವು ನಿರೀಕ್ಷೆಗಳು
ಅನುಭವ ಬದಲಿಸಿದೆ ಮನೋಭಾವ
ನನಗೀಗ ನನಗಾಗುವವರಿಗೆ ಮಾತ್ರ
ನಾನಾಗಬೇಕು ಎಂದೆನಿಸಿದೆ ನಿನ್ನಿಂದ

೧೦
ತಲೆ ತಪ್ಪಿಸಿ ತಿರುಗುವವರ
ತಲೆ ಕೆಡಿಸುವ ಚುಕ್ತಾಗಳಿಗೆ ತಲೆ ಹಾಕಲಾರೆ
ತಲೆಯಿಂದಲೇ ತೆಗೆದ ಮೇಲೆ
ನೀನು ಯಾರೋ, ಅದು ಯಾವುದೋ
ಈಗೆಲ್ಲವೂ ಬರೀ ಗಾಂಧಿ ಲೆಕ್ಕ


Leave a Reply

Back To Top