Category: ಅನುವಾದ

ಅನುವಾದ

ನೀನಿನ್ನೂ ಅಪರಿಚಿತನೇನು….?

ಅನುವಾದಿತ ಕವಿತೆ ನೀನಿನ್ನೂ ಅಪರಿಚಿತನೇನು….? ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ ಕನ್ನಡಕ್ಕೆ-ಸಮತಾ ಆರ್. ನೀನಿನ್ನೂ ಅಪರಿಚಿತನೇನು….? ಇತ್ತೀಚೆಗೆ ಯಾಕೋನೀ ಅಪರಿಚಿತ ಅನಿಸತೊಡಗಿಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂಎದೆಯಲ್ಲಿ ಏನೋಪ್ರಶ್ನೆಯೊಂದುತಡಕುತಿದೆಏನಾಯಿತು?ಯಾಕೀ ಕೋಪ?ನನ್ನ ತಪ್ಪೇನು?ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ? ಆದರೂ ಹೊಸ ಭರವಸೆ,ಹೊಸ ಪಯಣ,ಹೊಸ ಪ್ರಮಾಣ ಕಾಯುತಿರುವೆಹೃದಯತುಂಬಿ ನಾ..ಯಾರದೋ ಆಗಮನಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು. ಇಂದೇನಿದು ನನ್ನಲ್ಲಿ,ಯಾವತ್ತೂ ನಾನರಿಯದ ಈ ಚಡಪಡಿಕೆ.ಹಿಂದೆಂದೂ ಇರದಿದ್ದ ಮನೋಕಾಮನೆ.ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದಅವನಿಗಾಗಿ […]

ಓದುಗನು ಮಾಡಿದ ಸತ್ಕಾರ.

ಕುರ್ಚಿಯಿಂದ ಎದ್ದು ಒಮ್ಮೆ ಮೈ ಮುರಿದುಕೊಂಡೆ. ಎರಡು ಹೆಜ್ಜೆ ಆಚೆ ಈಚೆ ನಡೆದರೆ ಮೈ ಹಗುರವಾಗುತ್ತದೆ ಎನಿಸಿ ಎರಡು ಹೆಜ್ಜೆ ಹಾಕಿ ಕಿಟಿಕಿಯ ಹತ್ತಿರ ನಿಂತುಕೊಂಡೆ. ದೂರದ ಕಡಲ ಮೇಲಿಂದ ಗಾಳಿ ಬೀಸುತ್ತಿತ್ತು. ವಿಶಾಖ ಸುಂದರಿ ವಜ್ರವೈಢೂರ್ಯಗಳಿಂದ ಅಲಂಕರಿಸಿಕೊಂಡವಳ ಹಾಗೆ, ಬೀದಿ ದೀಪಗಳ ತೋರಣಗಳಿಂದ ಮೆರೆಯುತ್ತಿದ್ದಳು

ಪ್ರೀತಿಯೇ ಎಲ್ಲವೂ ಅಲ್ಲ

ನಿನ್ನ ಪ್ರೀತಿಯ ಶಾಂತಿಗಾಗಿ ಮಾರಲೆಳೆಸುವೆನೇನೋ,
ಇಲ್ಲವೇ, ಈ ರಾತ್ರಿಯ ನೆನಪ ಅನ್ನಕ್ಕಾಗಿ
ಕೊಟ್ಟು ಕೊಳ್ಳುವೆನೇನೋ,

ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ

ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನಿನ್ನ ಕಣ್ಣ ಹೊಳಪು, ಎದೆಯ ಮಿಡಿತ ಹೆಚ್ಚಿಸುವ
ಪ್ರಕ್ಷುಬ್ಧ ಭಾವನೆಗಳ ತೀವ್ರವಾಗಿ ಮೋಹಿಸದಿದ್ದರೆ,

ಸಾಧು ಸ್ವಭಾವದವಳು

( ದಸ್ತಯೇವಸ್ಕಿಯ
‘ಸಾಧು ಸ್ವಭಾವದವಳು’ ನೀಳ್ಗತೆಯ ಪ್ರೇರಣೆಯ ಕವಿತೆ )
ವೈ.ಜಿ.ಅಶೋಕ್ ಕುಮಾರ್ ರವರಿಂದ

ನಿಜವಾದ ಹಸಿವು

ಅನುವಾದ ನಿಜವಾದ ಹಸಿವು ಆಂಗ್ಲಮೂಲ: ಪ್ರಸೂನ್ರಾಯ್ ಕನ್ನಡಕ್ಕೆ: ಕೋಡೀಹಳ್ಳಿಮುರಳೀಮೋಹನ್   ರಾಹುಲನಿಗೆ ಹಸಿವು ಆಯ್ತು! ಇದು ಒಂದು ವಿಚಿತ್ರ ಭಾವನೆಯಾಗಿದ್ದು, ಅವನಿಗೆ ಆತಂಕವನ್ನುಂಟುಮಾಡಿತು.  ರಾಹುಲ್ಗೆ ತನ್ನ ದೇಹ ಮತ್ತು ಮನಸ್ಸು ಏನು ಕೇಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇಪ್ಪತ್ತೇಳು ವರ್ಷದ ರಾಹುಲ್ ಅಜ್ಜಿಯ ಕೊನೆಯ ವಿಧಿಗಳಿಗಾಗಿ ತನ್ನ ಪೂರ್ವಜರ ಮನೆಗೆ ಪ್ರಯಾಣಿಸುತ್ತಿದ್ದ. ರಾಹುಲ್ ಒಂದು ದಿನದ ಹಿಂದೆಯೇ ಕೋಲ್ಕತಾ ತಲುಪಿದ್ದ. ಅಂತ್ಯಕ್ರಿಯೆ ಪೂರ್ಣಗೊಂಡಿತು, ಆದರೆ ಇನ್ನೂ  ಕೊನೆಯ ವಿಧಿಗಳ ಧಾರ್ಮಿಕ ಆಚರಣೆಗಳು ಬಾಕಿ ಉಳಿದಿವೆ. ಪಶ್ಚಿಮ ಬಂಗಾಳದ […]

ಅಂಜಿಕೆ

ನದಿ ತಾ ಪಯಣಿಸಿದ ಹಾದಿಯತ್ತ ಹಿಂತಿರುಗಿ ನೋಡುತ್ತದೆ
ಪರ್ವತದ ಶಿಖರಗಳಿಂದ
ಉದ್ದನೆಯ ಅಂಕುಡೊಂಕಾದ ರಸ್ತೆ ದಾಟಿದೆ ಕಾಡು ಮತ್ತು ಹಳ್ಳಿಗಳನು

ಕತ್ತಲಿನ ಕವಿತೆ

ಮರಾಠಿಯ ಖ್ಯಾತ ಕವಿ ನಾಮದೇವಕೋಳಿ ಅವರ ಕವಿತೆಯೊಂದನ್ನು ಕನ್ನಡದ ಕವಿ ಕಮಲಾಕರ ಕಡವೆಯವರು ಸಂಗಾತಿಯ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದದಾರೆ

Back To Top