ಯಾರೂ ಪರದೇಶೀಯರಲ್ಲ..

ಅನುವಾದ ಸಂಗಾತಿ

ಯಾರೂ ಪರದೇಶೀಯರಲ್ಲ..

ಇಂಗ್ಲೀಷ್ ಮೂಲ: james Kirkup

ಕನ್ನಡಕ್ಕೆ:ಸಮತಾ.ಆರ್

The no man’s land on the border between Ahlbeck in Germany and Swinoujscie in Poland with two boundary posts

ನೆನಪಿಡಿ,
ಯಾವ ನೆಲವೂ ಪರದೇಶವಲ್ಲ,
ಯಾರೂ ಗೊತ್ತಿಲ್ಲದವರಲ್ಲ,
ಎಲ್ಲಾ ಸಮವಸ್ತ್ರದೊಳಗೆ
ಉಸಿರಾಡುವ ಜೀವ ಅದೊಂದೇ,
ನಮ್ಮ ಹಾಗೆಯೇ,
ನಮ್ಮ ಅಣ್ಣತಮ್ಮಂದಿರು ಓಡಾಡುವ ನೆಲವೂ,
ನಾವೆಲ್ಲಾ ಮರಳಬೇಕಾದ ಇದೇ ಮಣ್ಣೇ.

ಅವರಿಗೂ ಅದೇ ಗಾಳಿ,ಬೆಳಕು,ನೀರು.
ಉಣ್ಣುವರು ಅದೇ ನೆಮ್ಮದಿಯ ಸುಗ್ಗಿಯ ಕುಯಿಲ.
ಹಸಿವರು ಅದೇ ಯುದ್ಧದ ದೀರ್ಘ ಮಾಗಿಯಲಿ.
ಅವರ ಕೈಗಳೂ ಕೂಡ ನಮ್ಮವೇ,
ಅದರಲ್ಲಿ ನಾವೋದುವ
ದುಡಿಮೆಯ ರೇಖೆಗಳು ನಮ್ಮದಕ್ಕಿಂತ ಬೇರೆಯಲ್ಲ.

ನೆನಪಿಡಿ,
ಅವರ ಎಚ್ಚರದ,ಮುಚ್ಚುವ ಕಣ್ಣುಗಳೂ ನಮ್ಮವಂತೆಯೆ,
ಒಲವಲಿ ಗೆಲ್ಲಬಹುದಾದ ಬಲವೂ ಅದೇ.
ಎಲ್ಲಾ ನೆಲದಲ್ಲೂ
ನಮ್ಮೆಲ್ಲರ ತಿಳಿವಿಗೆ ,ಅರಿವಿಗೆ
ಬರುವ ಜೀವನವೂ ಅದೇ.

ನೆನಪಿಡೋಣ ನಾವು ನೀವೆಲ್ಲಾ,
ನಮ್ಮನಮ್ಮ ಅಣ್ಣ ತಮ್ಮಂದಿರ ದ್ವೇಷಿಸಲು ಹೇಳಿದಾಗ
ಖಂಡಿಸಿ,ಧಿಕ್ಕರಿಸಿ,ಹೊರದೂಡಿಕೊಳ್ಳಬೇಕು,
ನಮ್ಮ ನಮ್ಮನ್ನೇ,

ನೆನಪಿಡಿ,
ಒಬ್ಬರ ವಿರುದ್ಧ ಒಬ್ಬರು ಬಂದೂಕು ಹಿಡಿವ ನಾವೆಲ್ಲ
ಹೊಲಸುಗೊಳಿಸುತ್ತೇವೆ ಮನುಜಭೂಮಿಯ.
ನಮ್ಮ ಸುಡು ಮದ್ದು, ಧೂಳಿನ ನರಕಗಳು
ಹೊರದೂಡಲಿವೆ ನಮ್ಮ ಸುತ್ತಲೆಲ್ಲ ಹರಡಿರುವ ನಮ್ಮದೇ ಉಸಿರಿನ ಮುಗ್ಧತೆಯ.

ನೆನಪಿಡಿ,
ಯಾರೂ ಪರದೇಶೀಯರಲ್ಲ,
ಯಾವ ನೆಲವೂ ಗೊತ್ತಿಲ್ಲದಲ್ಲ.

******************

3 thoughts on “ಯಾರೂ ಪರದೇಶೀಯರಲ್ಲ..

  1. Excellant! ಸಮತಾ ಅವರೇ, ಭಾಷಾಂತರ ಆದರೂ ಈ ಕವನ ನಿಮ್ಮದೇ ಎನಿಸುವಷ್ಟು ಸೊಗಸಾಗಿದೆ. ಮತ್ತು ಸದ್ಯದ ಜಗದ ಪರಿಸ್ಥಿತೆಯಲ್ಲಿ ಬಹಳ ರಿಲೆವೆಂಟ್ ಅನ್ನಿಸುತ್ತದೆ. ಅಭಿನಂದನೆಗಳು.
    ದಯಮಾಡಿ ಇದರ ಇಂಗ್ಲೀಷ್ ಶೀರ್ಷಿಕೆ ತಿಳಿಸುವಿರಾ?

    1. Thank you sir..
      Here is the original…

      No men are Foreign…

      Remember, no men are strange, no countries foreign Beneath all uniforms, a single body breathes Like ours: the land our brothers walk upon Is earth like this, in which we all shall lie.

      They, too, aware of sun and air and water,
      Are fed by peaceful harvests, by war’s long winter starv’d. Their hands are ours, and in their lines we read A labour not different from our own.

      Remember they have eyes like ours that wake
      Or sleep, and strength that can be won By love. In every land is common life
      That all can recognise and understand.

      Let us remember, whenever we are told
      To hate our brothers, it is ourselves
      That we shall dispossess, betray, condemn.

      Remember, we who take arms against each other
      It is the human earth that we defile.
      Our hells of fire and dust outrage the innocence
      Of airthat is everywhere our own,

      Remember,no men are foreign, and no countries strange.

      James Kirkup

Leave a Reply

Back To Top