ಒಂದು ಅನುವಾದಿತ ಕವನ

ಅನುವಾದ ಸಂಗಾತಿ

ಸಮತಾರವರಿಂದ ಕನ್ನಡ ಕವಿತೆಯ

ಇಂಗ್ಲೀಷ್ ಅನುವಾದ

ಕನ್ನಡ ಮೂಲ-ಶೋಭಾ ನಾಯ್ಕ

ಇಂಗ್ಲೀಷಿಗೆ-ಸಮತಾ ಆರ್.

My poem…

My poem is definitely
not for people like you.
Not even for those scholars
obsessed with the similies,
metaphors,images and rhymes.

It’s for the fathers like my father,
Who bathing whole day in sweat,
In the evening take a sip
to get rid of the backpain,
Sit silently leaning on
the deck of my home.

For mothers like my mother,
Who after grinding through
all the household chores,
hymns, decorations,
Bathe to get rid of the aches,
Emptying a boiler full of water,
Cry aloud even for the
Glycerine tears of the
Colourful movie world.

For the brothers like my brother,
Who don’t have an alphabet,
even if you break open their chest,
But work hard to build a life
with the money earned by selling
black wool fibre,sheep, hen.

For all my sisters,
younger and older,
Who smear their sweat
to cool off their burning scalp,
Smile hiding the burning fire
of their soul…

Now tell me,
Shall I become a poet,
Beading the meaningless words,
Writing hundreds of lines,
Which will never be understood
by my people ,
Who are the living poetry of this land.
Or shall I branch anew inside this soil
Where my roots are deeply hidden.


ನನ್ನ ಕವಿತೆ

ನನ್ನ ಕವಿತೆ
ನಿಮ್ಮಂಥವರಿಗಲ್ಲವೇ ಅಲ್ಲ
ರೂಪ -ಉಪಮೆ
ಪ್ರಾಸ ಪ್ರತಿಮೆಗಳನ್ನೆಲ್ಲ
ಹುಡುಕುಡ್ಹುಕಿ ಕೊಡುವ
ಪತ್ರ ಫಲಕಗಳಿಗೂ ಅಲ್ಲ

ದಿನವಿಡೀ ಬೆವರ ಮಿಂದು
ಸಂಜೆ ಬೆನ್ನ ನೋವಿಗೆಂದು
ಕೊಂಚ ಗುಟುಗೇರಿಸಿ, ಮಾತಿಲ್ಲದೆ
ಜಗುಲಿ ಕಟ್ಟೆಗೊರಗಿ ಬಿಡುವ
ನನ್ನಪ್ಪನಂಥ ಅಪ್ಪಂದಿರಿಗಾಗಿ

ಹಾಡು ಹಸೆ,ಕಸ ಮುಸುರೆ ಮುಗಿಸಿ
ಹಂಡೆ ನೀರು ಮಿಂದು ಹಗುರಾಗಿ
ಬಣ್ಣದ ಲೋಕದ
ಗ್ಲಿಸರಿನ್ ಹನಿಗೂ..
ಗೋಳೋ ಎಂದು ಅತ್ತೇ ಬಿಡುವ
ನನ್ನವ್ವನಂಥ ಅವ್ವಂದಿರಿಗಾಗಿ

ಎದೆ ಸಿಗಿದರೂ
ನಾಲ್ಕಕ್ಷರ ಕಾಣದ
ಕರಿ ಕಂಬಳಿ ಎಳೆಯಲ್ಲಿ
ಕುರಿ ಕೋಳಿ ಹಣದಲ್ಲಿ
ಬದುಕು ಕಟ್ಟುತ್ತಿರುವ
ಅಣ್ಣ ಕರಿಯಣ್ಣನಂಥವರಿಗಾಗಿ

ಸುಡು ನೆತ್ತಿಯ ತಂಪಿಗೆ
ಬೆವರನ್ನೇ ಸವರುತ್ತ
ಒಡಲಾಗ್ನಿಯ ಮುಚ್ಚಿಟ್ಟು
ಮುಖ ತುಂಬಾ ನಗು ಹೊತ್ತ
ನನ್ನಕ್ಕ ತಂಗಿಯರಿಗಾಗಿ

ಈಗ ಹೇಳಿ?
ಈ ನೆಲದ ಜೀವಂತ ಕಾವ್ಯಗಳಾಗಿರುವ
ಅವರಿಗೆ,ಅರ್ಥವಾಗದ ಪದ ಕಟ್ಡಿ
ನೂರೊಂದು ಸಾಲಾಗಿಸಿ
ಕವಿಯೆನಿಸಲೇನು?
ಇಲ್ಲ ನನ್ನ ಬೇರಡಗಿರುವ
ಈ ಮಣ್ಣಿನಡಿಯಲ್ಲಿ
ಹೊಸದೊಂದು ಟಿಸಿಲೊಡೆಯಲೇನು?

—————————-

9 thoughts on “ಒಂದು ಅನುವಾದಿತ ಕವನ

    1. ಶೋಭಾ ನಾಯ್ಕ ಹಿರೇಕೈ ಈ ನೆಲದ ಕವಯತ್ರಿ. ಆಕೆಯ ಕವನಗಳಲ್ಲಿ ಬಂಡಾಯದ ಬನಿ ಇದೆ. ಆಕೆಯ ಕವಿತೆಗಳ ಬೇರು ವಚನ ಸಾಹಿತ್ಯದಲ್ಲಿದೆ . ” ನನ್ನ ಕವಿತೆ ” ಯ ಮೂಲಕ , ಕವಿತೆ ಬರೆಯುವುದು ಪ್ರಶಸ್ತಿ ಸನ್ಮಾನಗಳಿಗಾಗಿ ಅಲ್ಲ. ಕೀರ್ತಿಗೂ ಅಲ್ಲ. ದುಡಿವ ಜನರಿಗಾಗಿ, ‌ಶ್ರಮಿಕ ವರ್ಗಕ್ಕೆ, ನೆಲದ ಜೀವಂತ ಕವಿತೆಗಳಿಗೆ ಎಂದು ತನ್ನ ಕಾವ್ಯದ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ದೊರೆಗೊಂದು ಪತ್ರ” ಎಂಬ ಶೋಭಾ ನಾಯ್ಕ ಕವಿತೆ ….ನನ್ನ ಕವಿತೆಯ ಮುಂದುವರಿದ ಭಾಗದಂತಿದೆ. ಕಾವ್ಯವನ್ನು ಪ್ರಾಮಾಣಿಕವಾಗಿ ಉಸಿರಾಡುವ ಶೋಭಾಗೆ ಕವಿತೆಯ ಹದ ದಕ್ಕಿದೆ.

      ಶಿಕ್ಷಕಿ ಸಮತಾ ಅವರ ಅನುವಾದ ತುಂಬಾ ಚೆನ್ನಾಗಿದೆ. ಸಮತಾ ಅವರು ಕಾವ್ಯದ ಧ್ವನಿಯನ್ನು ಇಂಗ್ಲಿಷ್ ನಲ್ಲಿ ಸೊಗಸಾಗಿ ಹಿಡಿದಿದ್ದಾರೆ. ಸಮರ್ಥವಾದ ಅನುವಾದ.

  1. ಶೋಭಾ,ಸಮತಾ..ಇಬ್ಬರಿಗೂ ಅಭಿನಂದನೆ. ಒಂದಕ್ಕಿಂತ ಒಂದು.ಚೆಂದ ಎನ್ನಿಸುವಷ್ಟು. ಮೂಲ ಕವಿತೆಯೂ,ಅನುವಾದವೂ

  2. ಸಮತಾರ ಸಮರ್ಥ ಅನುವಾದಕ್ಕೆ ಅತ್ಯತ್ತಮ ಕವಿತೆಯ ಆಯ್ಕೆ ಆಗಿದೆ. ಕವಿತೆಯ ಒಳದನಿ ಚೆನ್ನಾಗಿದೆ.ಅಭಿನಂದನೆಗಳು ಇಬ್ಬರಿಗು

  3. ಪ್ರೀತಿಯ ಸಮತಾ ಅವರೇ.. ನಿಮ್ಮ ಆಂಗ್ಲ ಭಾಷೆಯ ಹಿಡಿತವನ್ನು, ಅದರಲ್ಲಿನ ಗಟ್ಟಿ ತನವನ್ನು ಅಭಿನಂದಿಸುತ್ತಾ… ನಿಮ್ಮ ಕಾವ್ಯ ಪ್ರೀತಿಯನ್ನು ತುಂಬಾ ಮೆಚ್ಚಿಕೊಳ್ಳುವೆ. ನನ್ನ ಕನ್ನಡ ಕಾವ್ಯ ಕೂಸನ್ನು ಇತರ ಭಾಷಿಗರು ಓದುವಂತೆ ಮಾಡಿದ್ದೀರಿ. ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಹಾಗೇ ನಿಮ್ಮ ಅನುವಾದ ಕೂಡಾ ಅದ್ಭುತ. ನಿಮ್ಮ ಕಾರ್ಯ ಮುಂದುವರಿಯಲಿ. ಕಾವ್ಯ ಪ್ರೀತಿ ಇನ್ನೂ ಹೆಚ್ಚ ಲಿ

  4. ಪ್ರತಿಕ್ರಿಯಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು

Leave a Reply

Back To Top