ಅನುವಾದಿತ ಕವಿತೆ
ಮರಾಠಿಯ ಖ್ಯಾತ ಕವಿ ನಾಮದೇವಕೋಳಿ ಅವರ ಕವಿತೆಯೊಂದನ್ನು ಕನ್ನಡದ ಕವಿ ಕಮಲಾಕರ ಕಡವೆಯವರು ಸಂಗಾತಿಯ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದದಾರೆ
ಕತ್ತಲಿನ ಕವಿತೆ
ಮರಾಠಿಮೂಲ: ನಾಮದೇವಕೋಳಿ
ಕನ್ನಡಕ್ಕೆ: ಕಮಲಾಕರಕಡವೆ
ಸಾಧುವಿನ ಕುಲ ಹುಡುಕಬಾರದು
ನದಿಯ ಮೂಲ ಹುಡುಕಬಾರದು
ಕತ್ತಲೆಯ ಗೂಢ ಹುಡುಕಬಾರದು
ಇತಿಹಾಸದಲ್ಲಿಯೂ
ಕತ್ತಲೆಯ ಉಲ್ಲೇಖವಿದೆ
ಅರ್ಥಾತ್
ಕತ್ತಲೆಗೂಇತಿಹಾಸವಿದೆ
ಕತ್ತಲಲ್ಲಿ ಮೊಗ್ಗು ಹೂವಾಗುತ್ತದೆ
ಬಿಸಿಲಲ್ಲಿ ಹೂವುಗಳು ಚದುರಿಹೋಗುತ್ತವೆ
ಕತ್ತಲಲ್ಲಿ ಮನುಷ್ಯರು ಭೂತವಾಗುತ್ತಾರೆ
ಬಿಸಿಲಲ್ಲಿ ಭೂತಗಳು ಓಡಿಹೋಗುತ್ತವೆ
ಕತ್ತಲು
ನಿನಗೆ ಮೊದಲು
ಮತ್ತು ನಿನ್ನ ಬಳಿಕ
ಒಂದು ವಿಶ್ವಾಸದ ಸಂಗಾತಿ
ಕವಿತೆ ಅಂದೂ ಇತ್ತು
ಇಂದೂ ಇದೆ
ರಾತ್ರಿ ಹೊತ್ತು ದಟ್ಟ ಘನೀರ್ಭವಿಸಿದ
ಕತ್ತಲೆಯಂತೆ
ಪ್ರತಿ ದಿನವೂ ರಾತ್ರಿ
ಮನಸಿನಸುತ್ತ
ಹಬ್ಬುತ್ತದೆ ಕತ್ತಲೆಯ
ವ್ಯಾಧಿ
*******************************
ಚೆಂದ
ಚಂದ ಇದೆ