ಅನುವಾದಿತ ಕವಿತೆ
ಅಂಜಿಕೆ
ಮೂಲ…….ಖಲೀಲ್ ಗಿಬ್ರಾನ್
ಕನ್ನಡಕ್ಕೆ…….ಬೆಂಶ್ರೀ ರವೀಂದ್ರ
ನದಿಯೊಂದು ಸಮುದ್ರದೊಳಗೆ ಪ್ರವೇಶಿಸುವ ಮುನ್ನ
ಅಂಜಿಕೆಯಿಂದ ಅದುರುತ್ತದೆಂದು ಹೇಳುತ್ತಾರೆ.
ನದಿ ತಾ ಪಯಣಿಸಿದ ಹಾದಿಯತ್ತ ಹಿಂತಿರುಗಿ ನೋಡುತ್ತದೆ
ಪರ್ವತದ ಶಿಖರಗಳಿಂದ
ಉದ್ದನೆಯ ಅಂಕುಡೊಂಕಾದ ರಸ್ತೆ ದಾಟಿದೆ ಕಾಡು ಮತ್ತು ಹಳ್ಳಿಗಳನು
ಮತ್ತದರ ಮುಂದಿದೆ ಕಾಣುತ್ತಿದೆ
ವಿಶಾಲ ಸಾಗರವು
ಅದನ್ನು ಪ್ರವೇಶಿಸುವುದೆಂದರೆ
ಎಂದೆಂದಿಗೂ ಅದೃಶ್ಯವಾಗುವುದಲ್ಲದೆ ಬೇರೆಯಲ್ಲ
ಆದರೆ ಬೇರೆ ದಾರಿಯಿಲ್ಲ.
ನದಿ ಹಿಂತಿರುಗಿ ಹೋಗಲಾರದು.
ಯಾರೂ ಹಿಂತಿರುಗಿ ಹೋಗಲಾರರು.
ಹಿಂತಿರುಗಿ ಹೋಗುವುದು ಅಸಾಧ್ಯ ಅಸ್ತಿತ್ವದಲ್ಲಿ.
ಸಾಗರವನು ಪ್ರವೇಶಿಸುವಲ್ಲಿ
ನಷ್ಟ ಸಂಭವವನ್ನು ನದಿ ಅವಶ್ಯವಾಗಿ ತೆಗೆದುಕೊಳ್ಳಬೇಕು
ಯಾಕೆಂದರೆ ಹಾಗಾದಾಗ ಭಯ ಅದೃಶ್ಯವಾಗುವುದು
ಯಾಕೆಂದರೆ ಆ ಸಂದರ್ಭದಲಿ ನದಿಗೆ ತಿಳಿಯುವುದು
ಇದು ಸಾಗರದಲಿ ಕಾಣೆಯಾಗುವುದರ ಬಗ್ಗೆ ಅಲ್ಲ
ಆದರೆ ತಾನೆ ಸಾಗರವಾಗುವುದು.
*************************
ಹ್ಞಾ.ಮೂಲವನ್ನು ಧ್ವನಿಸುತ್ತದೆ- ಸ್ವಲ್ಪ ವಾಚ್ಯವಾಯಿತು ಅನ್ನಿಸುತ್ತದೆ